ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಂಕಾಳ ವೈದ್ಯ ಆಯ್ಕೆ- ಜಿಲ್ಲೆಯಲ್ಲಿ ಮಂಕಾಳ ರ ಪರ್ವ ಆರಂಭ
ಭಟ್ಕಳ- ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಭಟ್ಕಳ-ಹೊನ್ನಾವರ ಶಾಸಕ ಮಾಂಕಾಳ್ ವೈದ್ಯ ಶುಕ್ರವಾರ ಆಯ್ಕೆಯಾಗಿದ್ದಾರೆ.
ಭಟ್ಕಳ-ಹೊನ್ನಾವರ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಅತಿ ಹೆಚ್ಚು ಮತಗಳನ್ನು ಪಡೆದು ಎರಡನೇ ಅವಧಿಯ ಶಾಸಕರಾಗಿರುವ ಮಾಂಕಾಳ್ ವೈದ್ಯ ಅವರು ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮೀನುಗಾರಿಕೆ ಮತ್ತು ಬಂದರು ಸಚಿವರಾಗಿ ಕಾರ್ಯ ನಿರ್ವಹಿಸುತಿದ್ದಾರೆ.
ಇವರು ಸಚಿವರಾಗುವುದರೊಂದಿಗೆ ಉ.ಕ. ಜಿಲ್ಲೆಯಲ್ಲಿ ಮಾಜಿ ಸಚಿವ ದೇಶಪಾಂಡೆ ಅವರ ಪರ್ವ ಕೊನೆಗೊಂಡು ಮಾಂಕಾಳ್ ವೈದ್ಯ ಅವರ ಪರ್ವ ಆರಂಭಗೊಂಡಂತಾಗಿದೆ.