ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಕೇಂದ್ರ ಸರಕಾರ ಮರು ತನಿಖೆ ನಡೆಸಲಿ: ನಾವೇನು ಮಾಡಲು ಸಾಧ್ಯವಿಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ
ಉಡುಪಿ- ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ತನಿಖೆಯನ್ನು ಕೇಂದ್ರ ಸರಕಾರದ ಸಿಬಿಐ ಮಾಡಿರುವುದರಿಂದ ಪ್ರಕರಣದ ಮರು ತನಿಖೆಯನ್ನು ಕೇಂದ್ರ ಸರಕಾರ ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಉಡುಪಿಯಲ್ಲಿ ಮಾಧ್ಯಮ ಜತೆ ಮಾತನಾಡಿದ ಅವರು, ಪ್ರಶ್ನೆಯೊಂದಕ್ಕೆ ಉತ್ತರಿಸಿ ಪ್ರಕರಣವನ್ನು ನಾವು ಮರು ತನಿಖೆ ನಡೆಸಲು ಬರೋದಿಲ್ಲ ಎಂದರು.
ಕಾರ್ಕಳ ಬೈಲೂರಿನ ಪರಶುರಾಮ ಮೂರ್ತಿ ಕುರಿತು ಕೇಳಲಾದ ಪ್ರಶ್ನೆ ಉತ್ತರಿಸಿದ ಮುಖ್ಯಮಂತ್ರಿ, ಮೂರ್ತಿ ಅಸಲಿಯೋ? ಅಥವಾ ನಕಲಿಯೋ? ಎನ್ನುವುದರ ಕುರಿತು ತನಿಖೆ ನಡೆಸಲಾಗುವುದು ಎಂದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ‘ಕಲೆಕ್ಷನ್ ಮಾಸ್ಟರ್ ಆಫ್ ಕರ್ನಾಟಕ’ ಎಂದು ಅವಹೇಳನ ಮಾಡಿದ ಕುರಿತು ಮಾತನಾಡಿದ ಸಿದ್ದರಾಮಯ್ಯ ಅವರು, ಶಾಸಕ ಹರೀಶ್ ಪೂಂಜ ಅವರು ರಾಜಕೀಯದಲ್ಲಿ ಬಚ್ಚಾ. ಹರೀಶ್ ಪೂಂಜ ಅವರು ಶಾಸಕರಾಗಿದ್ದು ಮೊನ್ನೆ. ನಾನು 1983ರಿಂದ ಶಾಸಕನಾಗಿದ್ದೇನೆ. 1985ರಲ್ಲಿ ಸಚಿವನಾಗಿದ್ದೆ. ಆವತ್ತೂ ಯಾರೂ ಕರೆದಿಲ್ಲ. ಪೂಂಜ ರಾಜಕೀಯದಲ್ಲಿ ಬಚ್ಚಾ ಎಂದು ಅವರು ಹೇಳಿದರು.