ಭಟ್ಕಳ-೨೦೨೩ ನೇ ಸಾಲಿನ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ನಾನು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವ ಇಚ್ಛೆ ಹೊಂದಿದ್ದು,
ಸ್ಪರ್ಧಿಸಲು ಇಚ್ಚಿಸುವ ಆಕಾಂಕ್ಷಿಗಳ ಪಟ್ಟಿಯಲ್ಲಿ ತನ್ನ ಹೆಸರನ್ನು ನಮೂದಿಸುವ ಕುರಿತು ಶಂಕರ ನಾಯ್ಕ ಚೌತನಿ , ಭಟ್ಕಳ ಅವರು ಬಿ.ಜೆ.ಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯಕ, ಭಟ್ಕಳ ತಾಲೂಕ ಅಧ್ಯಕ್ಷ ಸುಬ್ರಾಯ ದೇವಡಿಗ, ಹೊನ್ನಾವರ ತಾಲೂಕ ಅಧ್ಯಕ್ಷ ರಾಜೇಶ್ ಭಂಡಾರಿ ಅವರನ್ನು ಸಾಮಾಜಿಕ ಜಾಲತಾಣ ಮತ್ತು ಮಾದ್ಯಮ ಮೂಲಕ ಪತ್ರ ಬರೆದು ಆಗ್ರಹಿಸಿದ್ದಾರೆ.
ತನ್ನ ಬಿಜೆಪಿ ಸದಸ್ಯತ್ವದ ಸಂಖ್ಯೆ ೧೦೯೬೪೩೩೭೪೬ ಆಗಿದ್ದು,
ನಾನು ಕಳೆದ ೨೦ ವರ್ಷಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಸ್ತಿನ ಸಿಪಾಯಿ ಆಗಿದ್ದು ಸಂಘ ಪರಿವಾರದ ಹಲವಾರು ಸಂಘಟನೆಗಳಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿರುತ್ತೇನೆ.
ಒಂದು ಅವಧಿಯಲ್ಲಿ ಭಾರತೀಯ ಜನತಾ ಪಕ್ಷದ ಭಟ್ಕಳ ತಾಲೂಕು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷನಾಗಿ ಕೆಲಸ ಮಾಡಿದ್ದೂ ಇರುತ್ತದೆ.
ಹಿಂದುತ್ವ,ರಾಷ್ಟ್ರೀಯತೆ,ಸಾಮಾಜಿಕ ನ್ಯಾಯ,ಸಾಮಾಜಿಕ ಹೋರಾಟ ಮತ್ತು ನಾಡು ನುಡಿಯ ರಕ್ಷಣೆಗಾಗಿ ಪರಿವಾರದ ಸಂಘಟನೆಗಳು ಮತ್ತು ಪಕ್ಷ ಕರೆ ಕೊಟ್ಟಾಗ ನಿಸ್ವಾರ್ಥದಿಂದ ಆ ಹೋರಾಟದಲ್ಲಿ ಭಾಗಿಯಾಗಿ ಕೇಸ್ ಕೋರ್ಟ್ ಜೈಲು ವಾಸವನ್ನು ಅನುಭವಿಸಿದ್ದೂ ಇರುತ್ತದೆ.
ಇದೇ ತನ್ನ ವಿನಂತಿ ಪತ್ರವೆಂದು ಪರಿಗಣಿಸಿ ಮತ್ತು ನನ್ನ ಎಲ್ಲಾ ಹೋರಾಟವನ್ನು ಸಾಮಾಜಿಕ ಸೇವೆಯನ್ನು ಹಾಗೂ ಪಕ್ಷ ಸಂಘಟನೆಗಾಗಿ ನಾನು ನಿಭಾಯಿಸಿದ ಕರ್ತವ್ಯವನ್ನು ಪರಿಗಣಿಸಿ ಮತ್ತು ವಿಶೇಷವಾಗಿ ನನ್ನ ವೈಯಕ್ತಿಕ ಚಾರಿತ್ರ್ಯವನ್ನು ಹಾಗೂ ನನ್ನ ಕಳಂಕ ರಹಿತ ವ್ಯಕ್ತಿತ್ವವನ್ನು ಪರಿಗಣಿಸಿ ಈ ಬಾರಿಯ ೨೦೨೩ ರ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಶಾಸಕ ಸ್ಥಾನಕ್ಕೆ ಸ್ಪರ್ಧಿಸ ಬಯಸುವ ಆಕಾಂಕ್ಷಿಗಳ ಪಟ್ಟಿಯಲ್ಲಿ ನನ್ನ ಹೆಸರನ್ನೂ ನಮೂದಿಸಿ ತಾವುಗಳು ಹೈಕಮಾಂಡ್ ಗಮನಕ್ಕೆ ತರಬೇಕೆಂದು ನಾನು ತಮ್ಮೆಲ್ಲರಲ್ಲಿ ಈ ಮೂಲಕ ವಿನಮ್ರವಾಗಿ ಪ್ರಾರ್ಥಿಸುತ್ತೇನೆ.
ಈ ಪತ್ರದ ಯಥಾ ನಕಲನ್ನು ತಮ್ಮೆಲ್ಲರಿಗೂ ವಾಟ್ಸಾಪ್ ಮೂಲಕವೂ ಕಳಿಸಿದ್ದೇನೆ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷರಾದ BJP INDIA J.P.Nadda ಅವರಿಗೂ ಕೇಂದ್ರ ಗೃಹ ಮಂತ್ರಿಗಳಾದ Amit Shah ಅವರಿಗೂ ಮತ್ತು ನಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿಗಳಾದ Narendra Modi ಜಿ ಅವರಿಗೂ ಕಳುಹಿಸಿದ್ದೇನೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಶಂಕರ್ ನಾಯ್ಕ ಚೌತನಿ ಬಿ.ಜೆ.ಪಿ ರಾಜ್ಯ ,ಜಿಲ್ಲಾ ಮತ್ತು ತಾಲೂಕ ಮುಖಂಡರನ್ನು ಆಗ್ರಹಿಸಿದ್ದಾರೆ.