ಮಾಜಿ ಶಾಸಕ ಮಂಕಾಳ ವೈದ್ಯ ಶಾಸಕರಿರುವಾಗ ಅವರ ಸ್ವಂತ ಮೊಗೇರ ಸಮಾಜಕ್ಕೆ ಎಸ್.ಸಿ ಪ್ರಮಾಣ ಪತ್ರ ಕೊಡಿಸಲು ಯೋಗ್ಯತೆ ಇಲ್ಲ- ಈಗ ಬೇರೆ ಸಮುದಾಯದವರಿಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ ಜೆಡಿಎಸ್ ಅಭ್ಯರ್ಥಿ ಇನಾಯಿತುಲ್ಲ ಶಾಬಂದ್ರಿ ಗುಡುಗು
ಭಟ್ಕಳ-ಗುರುವಾರ ಸಂಜೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಭಟ್ಕಳಕ್ಕೆ ಆಗಮಿಸಿದ ಪಂಚ ರತ್ನ ಯಾತ್ರೆಯನ್ನು ಭಟ್ಕಳದಲ್ಲಿ ಭರ್ಜರಿಯಾಗಿ ಜೆಡಿಎಸ್ ಕಾರ್ಯಕರ್ತರು ಭಟ್ಕಳ ಜೆಡಿಎಸ್ ಮುಖಂಡ ಇನಾಯಿತುಲ್ಲ ಶಾಬಂದ್ರಿ ನೇತೃತ್ವದಲ್ಲಿ ಸ್ವಾಗತಿಸಿದರು. ನಂತರ ಭಟ್ಕಳದ ಹಳೆ ಬಸ್ ನಿಲ್ದಾಣದಲ್ಲಿ ಪಕ್ಕದ ಮೈದಾನದಲ್ಲಿ ನಡೆದ ಬಹಿರಂಗ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಯಿತು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಭಟ್ಕಳ ಮಲ್ಲಿಗೆಯ ಹೂವಿನ ಹಾರ ಹಾಕಿ ಭಟ್ಕಳ ಜೆಡಿಎಸ್ ಮುಖಂಡ ಇನಾಯಿತುಲ್ಲಾ ಶಾಬಂದ್ರಿ ಸ್ವಾಗತಿಸಿದರು.
ನಂತರ ಎಲ್ಲರನ್ನು ಸ್ವಾಗತಿಸಿ , ಪ್ರಾಸ್ತಾವಿಕವಾಗಿ ಮಾತನಾಡಿದ ಜೆಡಿಎಸ್ ಮುಖಂಡ ಇನಾಯಿತುಲ್ಲ ಶಾಬಂದ್ರಿ ಭಟ್ಕಳದಲ್ಲಿ ಅರಣ್ಯ ಅತಿಕ್ರಮಣದಾರರ ಸಮಸ್ಯೆ ಬಹಳ ವರುಶಗಳಿಂದ ಇದ್ದು , ಅದು ಸಮಸ್ಯೆ ಆಗಿಯೇ ಉಳಿದ್ದಿದ್ದು , ಇಲ್ಲಿ ಗೆದ್ದು ಬಂದ ಶಾಸಕರು ಸಮಸ್ಯೆ ಪರಿಹಾರ ಮಾಡಲು ವಿಫಲರಾಗಿದ್ದಾರೆ ಎಂದು ತಿಳಿಸಿದರು. ಶಾಸಕ ಸುನೀಲ್ ನಾಯ್ಕ ಕೊಡುಗೆ ಬರಿ ಭರವಸೆ ಆಗಿ ಉಳಿದಿದೆ ಎಂದು ಟೀಕಿಸಿದರು. ಶರಾಬಿ ಹೊಳೆಯ ನದಿ ಹೊಳೆತ್ತಿಸಲ್ಲು ಸಹ ಅವರಿಂದ ಸಾಧ್ಯ ಆಗಿಲ್ಲ , ಇದರಿಂದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗಿದೆ ಎಂದು ತಿಳಿಸಿದರು.ಅವರು ಭಟ್ಕಳದಲ್ಲಿ ಕೋಮು ಗಲಭೆ ಸ್ರಷ್ಟಿ ಮಾಡಲು ಕಾರಣ ಹುಡುಕುತ್ತಾ ಕಾಲಹರಣ ಮಾಡುತಿದ್ದಾರೆ ಎಂದು ಟೀಕಿಸಿದರು.
