ಈ ಹಿಂದೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಬೆಂಬಲಿಗರು ಭಟ್ಕಳದ ಕೋಕ್ತಿ ನಾಗಬನಕ್ಕೆ ದನದ ಮಾಂಸ ಹಾಕಿ ನಾಗಬನ ಅಪವಿತ್ರಗೊಳಿಸಿದರು. ಭಟ್ಕಳ ಶಾಸಕ ಸುನೀಲ್ ನಾಯ್ಕ ಸುಳ್ಳು ಬುರುಕ- ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ ಗುಡುಗು
ಭಟ್ಕಳ-ಸೋಮವಾರ ಭಟ್ಕಳದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದು ಮಾತನಾಡಿದ ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಅವರು 2017 ರಲ್ಲಿ ಮಂಕಾಳ ವೈದ್ಯ ಅವರು ಶಾಸಕರಾಗಿದ್ದ ಅವಧಿಯಲ್ಲಿ ಭಟ್ಕಳದ ರಾಜಾಂಗನ ನಾಗಬನ ಅಭಿವೃದ್ಧಿ ಗೆ 7.50 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದರು. ಈಗ ಶಾಸಕ ಸುನೀಲ್ ನಾಯ್ಕ ತಾನು ನಾಗಬನ ಅಭಿವೃದ್ಧಿ ಹಣ ಮಂಜೂರು ಮಾಡಿಸಿಕೊಂಡು ಬಂದಿರುವುದಾಗಿ ತಪ್ಪು ಮಾಹಿತಿ ನೀಡಿ ಜನರಿಗೆ ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ತಿಳುಸಿದರು. ನಂತರ ಮಾತನಾಡಿದ ಅವರು ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಭಟ್ಕಳದ ಕೋಕ್ತಿ ನಾಗಬನಕ್ಕೆ ಬಿಜೆಪಿ ಅವರು ದನದ ಮಾಂಸ ಹಾಕಿ ನಾಗಬನ ಅಪವಿತ್ರಗೊಳಿಸಿ ರಾಜಕಾರಣ ಮಾಡಿದರು ಎಂದು ಹೇಳಿದರು. ಬಿಜೆಪಿ ಅವರಿಗೆ ಚುನಾವಣೆ ಸಂದರ್ಭದಲ್ಲಿ ಈ ನಾಗಬನ , ಚೌಡಿ ಮನೆ , ದೇವಸ್ಥಾನದ ವಿಚಾರದಲ್ಲಿ ರಾಜಕಿಯವಾಗಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ ಎಂದರು.
ಮೊನ್ನೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿಯವರು ಭಟ್ಕಳಕ್ಕೆ ಬಂದಾಗ ಶಾಸಕ ಸುನೀಲ್ ನಾಯ್ಕ ಮನೆಯಲ್ಲಿ ಮೀನು, ಮಾಂಸ ತಿಂದು ನಾಗಬನ, ಮತ್ತು ಕರಿಬಂಟ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿದ್ದೇನೆ ಎಂದು ಒಪ್ಪಿಕೊಂದಿದ್ದಾರೆ. ಆದರೆ ಶಾಸಕ ಸುನೀಲ್ ನಾಯ್ಕ ಈ ವಿಚಾರವಾಗಿ ಸುಳ್ಳು ಹೇಳಿ ಜನರಿಗೆ ಹಾದಿ ತಪ್ಪಿಸುತ್ತಿದ್ದಾರೆ ಎಂದರು.
ಮಂಕಾಳ ವೈದ್ಯರು ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡಾ 80 ರಷ್ಟು ದೇವಸ್ಥಾನ , ನಾಗಬನ, ಮಠ ಮಂದಿರಗಳಿಗೆ ಸಹಾಯ ಧನ ನೀಡಿದ್ದರು , ಅವರು ಅದನ್ನು ಎಲ್ಲಿಯೂ ಕೂಡ ರಾಜಕೀಯವಾಗಿ ಬಳಸಿಕೊಂಡಿಲ್ಲ ಎಂದು ಹೇಳಿದರು.
