ಭಟ್ಕಳ-ಯಾವುದೇ ದಾಖಲೇ ಇಲ್ಲದೆ ಮನೆಯಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ವೇಳೆ ಭಟ್ಕಳ ನಗರ ಠಾಣೆ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿದ ಘಟನೆ ಉಮರ್ ಸ್ಟ್ರೀಟ್ ೧ ನೆ ಕ್ರಾಸ್ ನಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಜಹೀರ್ ಅಹ್ಮದ್ ಸುಲೇಮಾನ ಹಾಗೂ ದಾದಾಪೀರ್ ಶಫಿ ಅಹ್ಮದ್ ಎಂದು ಗುರುತಿಸಲಾಗಿದೆ. ಇವರು ಉಮರ್ ಸ್ಟ್ರೀಟ್ ೧ ನೆ ಕ್ರಾಸ್ ಎದುರು ಇರುವ ಮನೆಯಲ್ಲಿ ಯಾವುದೇ ಪರವಾನಿಗೆ ಹೊಂದದೆ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಜಾನುವಾರು ಕಟಾವು ಮಾಡಿ ಮಾರಾಟ ಮಾಡುತ್ತಿದ್ದ ವೇಳೆ ಭಟ್ಕಳ ನಗರ ಠಾಣೆ ಪಿ.ಎಸ್.ಐ ಸಂತೋಷ ಕುಮಾರ್ ಎಂ. ದಾಳಿ ನಡೆಸಿ ೨೦ ಸಾವಿರ ಮೌಲ್ಯದ ೬೦ ಕೆಜಿ ಆಗುವಷ್ಟು ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.