ಮಂಗಳೂರು-ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲ್ಲಡ್ಕ ಬಾಳ್ತಿಲ ಬಳಿ ನಡೆದಿದೆ.
ಬಾಳ್ತಿಲ ಚಂದ್ರಶೇಖರ ಗೌಡ ಮತ್ತು ಸೌಮ್ಯ ದಂಪತಿಯ ಪುತ್ರಿ ವೈಷ್ಣವಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿ.
ಕಲಿಕೆಯಲ್ಲಿ ಪ್ರತಿಭಾವಂತೆಯಾಗಿದ್ದ ಬಾಲಕಿ ದ್ವಿತೀಯ ಪಿಯುಸಿ ಪರೀಕ್ಷೆ ಹಿನ್ನೆಲೆ ಕಾಲೇಜಿಗೆ ಹೋಗಿ ಅಲ್ಲಿಂದ ವಾಪಾಸ್ಸು ಏನೋ ಮರೆತು ಬಂದಿರುವುದಾಗಿ ಹೇಳಿ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಘಟನೆಯಿಂದ ಕುಟುಂಬ ಆಘಾತಕ್ಕೆ ಒಳಗಾಗಿದೆ.