ಅರಣ್ಯವಾಸಿಗಳ ಬೃಹತ್ ರ‍್ಯಾಲಿ, ಮೂರು ತಾಸು ಅರಣ್ಯ ಕಚೇರಿಗೆ ಮುತ್ತಿಗೆ ;
ಅರಣ್ಯ ಸಿಬ್ಬಂದಿಗಳ ವಿರುದ್ಧ ತೀವ್ರ ಆಕ್ರೋಶ.
ಹೊನ್ನಾವರ: ಅರಣ್ಯವಾಸಿಗಳ ಸಮಸ್ಯೆ ಪರಿಹಾರಕ್ಕೆ ಅಗ್ರಹಿಸಿ ಬೃಹತ್ ರ‍್ಯಾಲಿ, ಹಿರಿಯ ಅಧಿಕಾರಿ ಆಗಮನಕ್ಕೆ ಒತ್ತಾಯಿಸಿ ಧರಣಿ, ಅರಣ್ಯ ಕಚೇರಿಗೆ ಮುತ್ತಿಗೆ, ಅರಣ್ಯ ಸಿಬ್ಬಂದಿಗಳ ದೌರ್ಜನ್ಯಕ್ಕೆ ತೀವ್ರ ಆಕ್ರೋಶ, ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ಘಟನೆಗಳು ಗೆರಸೊಪ್ಪ ವಲಯ ಅರಣ್ಯ ಕಚೇರಿ ಏದುರು ಜರುಗಿತು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಇಂದು ಹೊನ್ನಾವರ ತಾಲೂಕಿನ, ಗೆರಸೊಪ್ಪ ವಲಯ ಅರಣ್ಯ ಕಚೇರಿಯ ಆವರಣದಲ್ಲಿ ಜರುಗಿದ ಪ್ರತಿಭಟನೆಯೂ ವಿವಿಧ ಮಜಲುಗಳಲ್ಲಿ ಜರುಗಿ, ಹಿರಿಯ ಅರಣ್ಯ ಅಧಿಕಾರಿ ಸುದರ್ಶನ ಅವರ ಆಗಮನದ ನಂತರ ವಾತಾವರಣ ತಿಳಿಯಾಯಿತು.
ನಿರಂತರ ಅರಣ್ಯ ಸಿಬ್ಬಂದಿಗಳಿAದ ದೌರ್ಜನ್ಯ, ಕಿರುಕುಳ, ಮಾನಸಿಕ ಹಿಂಸೆ ಹಾಗೂ ದೈಹಿಕ ಹಲ್ಲೆಗಳಿಂದ ನೊಂದಿರುವ ಅರಣ್ಯ ಅತಿಕ್ರಮಣದಾರರು ಹಿಂಸಿಸಿದ ಅರಣ್ಯ ಸಿಬ್ಬಂದಿಗಳ ವಿರುದ್ಧ ತುರ್ತು ಕಾನೂನು ಕ್ರಮಕ್ಕೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಮಾರ್ಚ ೧೦ ರೊಳಗೆ ಸೂಕ್ತ ಕಾನೂನು ಕ್ರಮ ಜರುಗಿಸುವ ಭರವಸೆ ಎ.ಸಿ.ಎಫ್ ಸುದರ್ಶನ ಅವರು ನೀಡಿದರು ಹಾಗೂ ಅಭಯಾರಣ್ಯ ಕುರಿತು ಮಾಹಿತಿ ಕಾರ್ಯಗಾರವನ್ನ ಮುಂದಿನ ಎರಡು ವಾರಗಳಲ್ಲಿ ಜರುಗಿಸಲು ಕ್ರಮ ಜರುಗಿಸಲಾಗುವುದೆಂದು ಅವರು ಹೇಳಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ತಾಲೂಕ ಅಧ್ಯಕ್ಷರು ಚಂದ್ರಕಾAತ ಕೋಚರೆಕರ್ ಅವರು ಮಾತನಾಡಿದರು. ಜಿಲ್ಲಾ ಸಂಚಾಲಕ ರಾಮ ಮರಾಠಿ, ತಾಲೂಕ ಸಂಚಾಲಕ ಸುರೇಶ್ ನಾಯ್ಕ, ಮಾಭ್ಲೇಶ್ವರ ನಾಯ್ಕ ಬೇಡ್ಕಣಿ, ಸುರೇಶ್ ನಾಯ್ಕ ಗೆರಸೊಪ್ಪ, ದಿನೇಶ್ ನಾಯ್ಕ, ರಾಜು ನಾಯ್ಕ ಗೆರಸೊಪ್ಪ, ಸುನೀಲ್ ನಾಯ್ಕ ಸಂಪಖAಡ, ಗಣಪತಿ ಗೌಡ ಯಲಕೊಟಗಿ, ನಾಗರಾಜ ಮರಾಠಿ ಕೋಡಿಗದ್ದೆ, ವಿನೋಧ ನಾಯ್ಕ, ಮಂಜು ಮರಾಠಿ, ಗಣೇಶ್ ನಾಯ್ಕ ಯಲಕೊಟಗಿ, ರಾಮಚಂದ್ರ ನಾಯ್ಕ, ಸಂಕೇತ ನಾಯ್ಕ ಯಲಕೊಟಗಿ, ಕೃಷ್ಣ ಹಲಗೇರಿ, ಕಾರ್ಲೂಯಿಸ್ ಮಾವಿನಗುಂಡಿ ಮುಂತಾದವರು ನೇತ್ರತ್ವ ವಹಿಸಿದ್ದರು.
ದೌರ್ಜನ್ಯ ವಿರುದ್ಧ ತೀವ್ರ ಆಕ್ರೋಶ:
ಅರಣ್ಯ ಸಿಬ್ಬಂದಿಗಳ ದೌರ್ಜನ್ಯಗಳ ಚಿತ್ರಣದ ವಿಡಿಯೋ ಮತ್ತು ಪೋಟೋಗಳನ್ನ ಸಾಕ್ಷಿಕರಿಸಿ ಅರಣ್ಯ ಅತಿಕ್ರಮಣದಾರರು ಅರಣ್ಯ ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಳ್ಳುವ ಪ್ರಸಂಗಗಳು ಜರುಗಿತು. ಅಲ್ಲದೇ, ದೌರ್ಜನ್ಯ ವೆಸಗಿದ ಅರಣ್ಯ ಸಿಬ್ಬಂದಿಗಳನ್ನು ಹಾಜರುಪಡಿಸುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದಿರುವುದು ವಿಶೇಷವಾಗಿತ್ತು.