ಭಟ್ಕಳ-ಕಟ್ಟಡ ಕಾರ್ಮಿಕರ ಮೂಲ ಕಾಯ್ದೆ 1996 ರ ವಿರುದ್ಧವಾಗಿ ಮಂಡಳಿಯ ದುಂದು ವೆಚ್ಚ , ಅದನ್ನು ನಿಯಂತ್ರಿಸಲು ಮುಖ್ಯಮಂತ್ರಿ ಗೆ ಎ.ಐ.ಟಿ.ಯು.ಸಿ ಕಾರ್ಮಿಕ ಸಂಘಟನೆಯಿಂದ ಮನವಿ ನೀಡಲಾಯಿತು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ 2006 ರಲ್ಲಿ ಸ್ಥಾಪನೆಯಾಗಿದ್ದು ಕಟ್ಟಡ ಕಾರ್ಮಿಕರಿಗೆ 19 ರೀತಿಯ ವಿವಿಧ ಸೌಲಭ್ಯಗಳನ್ನು ನೀಡುತ್ತಿದ್ದು ಈಗ 2021-22 ಮತ್ತು22 -23 ನೇ ಸಾಲಿನಲ್ಲಿ ಸಲ್ಲಿಸಿರುವ ಶೈಕ್ಷಣಿಕ ಅರ್ಜಿಗಳಿಗೆ ಇದುವರೆಗೂ ಧನಸಾಯ ಮಂಜೂರಿ ಆಗಲಿಲ್ಲ. 2023-24 ನೇ ಸಾಲಿನ ಶೈಕ್ಷಣಿಕ ಅರ್ಜಿ ಸ್ವೀಕೃತಿ ಇನ್ನೂ ಪ್ರಾರಂಭವಾಗಲಿಲ್ಲ, ಕಟ್ಟಡ ಕಾರ್ಮಿಕ ಮಕ್ಕಳು ಶೈಕ್ಷಣಿಕ ಧನ ಸಹಾಯ ಪಡೆಯಲಾಗದೆ ಶಿಕ್ಷಣ ವಂಚಿತರಾಗುತ್ತಿದ್ದಾರೆ, ಕಾರ್ಮಿಕರ ಮಕ್ಕಳು ಕೂಲಿ ಕೆಲಸಕ್ಕೆ ಹೊರಟಿದ್ದಾರೆ, ಹಿಂದೆ ಆಡಳಿತ ನಡೆಸಿರುವ ಬಿಜೆಪಿ ಸರ್ಕಾರ ಕಟ್ಟಡ ಕಾರ್ಮಿಕರ ಮೂಲ ಕಾಯ್ದೆ 1996 ವಿರುದ್ಧವಾಗಿ ಯಾವುದೇ ದೂರ ದೃಷ್ಟಿ ಇಲ್ಲದೆ ರಾಷ್ಟ್ರೀಯ ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚೆ ಮಾಡದೆ ಅವಿಜ್ಞಾನಕವಾದ ಯೋಜನೆಗಳನ್ನು ತಂದು ಹಲವಾರು ರೀತಿಯ ಯಾವುದೇ ಗುಣಮಟ್ಟ ಇಲ್ಲದ ಕಿಟ್ಟು ಕಾರ್ಮಿಕರಿಗೆ ನೀಡಿ ಸಾವಿರಾರು ಕೋಟಿ ರೂಪಾಯಿ ಮೂಲ ಕಲ್ಯಾಣ ಮಂಡಳಿಯ ನಿಧಿಯನ್ನು ದುರುಪಯೋಗ ಮಾಡಲಾಗಿದೆ, ಪ್ಲಂಬರ್ ಕಿಟ್, ಕಾರ್ಪೆಂಟರ್ ಕಿಟ್, ಪೈಂಟರ್ ಕಿಟ್,ಬಾರ್ ಬೆಂಡಿಂಗ್ ಕಿಟ್, ಮೆಷನ್ ಕಿಟ್, ಸ್ಕೂಲ್ ಕಿಟ್, ಟ್ಯಾಬ್, ಲ್ಯಾಪ್ಟಾಪ್ ,ಕಾರ್ಮಿಕರಿಗೆ ಬಸ್ ಪಾಸ್, ಶ್ರಮಿಕ ಸಂಜೀವಿನಿ ಸಂಚಾರಿ ಚಿಕಿತ್ಸಾ ಸೇವೆ, ಕಾರ್ಮಿಕರ ಕೌಶಲ್ಯ ಅಭಿವೃದ್ಧಿ ತರಬೇತಿ, ಮುಂತಾದ ಬೇಡವಾದ ಯೋಜನೆಗಳನ್ನು ತಂದು ಕಲ್ಯಾಣ ಮಂಡಳಿ ನಿಧಿಯ ಸಮತೋಲವನ್ನು ಕಾಪಾಡದೇ ರಾಜ್ಯದ ಕಾರ್ಮಿಕರಿಗೆ ವಂಚನೆ ಮಾಡಲಾಗಿದೆ,
