ಲೋಕಸಭಾ ಚುನಾವಣೆ- ೨೦೨೪ ;
ಕಾಂಗ್ರೇಸ್ ಟಿಕೇಟ್‌ಗಾಗಿ ಹೋರಾಟಗಾರ ರವೀಂದ್ರ ನಾಯ್ಕ ಸ್ಫರ್ಧೇ.
ಭಟ್ಕಳ: ಇತ್ತಿಚಿಗಷ್ಟೇ ವಿಧಾನಸಭೆ ಚುನಾವಣೆ ಪಲಿತಾಂಶದಿAದ ಕಾಂಗ್ರೇಸ್ ಆಡಳಿತಕ್ಕೆ ಬಂದಿರುವ ಹಿನ್ನೆಲೆಯಲ್ಲಿ, ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷದಿಂದ ಪ್ರಥಮ ಹಂತದ ಚುನಾವಣೆ ಕಾರ್ಯ ಪ್ರಾರಂಭವಾಗಿದ್ದು ಎರಡೂ ಪಕ್ಷದಲ್ಲಿಯೂ ಅಭ್ಯರ್ಥಿಗಳ ಆಕಾಂಕ್ಷಿಗಳು ಟಿಕೇಟಿಗಾಗಿ ತೀವ್ರ ಸ್ಫರ್ಧೇಯಲ್ಲಿ ಇದ್ದರೇ, ಸಾರ್ವಜನಿಕವಾಗಿ ವಿವಿಧ ಪ್ರಮುಖರ ಹೆಸರುಗಳು ಚಾಲ್ತಿಗೆ ಬಂದಿದೆ. ಅವುಗಳಲ್ಲಿ ಕಳೆದ ಮೂರು ದಶಕಗಳಿಂದ ಜಿಲ್ಲೆಯ ಸಾಮಾಜಿಕ, ಅರಣ್ಯ ಭೂಮಿ ಹಕ್ಕು ಹೋರಾಟ, ಹಾಗೂ ರಾಜಕೀಯ ಚಟುವಟಿಕೆಗಳಿಂದ ಗುರುತಿಸಲ್ಪಟ್ಟ ರವೀಂದ್ರ ನಾಯ್ಕ ಹೆಸರು ಸೇರಲ್ಪಟ್ಟಿದೆ.
ಉತ್ತರ ಕನ್ನಡ ಆರು ವಿಧಾನಸಭಾ ಕ್ಷೇತ್ರ ಹಾಗೂ ಬೆಳಗಾಂವ ಜಿಲ್ಲೆಯ ಕಿತ್ತೂರು ಮತ್ತು ಕಾನಾಪುರ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಕೆನರಾ ಲೋಕಸಭಾ ಕ್ಷೇತ್ರದ ವ್ಯಾಪ್ತಿ ಹೊಂದಿದ್ದು ಇರುತ್ತದೆ. ಕ್ಷೇತ್ರದ ವ್ಯಾಪ್ತಿಯ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ನಿರಂತರ ಅರಣ್ಯ ಭೂಮಿ ಹಕ್ಕು ಹೋರಾಟದಿಂದ ಮನೆಮಾತಾಗಿರುವ ರವೀಂದ್ರ ನಾಯ್ಕರ ಹೆಸರು ಮುನ್ನೆಲೆಗೆ ಬರಲು ಕಾರಣವಾಗಿದೆ.
ಜಿಲ್ಲೆಯ ಅರಣ್ಯವಾಸಿಗಳ ಕುಟುಂಬಗಳಲ್ಲಿ ಎಂಭತ್ತು ಸಾವಿರದಷ್ಟು ಕುಟುಂಬವು ಅರಣ್ಯ ಪ್ರದೇಶವನ್ನು ಅವಲಂಭಿತವಾಗಿದ್ದು, ಅರಣ್ಯವಾಸಿಗಳ ಸೂರಿಗಾಗಿ ರವಿಂದ್ರ ನಾಯ್ಕ ಮೂರು ದಶಕಗಳ ಹೋರಾಟದಿಂದ ಇನ್ನೀತರ ಅಭ್ಯರ್ಥಿಗಳಿಗಿಂತ ಪ್ರಚಾರದಲ್ಲಿ ಮುಂದಿದ್ದಾರೆ.
ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರವು ಕಾಂಗ್ರೇಸ್ ತೆಕ್ಕೆಯಲ್ಲಿ ಇರುವುದರಿಂದ ಹಾಗೂ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಬಂದಿರುವುದರಿAದ, ಸಹಜವಾಗಿಯೇ ಕಾಂಗ್ರೇಸ್‌ನಲ್ಲಿ ಲೋಕಸಭೆಯ ಕ್ಷೇತ್ರದ ಅಭ್ಯರ್ಥಿಗೆ ತೀವ್ರ ಸ್ಪರ್ಧೇ ಉಂಟಾಗಿದೆ. ಆದರೆ, ರವೀಂದ್ರ ನಾಯ್ಕರ ಸಾರ್ವಜನಿಕ ಸಂಘಟನೆ, ಹೋರಾಟ, ಹಾಗೂ ಸಾರ್ವಜನಿಕ ಕಳಕಳಿಯ ಅಂಶಗಳು ಮತವಾಗಿ ಪರಿವರ್ತನೆಗೊಂಡಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ರವೀಂದ್ರ ನಾಯ್ಕ ಗೆಲ್ಲುವ ಕುದುರೆ ಎಂಬುದಾಗಿ ಸಾರ್ವಜನಿಕರ ಅಭಿಪ್ರಾಯವಾಗಿದೆ ಎಂದರೇ ತಪ್ಪಾಗಲಾರದು.