ಶಾಸಕ ಸುನೀಲ್ ನಾಯ್ಕ ಎಷ್ಟು ಮಠ , ಮಂದಿರಗಳಿಗೆ ಸಹಾಯ ಮಾಡಿದ್ದಾರೆ ಮತ್ತೆ ಮಂಕಾಳ ವೈದರು ಎಷ್ಟು ಮಾಡಿದ್ದಾರೆ ನೋಡನ ಸುನೀಲ್ ನಾಯ್ಕ ಮಾದ್ಯಮದವರ ಎದುರಿಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಮಂಕಾಳ ವೈದೃರು ಶಾಸಕರಿದ್ದಾಗ ಈ ಹಿಂದೆ ತಂದ 900 ಕೋಟಿ ರೂಪಾಯಿ ಅನುದಾನವನ್ನು ಸುನೀಲ್ ನಾಯ್ಕ ಗುದ್ದಲಿ ಪೂಜೆ ನೆರವೇರಿಸಿ ತಾವು ತಂದ ಅನುದಾನ ಎಂದು ಸುಳ್ಳು ಹೇಳಿ ಜನರಿಗೆ ಹಾದಿ ತಪ್ಪಿಸುತ್ತಿದ್ದಾರೆ ಎಂದು ತಿಳಿಸಿದರು.ಇದಕ್ಕೆ ತಮ್ಮ ಹತ್ತಿರ ದಾಖಲೆ ಇದೆ ಎಂದು ತಿಳಿಸಿದರು.
ಭಟ್ಕಳದ ಆಡಳಿತ ಸೌದಾದಲ್ಲಿ ಶಾಸಕರ ಕಚೇರಿ ಆರಂಭ ಆಗಿ 4 ವರುಷಗಳು ಆದರೂ ಒಮ್ಮೆ ಕೂಡ ಶಾಸಕರು ಅಲ್ಲಿ ಹೋಗಿಲ್ಲ, ಕಚೇರಿಗೆ ದೂಳು ಹಿಡಿದಿದೆ ಎಂದರು. ಶಾಸಕರು ಭಟ್ಕಳ ಕ್ಷೇತ್ರದಲ್ಲಿ ಜನ ಸಾಮಾನ್ಯರಿಗೆ ಕೈ ಗೆ ಸಿಗುವುದಿಲ್ಲ , ಅವರು ಸುಳ್ಳು ಹೇಳುತ್ತಾ ಜನರಿಗೆ ಮರಳು ಮಾಡುತ್ತ ಕಾಲ ಕಳೆಯುತ್ತಿದ್ದಾರೆ ಎಂದರು. ನಮ್ಮ ಭಟ್ಕಳ ಕ್ಷೇತ್ರ ಯಾವಾಗಲೂ ಇಂತಹ ಸುಳ್ಳು ಬುರುಕ ಶಾಸಕನನ್ನು ನೋಡಿಲ್ಲ ಎಂದು ಹೇಳಿದರು. ಭಟ್ಕಳ- ಹೊನ್ನವಾರ ವಿಧಾನಸಭಾ ಕ್ಷೇತ್ರದ ಜನತೆ ಮತ್ತೋಮ್ಮೆ ಈ ಸುಳ್ಳು ಬುರುಕ ಶಾಸಕ ಸುನೀಲ್ ನಾಯ್ಕ ಅವರ ಸುಳ್ಳಿಗೆ ಮರುಳಾಗಿ ಮೋಸ ಹೋಗಬಾರದೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಪತ್ರಿಕಾಘೋಸ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಂಜುನಾಥ್ ನಾಯ್ಕ ಬೆಳಕೆ, ಗೋಪಾಲ್ ನಾಯ್ಕ , ದೇವಿದಾಸ್ ಆಚಾರಿ, ರಮೇಶ್ ನಾಯ್ಕ , ರಮೇಶ ಗೊಂಡ, ಸುರೇಶ್ ನಾಯ್ಕ, ವಿಠಲ್ ನಾಯ್ಕ, ವೆಂಕಟ್ರಮಣ ನಾಯ್ಕ, ವಿಷು ದೇವಾಡಿಗ, ಕಾಂಗ್ರೆಸ್ ನ ವಿವಿಧ ಘಟಕಗಳ ತಾಲೂಕ ಅಧ್ಯಕ್ಷರು ಉಪಸ್ಥಿತರಿದ್ದರು.