ಭಟ್ಕಳ -ಹೊನ್ನಾವರ ವಿಧಾನಸಭಾ ಜೆಡಿಎಸ್ ಅಭ್ಯರ್ಥಿ ಇನಾಯಿತುಲ್ಲಾ ಶಾಬಂದ್ರಿ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ
ಭಟ್ಕಳ- ಭಟ್ಕಳದ ಜೆಡಿಎಸ್ ಕಚೇರಿಯಲ್ಲಿ ಸೋಮವಾರ ಸಂಜೆ ಜೆಡಿಎಸ್ ಮುಖಂಡ ಇನಾಯಿತುಲ್ಲ ಶಾಬಂದ್ರಿ ಅವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪಂಚ ರತ್ನ ಯಾತ್ರೆ ಇದೆ ಬರುವ ದಿನಾಂಕ 8 ರಂದು ಕುಮಟಾ ಕ್ಕೆ ಅಗಮಿಸಲಿದ್ದು ಕುಮಟಾ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಪರ ಕುಮಟಾ ದಲ್ಲಿ ಸಭೆ ನಡೆಸಿ ಪ್ರಚಾರ ಕೈಗೊಂಡು ದಿನಾಂಕ 9 ರಂದು ಸಂಜೆ 6 ಗಂಟೆಗೆ ಭಟ್ಕಳ ಕ್ಕೆ ಆಗಮಿಸಿ ಭಟ್ಕಳದ ಹಳೆ ಬಸ್ ನಿಲ್ದಾಣದ ಸಾರ್ವಜನಿಕ ಮೈದಾನದಲ್ಲಿ ನಡೆಯುವ ಭಟ್ಕಳ ಜೆಡಿಎಸ್ ಬ್ರಹತ ಬಹಿರಂಗ ಸಮಾವೇಶ ದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಫೆಬ್ರುವರಿ 8 ಮತ್ತು 9 ರಂದು ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪಂಚ್ ರತ್ನ ಯಾತ್ರೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಭಟ್ಕಳ ಮತ್ತು ಹೊನ್ನವರಕ್ಕೆ ಅಗಮಿಸಲಿದ್ದು ಅಂದು ಜೆಡಿಎಸ್ ರಾಜ್ಯ ಅಧ್ಯಕ್ಷ ಸಿ.ಎಂ ಇಬ್ರಾಹಿಂ , ರಾಜ್ಯ ಮುಖಂಡರು ಬಹಿರಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳುಸಿದರು.
ಭಟ್ಕಳ ಜನತೆ ಈಗಾಗಲೇ ಶಾಸಕ ಸುನೀಲ್ ನಾಯ್ಕ ಕಾರ್ಯವೈಖರಿ ನೋಡಿ ಬೇಸತ್ತಿದ್ದಾರೆ.ಮಾಜಿ ಶಾಸಕ ಜೆ.ಡಿ.ನಾಯ್ಕ್ ಅವರನ್ನು ನೋಡಿ ಆಗಿದೆ, ಮಾಜಿ ಶಾಸಕ ಮಂಕಾಳ ವೈದ್ಯ ಅವರನ್ನು ನೋಡಿ, ನೋಡಿ ಬೇಸತ್ತಿದ್ದಾರೆ. ಮುಂಬರುವ 2023 ರ ವಿಧಾನಸಭಾ ಚುನಾವಣೆಯಲ್ಲಿ ನನಗೆ ಆಶೀರ್ವಾದ ಮಾಡಲಿದ್ದಾರೆ ಎಂದು ತಿಳುಸಿದರು.
ಭಟ್ಕಳದ ಮೊಗೇರ ರ ಎಸ್.ಸಿ ಜಾತಿ ಪ್ರಮಾಣ ವಿಚಾರ, ಗೊಂಡ ಸಮುದಾಯದ ಎಸ್.ಟಿ ಪ್ರಮಾಣ ಪತ್ರದ ವಿಚಾರ, ಅರಣ್ಯ ಅತಿಕ್ರಮಣದಾರರ ಸಮಸ್ಯೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗಮನಕ್ಕೆ ತರಲಾಗುವುದು ಎಂದು ತಿಳುಸಿದರು.ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಮುಟ್ಟಳ್ಳಿ ಗ್ರಾಮ ಪಂಚಾಯಿತ ಸದಸ್ಯ ದೇವಯ್ಯ ನಾಯ್ಕ, ಪುರಸಭಾ ಸದಸ್ಯ ಕೃಷ್ಣಾನಂದ ಪೈ, ಜೆಡಿಎಸ್ ಯುವ ಮುಖಂಡ ಪಾಂಡುರಂಗ ನಾಯ್ಕ ಮುರುಡೇಶ್ವರ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಗಣಪತಿ ಭಟ್ ಮುರುಡೇಶ್ವರ ಮುಂತಾದವರು ಉಪಸ್ಥಿತರಿದ್ದರು.