ಕಾರು-ಬಸ್ ನಡುವೆ ಭೀಕರ ಅಪಘಾತ-ಓರ್ವ ಸ್ಥಳದಲ್ಲೇ ಸಾವು
ಕಾಸರಗೋಡು- ಬಸ್ಸು ಮತ್ತು ಕಾರಿನ ನಡುವೆ ಉಂಟಾದ ಅಪಘಾತದಲ್ಲಿ ಓರ್ವ ಮೃತಪಟ್ಟ ಘಟನೆ ಗುರುವಾರ ಸಂಜೆ ಪೆರಿಯದಲ್ಲಿ ನಡೆದಿದೆ. ಪೆರಿಯ ನಡುವೆಟ್ಟ ಪಾರೆಯ ವೈಶಾಕ್(30) ಮೃತ ಪಟ್ಟವರು.
ಕಾರಿನಲ್ಲಿದ್ದ ಸಂಬಂಧಿಕರಾದ ಆರತಿ (26) ಎಂಬಾಕೆ ಎಂಬಾಕೆ ಗಾಯ ಗೊಂಡಿದ್ದಾರೆ. ಈಕೆಯನ್ನು ಗಂಭೀರ ಗಾಯಗಳೊಂದಿಗೆ ಕಣ್ಣೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ನಜ್ಜುಗುಜ್ಜಾದ ಕಾರಿನಲ್ಲಿ ಸಿಲುಕಿದ್ದ ಇಬ್ಬರನ್ನು ಹೊರತೆಗೆದು ಆಸ್ಪತ್ರೆಗೆ ತಲಪಿಸಿದರೂ ವೈಶಾಖ್ ಆಗಲೇ ಮೃತಪಟ್ಟಿದ್ದರು. ಕಾಸರಗೋಡು ಕಡೆಗೆ ಬರುತ್ತಿದ್ದ ಖಾಸಗಿ ಬಸ್ಸು ಮತ್ತು ಅಲ್ಟೋ ಕಾರು ಮುಖಾಮುಖಿ ಡಿಕ್ಕಿ ಹೊಡೆದು ಈ ಅಪಘಾತ ನಡೆದಿದೆ.
ಮೃತದೇಹ ವನ್ನು ಜಿಲ್ಲಾಸ್ಪತ್ರೆಯ ಶವಾಗಾರ ದಲ್ಲಿರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕ ರಿಗೆ ಬಿಟ್ಟು ಕೊಡಲಿದೆ. ವೈಶಾಖ್ ಪೆರಿಯ ಯದ ಇಂಟರ್ ಲಾಕ್ ಸಂಸ್ಥೆ ನಡೆಸಿಕೊಂಡು ಬರುತ್ತಿದ್ದರು.ಆರತಿ ಕಾಸರಗೋಡು ಕಾಲೇಜಿನ ಮೂರನೇ ಬಿಎಸ್ಸಿ ವಿದ್ಯಾರ್ಥಿನಿಯಾಗಿದ್ದಾಳೆ. ಡಿಕ್ಕಿಯ ರಭಸಕ್ಕೆ ಬಸ್ಸಿ ನಲ್ಲಿದ್ದ ಹತ್ತಕ್ಕೂ ಅಧಿಕ ಪ್ರಯಾಣಿಕರು ಗಾಯ ಗೊಂಡಿದ್ದಾರೆ. ಇವರು ಆಸ್ಪತ್ರೆಯ ಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.