ಆನ್‌ಲೈನ್ ಗೇಮ್ ಆಡುವ ಹುಚ್ಚಾಟಕ್ಕೆ ಬಿದ್ದು 65 ಲಕ್ಷ ರೂಪಾಯಿ ಕಳೆದುಕೊಂಡ ಮನನೊಂದು ಆತ್ಮಹತ್ಯೆಗೆ ಶರಣಾದ ಯುವಕ
ಶಿರಸಿ- ಆನ್‌ಲೈನ್ ನಲ್ಲಿ ಗೇಮ್ ಆಡುವ ಹುಚ್ಚಾಟಕ್ಕೆ ಬಿದ್ದು 65 ಲಕ್ಷಕ್ಕೂ ಹೆಚ್ಚು ಹಣವನ್ನು ಕಳೆದುಕೊಂಡ ಯುವಕ ಮನನೊಂದು ನೇಣಿಗೆ ಶರಣಾದ ಘಟನೆ ಶಿರಸಿ ತಾಲೂಕಿನ ಕುಳವೆಯಲ್ಲಿ ನಡೆದಿದೆ.
ವಿಜೇತ ಶಾಂತಾರಾಮ ಹೆಗಡೆ (37) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡವನಾಗಿದ್ದು,ಈತ ಮನೆಯಲ್ಲಿ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವನು ಆತ್ಮಹತ್ಯೆಗೆ ಶರಣಾಗಿದ್ದಾನೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.