*ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ವಾಕೋ ಕರ್ನಾಟಕ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಟ್ಕಳದ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ*.
ಮೈಸೂರು-ದಿನಾಂಕ:16-07-2023 ರ ರವಿವಾರದಂದು ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ವಾಕೋ ಕರ್ನಾಟಕ ಕಿಕ್ ಬಾಕ್ಸಿಂಗ್ ನಲ್ಲಿ
*ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಕಿಕ್ ಬಾಕ್ಸಿಂಗ್ ನ ವಿದ್ಯಾರ್ಥಿಗಳು ಮೂರನೆಯ ರಾಜ್ಯ ಮಟ್ಟದ ಜೂನಿಯರ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಐದು ಚಿನ್ನದ ಪದಕ,ಮೂರು ಬೆಳ್ಳಿಯ ಪದಕ ಎರಡು ಕಂಚಿನ ಪದಕಗಳಿಸಿದ್ದಾರೆ.* *ಚಿನ್ನದ ಪದಕ ಗಳಿಸಿದ್ದ ವಿದ್ಯಾರ್ಥಿಗಳು *ಜಾರ್ಖಂಡ್ ನ ರಾಂಚಿಯಲ್ಲಿ ನಡೆಯುವ ನಡೆಯುವ ರಾಷ್ಟ್ರಮಟ್ಟದ ಜೂನಿಯರ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದಾರೆ*.
*ಪದಕ ಗಳಿಸಿದ ವಿದ್ಯಾರ್ಥಿಗಳ ವಿವರಗಳು*.
7-9 ವರ್ಷದ ವಿಭಾಗ
*ಧನ್ವಿತಾ ವಾಸು ಮೊಗೇರ*-19ಕೆಜಿ ವಿಭಾಗದ ಪಾಯಿಂಟ್ ಫೈಟಿಂಗ್ ನಲ್ಲಿ ಚಿನ್ನದ ಪದಕ ಹಾಗೂ ಮ್ಯೂಸಿಕಲ್ ಫಾರ್ಮ್ ನಲ್ಲಿ ಬೆಳ್ಳಿಯ ಪದಕ
*ಆಧ್ಯಾ ರವಿ ನಾಯ್ಕ* -22ಕೆಜಿ ವಿಭಾಗದ ಪಾಯಿಂಟ್ ಫೈಟಿಂಗ್ ನಲ್ಲಿ ಚಿನ್ನದ ಪದಕ ಹಾಗೂ ಕ್ರಿಯೇಟಿವ್ ಫಾರ್ಮ್ ನಲ್ಲಿ ಬೆಳ್ಳಿಯ ಪದಕ.
10-12 ವರ್ಷದ ವಿಭಾಗ
*ಜೀವಲ್ ಭಾಸ್ಕರ ಮೊಗೇರ*
-28ಕೆಜಿ ವಿಭಾಗದ ಪಾಯಿಂಟ್ ಫೈಟ್ ನಲ್ಲಿ ಬೆಳ್ಳಿಯ ಪದಕ ಹಾಗೂ ಮ್ಯೂಸಿಕಲ್ ಫಾರ್ಮ್ ನಲ್ಲಿ ಐದನೇ ಸ್ಥಾನ.
*ಚಿರಾಗ್ ಮಹೇಶ ನಾಯ್ಕ*
-30ಕೆಜಿ ವಿಭಾಗದ ಪಾಯಿಂಟ್ ಫೈಟ್ ನಲ್ಲಿ ಕಂಚಿನ ಪದಕ,ಹಾಗೂ ಕ್ರಿಯೇಟಿವ್ ಫಾರ್ಮ್ ನಲ್ಲಿ ನಾಲ್ಕನೇ ಸ್ಥಾನ.
*ಜುರಾರ ಲೌನಾ* -42ಕೆಜಿ ಪಾಯಿಂಟ್ ಫೈಟ್ ನಲ್ಲಿ ಬೆಳ್ಳಿಯ ಪದಕ
*ಮೊಹಮ್ಮದ್ ದಾಮಿಲ್* +47ಕೆಜಿ ಪಾಯಿಂಟ್ ಫೈಟ್ ನಲ್ಲಿ ಚಿನ್ನದ ಪದಕ.
13-15 ವರ್ಷದ ವಿಭಾಗ
*ಲಿಖಿತಾ ಶಂಕರ ನಾಯ್ಕ* -47ಕೆಜಿ ಪಾಯಿಂಟ್ ಫೈಟ್ ಚಿನ್ನದ ಪದಕ
*ಯಶಸ್ ವಾಮನ ಮೊಗೇರ* -42ಕೆಜಿ ಪಾಯಿಂಟ್ ಫೈಟ್ ಐದನೇ ಸ್ಥಾನ
*ಲಿಖಿತ್ ಲಕ್ಷ್ಮಣ ದೇವಾಡಿಗ* ಕ್ರಿಯೆಟಿವ್ ಫಾರ್ಮ್ ನಲ್ಲಿ ಕಂಚಿನ ಪದಕ ಹಾಗೂ ಪಾಯಿಂಟ್ ಫೈಟ್ ನಲ್ಲಿ ಐದನೇ ಸ್ಥಾನ.
*ಮೊಹಮ್ಮದ್ ಯುಶಾ* -57ಕೆಜಿ ಪಾಯಿಂಟ್ ಫೈಟ್ ನಲ್ಲಿ ಚಿನ್ನದ ಪದಕ
ಈ ಎಲ್ಲಾ ವಿಜೇತ ಪಟುಗಳಿಗೆ ವಾಕೋ
ಕರ್ನಾಟಕ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ *ಸಂತೋಷ ಸರ್ ಮತ್ತು ಪ್ರಧಾನ ಕಾರ್ಯದರ್ಶಿಯಾದ ಪೂಜಾ ಹರ್ಷರವರು* *ಉತ್ತರ ಕನ್ನಡ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಈಶ್ವರ ಎನ್ ನಾಯ್ಕ ಹಾಗೂ ನಾಗಶ್ರೀ ಮಾರ್ಷಲ್ ಆರ್ಟ್ಸ್ & ಫಿಟ್ನೆಸ್ ನ ತರಬೇತುದಾರರಾದ ನಾಗಶ್ರೀ ವಿ ನಾಯ್ಕ ಮತ್ತು ಶೋಟೊಕಾನ್ ಸಂಸ್ಥೆಯ ಅಧ್ಯಕ್ಷರಾದ ಉಮೇಶ್ ಮೊಗೇರ ಸದಸ್ಯರಾದ ಮನೋಜ್ ನಾಯ್ಕ , ಸಂತೋಷ್ ಆಚಾರ್ಯ, ಚಂದ್ರು ನಾಯ್ಕ, ಏಲೀಯನ್ಸ್ ಮಾರ್ಷಲ್ ಆರ್ಟ್ಸ್ ನ ತರಬೇತುದಾರರಾದ ಇಸ್ಮಾಯಿಲ್ ಮತ್ತು ಪಾಲಕರು ಪೋಷಕರು ತುಂಬಾ ಹರ್ಷವನ್ನು ವ್ಯಕ್ತಪಡಿಸಿದ್ದಾರೆ*.