ಮಾಜಿ ಶಾಸಕ ಮಂಕಾಳ ವೈದ್ಯ ಅವರಿಂದ ಅವರು ಶಾಸಕರಿರುವಾಗ ಅವರ ಸ್ವಂತ ಮೊಗೇರ ಸಮಾಜದವರಿಗೆ ಎಸ್.ಸಿ ಪ್ರಮಾಣ ಪತ್ರ ಕೊಡಿಸಲು ಯೋಗ್ಯತೆ ಇಲ್ಲ, ಈಗ ಮೊಗೇರ ಸಮಾಜದವರು ಕಳೆದ 9 ತಿಗಳಿಂದ ಹೋರಾಟ ಮಾಡುತ್ತಿದ್ದಾರೆ , ಇನ್ನು ಅವರು ಬೇರೆ ಜಾತಿ ಗೊಂಡ , ಮತ್ತು ಮರಾಠಸಮುದಾಯದವರಿಗೆ
ಎಸ್.ಟಿ ಪ್ರಮಾಣ ಕೊಡಿಸುತೇನೆ ಎಂದು ಸುಳ್ಳು ಭರವಸೆ ನೀಡುತಾ ಮತೊಮ್ಮೆ ಗೆಲ್ಲಲು ಈಗ ನಾಟಕ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಅವರಿಗೆ ಯೋಗ್ಯತೆ ಇದ್ದರೆ 2013 ರಲ್ಲಿ ಶಾಸಕರಿದ್ದಾಗ ತಮ್ಮ ಮೊಗೇರ ಸಮುದಾಯದವರಿಗೆ ಎಸ್.ಸಿ ಪ್ರಮಾಣ ಪತ್ರ ಕೊಡಿಸಬೇಕಿತ್ತು ಎಂದು ಟೀಕಿಸಿದರು. ಭಟ್ಕಳದ ಗೊಂಡ ಮತ್ತು ಮರಾಠ ಸಮುದಾಯದವರಿಗೆ ಎಸ್.ಟಿ ಪ್ರಮಾಣ ಪತ್ರ ಸಮಸ್ಯೆ ಇದ್ದು , ತಾನು ಶಾಸಕನಾಗಿ ಗೆದ್ದು ಬಂದರೆ ಈ ಎಲ್ಲ ಸಮಸ್ಯೆ ಕುಮಾರ ಸ್ವಾಮಿ ಮುಖಾಂತರ ಬಗೆ ಹರಿಸುವುದಾಗಿ ತಿಳಿಸಿ ಭರವಸೆ ನೀಡಿದರು.
ನಂತರ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಜೆಪಿ ಪಕ್ಷದ ಅವರು ಕರಾವಳಿಯಲ್ಲಿ ಕೋಮು ಸಂಘರ್ಷ ಹುಟ್ಟು ಹಾಕಿ , ಮತೀಯ ವಿಚಾರದಲ್ಲಿ ಜನರ ಬಾವನೆಗಳ ಜೊತೆ ಆಟ ಆಡಿ ಮತೊಮ್ಮೆ ವಿಧಾನಸಬಾ ಚುನಾವಣೆ ಗೆಲ್ಲಲು ಹೊರಟಿದ್ದಾರೆ ಅದಕ್ಕೆ ಇಲ್ಲಿಯ ಅಲ್ಪಸಂಖ್ಯಾತ ಬಂಧುಗಳು ಮತ್ತು ಕರಾವಳಿ ಮಹಾ ಜನತೆ ಅವಕಾಶ ಕೊಡಬಾರದು ಮತ್ತು ನೀವೆಲ್ಲರೂ ಒಟ್ಟಾಗಿ ಮುಂಬರುವ 2024 ರ ಲೋಕಸಭೆ ಚುನಾವಣೆಯಲ್ಲಿ ಈ ದೇಶದಿಂದ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ಕೇಳಗಿಳಿಸಲು ಕೈ ಜೋಡಿಸಬೇಕು ಎಂದು ಕೈ ಮುಗಿದು ಮನವಿ ಮಾಡಿದರು. ಜೆಡಿಎಸ್ ನ ಪಂಚರತ್ನ ಯಾತ್ರೆ ಅಂಗವಾಗಿ ರಾಜ್ಯ ಎಲ್ಲಾ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು ಇನಾಯಿತುಲ್ಲಾ ಶಾಬಂದ್ರಿ ಅವರ ಮನವಿ ಮೇರೆಗೆ ಭಟ್ಕಳಕ್ಕೆ ಆಗಮಿಸಿದಾಗಿ ತಿಳಿಸಿದರು.ಇನ್ನು ಮುಂದೆ 2 ಬಾರಿ ಭಟ್ಕಳ ಚನಾವನೆ ಪ್ರಚಾರಕ್ಕೆ ಆಗಮಿಸುವುದಾಗಿ ತಿಳಿಸಿದರು.
