ಮುರುಡೇಶ್ವರ ಸಮುದ್ರ ತೀರದಲ್ಲಿ ಈಜಲು ತೆರಳಿದ ಬೆಂಗಳೂರು ಮೂಲದ ವಿದ್ಯಾರ್ಥಿ ಸಮುದ್ರದ ಅಲೆಗೆ ಸಿಲುಕಿ ನೀರು ಪಾಲಾಗಿ ಶವವಾಗಿ ಪತ್ತೆ
ಭಟ್ಕಳ- ಮುರುಡೇಶ್ವರ ಸಮುದ್ರ ತೀರದಲ್ಲಿ ಮಂಗಳವಾರ ಕೂಡ ಓರ್ವ ಪ್ರವಾಸಿಗ ಲೈಫ್ ಗಾರ್ಡ್‌ಗಳ ಸೂಚನೆ ಧಿಕ್ಕರಿಸಿ ಸಮುದ್ರಕ್ಕಿಳಿದ ನಂತರ ಅಲೆಗೆ ಸಿಲುಕಿ ನೀರು ಪಾಲಾಗಿ ಶವವಾಗಿ ಪತ್ತೆಯಾದ ಘಟನೆ ತಾಲೂಕಿನ ಮುರ್ಡೇಶ್ವರದಲ್ಲಿ ನಡೆದಿದೆ.
ಕಣ್ಮರೆಯಾದ ಯುವಕನ್ನು ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿ ನಿವಾಸಿ, ಇಂಜಿನಿಯರಿಂಗ್ ವಿದ್ಯಾರ್ಥಿ ಪವನ್ ನಾಯ್ಕ(20) ಎಂದು ಹೇಳಲಾಗಿದ್ದು,
ಈತ 6 ಜನ ಸ್ನೇಹಿತರೊಂದಿಗೆ ಮಂಗಳವಾರ ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ. ದೇವರ ದರ್ಶನ ಮುಗಿಸಿ ಸಮುದ್ರಕ್ಕೆ ಈಜಲು ಹೋದ ವೇಳೆ ಈ ದುರ್ಘಟನೆ ನಡೆದಿದೆ. ಸಮುದ್ರ ತೀರದಲ್ಲಿರುವ ಲೈಫ್ ಗಾರ್ಡ್ ಗಳ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಿದರೂ ಧಿಕ್ಕರಿಸಿ ಸಮುದ್ರಕ್ಕೆ ಇಳಿದು ಜೋರಾದ ಸಮುದ್ರದ ಅಲೆಗೆ ಸಿಲುಕಿ ನಾಪತ್ತೆಯಾಗಿ, ಇದೀಗ ಶವವಾಗಿ ಪತ್ತೆಯಾಗಿದ್ದಾನೆ.