ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಕೊಲೆಯ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಶಿರಸಿ ಮಹಿಳಾ ಸಾಂತ್ವನ ವೇದಿಕೆಯಿಂದ ಉಪವಿಭಾಗಾಧಿಕಾರಿಗೆ ಮನವಿ
ಶಿರಸಿ: 2012ರಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಸಾಂತ್ವನ ವೇದಿಕೆಯಿಂದ ಉಪವಿಭಾಗಾಧಿಕಾರಿಗೆ ಮನವಿ ನೀಡಲಾಯಿತು.
2012ರಲ್ಲಿ ನಡೆದ ಸೌಜನ್ಯ ಕೊಲೆ ಅತ್ಯಂತ ಅಮಾನವೀಯ ಕೃತ್ಯ. ಬದುಕಿ ಬಾಳಬೇಕಿದ್ದ ಹುಡುಗಿ ಹೇಯವಾಗಿ ಸಾವನ್ನಪ್ಪಿದ್ದು ನಮ್ಮ ಸುಸಂಸ್ಕೃತ ಮತ್ತು ನಾಗರಿಕ ಜಗತ್ತು ತಲೆತಗ್ಗಿಸುವಂತಹ ಸಂಗತಿ. ನಮಗೆ ನಮ್ಮ ನ್ಯಾಯಾಂಗ ವ್ಯವಸ್ಥೆ ಮತ್ತು ಸಂವಿಧಾನದ ಮೇಲೆ ಸಂಪೂರ್ಣ ನಂಬಿಕೆಯಿದೆ. ಈ ಹಿನ್ನಲೆಯಲ್ಲಿ ಸೌಜನ್ಯ ಕೊಲೆ ಪ್ರಕರಣದ ಸಮಗ್ರ ತನಿಖೆ ನಡೆದು ಅಪರಾಧಿಗಳಿಗೆ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ. ವೇದಿಕೆಯ ಅಧ್ಯಕ್ಷೆ ಜ್ಯೋತಿ ಭಟ್ಟ, ಕಾರ್ಯದರ್ಶಿ ಶೈಲಜಾ ಗೋರ್ನಮನೆ, ಸಿಬ್ಬಂದಿ ಪಲ್ಲವಿ ಸೇರಿದಂತೆ ಅನೇಕರು ಉಪಸ್ಥಿತಿರಿದ್ದರು.