ತಮ್ಮ ಗೌಡ ಸಮಾಜ ಒಗ್ಗಟ್ಟಿನಿಂದ ಈ ಬಾರಿ ಇನಾಯಿತುಲ್ಲ ಶಾಬಂದ್ರಿ ಅವರಿಗೆ ಹೊನ್ನವಾರ ಮತ್ತು ಭಟ್ಟಳದಲ್ಲಿ ಬೆಂಬಲಿಸಲು ಮುಂದೆ ಬಂದಿದ್ದು ಅವರು ಭಟ್ಕಳ ತಂಜಿಮ್ ಸಹಕಾರ ಪಡೆದು ಚುನಾವಣೆಗೆ ಸ್ಫರ್ಧೆ ಮಾಡಿದರೆ ತಾನು ಅವರನ್ನು ಈ ಬಾರಿ ಭಟ್ಕಳ ಕ್ಷೇತ್ರದಿಂದ ಇನಾಯಿತುಲ್ಲ ಅವರನ್ನು ಗೆಲ್ಲಿಸಿಕೊಂಡು ಬಂದು ಶಾಸಕರನ್ನಾಗಿ ಮಾಡುವ ಜವಾಬ್ದಾರಿ ವಹಿಸಿಕೊಂಡು , ಗೆಲ್ಲಿಸುವ ಭರವಸೆ ನೀಡಿದ್ದರು. ವೇದಿಕೆಯಲ್ಲಿ ತಮ್ಮ ಭಾಷಣದ ನಡುವೆ ಗೊಂಡ ಮತ್ತು ಮರಾಠ ಸಮುದಾಯದ ಜಾತಿ ಪ್ರಮಾಣದ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ವೇದಿಕೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ, ಕುಮಟಾ ಕ್ಷೇತ್ರದ ಜೆಡಿಎಸ್ ಎಂ.ಎಲ್.ಎ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ, ಮಾಜಿ ವಿಧಾನ ಪರಿಸತ್ತು ಸದಸ್ಯ ರಮೇಶ್ ಗೌಡ, ಜೆಡಿಎಸ್ ಭಟ್ಕಳ ತಾಲೂಕ ಅಧ್ಯಕ್ಷ ವಕೀಲ ರಾಜವರ್ಧನ ನಾಯ್ಕ, ಗೊಂಡ ಸಮಾಜ ಅಧ್ಯಕ್ಷರು , ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗಣಪತಿ ಭಟ್ ಮುರುಡೇಶ್ವರ, ಮುಖಂಡ ವೆಂಕಟೇಶ್ ನಾಯ್ಕ ದೇವಯ್ಯ ನಾಯ್ಕ , ಭಟ್ಕಳ ಜೆಡಿಎಸ್ ಅಬ್ಯರ್ಥಿ ಇನಾಯಿತುಲ್ಲಾ ಶಾಬಂದ್ರಿ ಮುಂತಾದವರು ಉಪಸ್ಥಿತರಿದ್ದರು.