ರೈಲ್ವೆ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ
ಭಟ್ಕಳ-ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ವ್ಯಕ್ತಿನೊರ್ವ ರೈಲ್ವೆ ಹಳಿಗೆ ತಲೆ ಕೊಟ್ಟು ಸಾವನ್ನಪ್ಪಿರುವ ಘಟನೆ ಶಿರಾಲಿ ಚಿತ್ರಪುರ ರೈಲ್ವೆ ನಿಲ್ದಾಣ ಸಮೀಪ ನಡೆದಿದೆ.
ಮೃತ ವ್ಯಕ್ತಿ ವಾಸು ಬೆರ್ಮು ನಾಯ್ಕ 37 ವರ್ಷದ ಮೂಡ ಶಿರಾಲಿ ನಿವಾಸಿ ಎಂದು ತಿಳಿದು ಬಂದಿದೆ.
ಜೀವನದಲ್ಲಿ ಜಿಗುಪ್ಸೆಗೊಂಡು ಶಿರಾಲಿ ಚಿತ್ರಪುರ ರೈಲ್ವೆ ನಿಲ್ದಾಣ ಸಮೀಪ ಮಂಗಳೂರು ನಿಂದ ಮುಂಬೈ ಸಾಗುವ ಸಿ.ಎಸ್.ಟಿ ರೈಲಿಗೆ ತಲೆ ಕೊಟ್ಟು ಕುತ್ತಿಗೆ ಮದ್ಯ ಹಾದು ಹೋಗಿ ದೇಹದಿಂದ ಕುತ್ತಿಗೆ ಬೇರ್ಪಟ್ಟು ಸಾವನ್ನಪ್ಪಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಠಾಣೆ ಸಿ.ಪಿ.ಐ ಚಂದನ ಗೋಪಾಲ,ರೈಲ್ವೆ ಪಿಎಸ್ಐ ಜಸ್ಟಿನ್ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಮೃತನ ಸೋದರ ಗೋಪಾಲ ನಾಯ್ಕ ದೂರು ನೀಡಿದ್ದು ದೂರನ್ನು ದಾಖಲಿಸಿ ಕೊಂಡು ಪಿ.ಎಸ್.ಐ ಶ್ರೀಧರ್ ನಾಯ್ಕ ತನಿಖೆ ಕೈಗೊಂಡಿದ್ದಾರೆ.