ಭಟ್ಕಳದ ಮಾರುಕೇರಿಯಲ್ಲಿ ರಸ್ತೆಯಲ್ಲಿ ನಿಲ್ಲಿಸಿದ್ದ ಕೊಹಿಲಾ ಮಾಲೀಕತ್ವದ ಜನರೇಟರ್‌ಗೆ ಬೈಕ ಡಿಕ್ಕಿ – ಬೈಕ ಸವಾರ ಸ್ಥಳದಲ್ಲೇ ಸಾವು,
ಪೊಲೀಸರಿಂದ ಪ್ರಕರಣ ದಾಖಲು
ಭಟ್ಕಳ- ಮನೆಯ ಎದುರಿಗೆ ರಸ್ತೆ ಯಲ್ಲಿ ಅಜಾಗರುಕತೆಯಿಂದ ನಿಲ್ಲಿಸಿದ ಕೊಹಿಲಾ ಮಾಲೀಕತ್ವದ ಜನರೇಟರ್‌ಗೆ ಚಲಿಸುತ್ತಿದ್ದ ಪಲ್ಸರ್ ಬೈಕ್ ಸವಾರ ಡಿಕ್ಕಿ ಹೊಡೆದು ಪರಿಣಾಮ ಸ್ಥಳದಲ್ಲಿ ಮೃತಪಟ್ಟ ಘಟನೆ ಮಾರುಕೇರಿ ಕೋಟಖಂಡದಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿ ರಾಘ ಸಣ್ಣುಗೊಂಡ ಕೋಟಖಂಡ ನಿವಾಸಿ ಎಂದು ತಿಳಿದು ಬಂದಿದೆ. ಯಾವುದೇ ಸುರಕ್ಷತಾ ಕ್ರಮಗಳನ್ನು ಅಳವಡಿಸದೆ, ಜನರೇಟರ್‌ನ ಹಿಂದೆ ಮುಂದೆ ಯಾವುದೇ ರಿಫೆಕ್ಟರ್‌ನ್ನು ಅಳವಡಿಸದೇ , ಆಜಾಗರುಕತೆಯಿಂದ ಜನರೇಟರ್ ರಸ್ತೆ ಮಧ್ಯೆ ಇದ್ದುದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಮೃತ ಸವಾರ ಪಲ್ಸರ್ ಬೈಕ್ ಮೇಲೆ ಚಲಿಸುತ್ತಿದ್ದಾಗ ಜನರೇಟರ್ ಬಡಿದು ರಸ್ತೆಯ ಮೇಲೆ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾನೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ರಸ್ತೆ ಮದ್ಯೆ ಜನರೇಟರ್ ಅಜಾಗರುಕತೆಯಿಂದ ಇಟ್ಟಿದ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.