ಉಚಿತ ಕಿಟ್ಟುಗಳನ್ನು ನೀಡುವುದು ತಕ್ಷಣ ನಿಲ್ಲಿಸಬೇಕು ಮತ್ತು ಇದರಲ್ಲಿ ನಡೆದಿರುವ ಅವ್ಯವಹಾರಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಎ. ಐ. ಟಿ. ಯು. ಸಿ ಸಂಘಟನೆ ಈಗಾಗಲೇ ಮನವಿ ಸಲ್ಲಿಸಿದೆ,
ಪ್ರಸ್ತುತ ಆಡಳಿತ ನಡೆಸುವ ಕಾಂಗ್ರೆಸ್ ಸರ್ಕಾರದ ಕಾರ್ಮಿಕ ಮಂತ್ರಿಗಳು ದಿನಾಂಕ 20-08- 2023 ರಂದು ಸಭೆ ಕರೆದಾಗ ತಮ್ಮ ಸರ್ಕಾರ ಯಾವುದೇ ಕಿಟ್ ಅಥವಾ ಇತರೆ ವಸ್ತು ರೂಪದಲ್ಲಿ ಈ ಹಿಂದೆ ನೀಡುತ್ತಿದ್ದ ಎಲ್ಲವನ್ನು ನಿಲ್ಲಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು, ಇದಾದ ನಂತರ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 7,000 ಲ್ಯಾಪ್ಟಾಪ್ ಖರೀದಿಸಿದ್ದಾರೆ ಮತ್ತು ಆರೋಗ್ಯ ತಪಾಸಣೆ ಹೆಸರಿನಲ್ಲಿ ಪ್ರತಿ ಜಿಲ್ಲೆಗೆ 33,000 ಕಾರ್ಮಿಕರಿಗೆ ತಲಾ 2850 ರೂಪಾಯಿಗಳಂತೆ ಪ್ರತಿ ಜಿಲ್ಲೆಗೆ 10 ಕೋಟಿಯಂತೆ 31 ಜಿಲ್ಲೆಗೆ 310 ಕೋಟಿ ರೂಪಾಯಿಗಳನ್ನು ಕಾರ್ಮಿಕರ ಹಾಗೂ ಅವರ ಅವಲಂಬಿತರಿಗೆ ಆರೋಗ್ಯ ತಪಾಸನೆ ಹೆಸರಿನಲ್ಲಿ ಮಂಡಳಿಯ ಹಣವನ್ನು ತೆಗೆಯಲಾಗಿದೆ,
31-08-2023 ರಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಅವರಿಗೆ ಈ ವಿಷಯದ ಬಗ್ಗೆ ಪತ್ರ ಬರೆದು ಆರೋಗ್ಯ ತಪಾಸಣೆ ಹಾಗೂ ಲ್ಯಾಪ್ಟಾಪ್ ಖರೀದಿಯನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಲಾಗಿತ್ತು ಆದರೆ ಸನ್ಮಾನ್ಯ ಮುಖ್ಯಮಂತ್ರಿಗಳು ಸಹ ಇದನ್ನು ತಡೆಗಟ್ಟುವಲ್ಲಿ ವಿಫಲವಾಗಿದ್ದಾರೆ,
ಈಗಾಗಲೇ ತುಮಕೂರು,ರಾಮನಗರ, ಬೆಳಗಾವಿಯಲ್ಲಿ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಗಿದ್ದು ಈ ಆರೋಗ್ಯ ತಪಾಸಣೆ ಹೆಸರಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ನಡೆಯುವ ಗುಮಾನಿದೆ,
ಆರೋಗ್ಯ ಇಲಾಖೆಯಲ್ಲಿ ಪ್ರತಿ ಹೋಬಳಿ ಮತ್ತು ಗ್ರಾಮ ಮಟ್ಟದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಿವೆ, ಜೊತೆಗೆ ಸಹಕಾರಿ ಉಚಿತ ಚಿಕಿತ್ಸೆಗಳು ಇವೆ, ಮಂಡಳಿ ಇವರ ಜೊತೆ ಸೇರಿ ಉಚಿತ ಆರೋಗ್ಯ ತಪಾಸಣೆಯನ್ನು ನಡೆಸಬಹುದು, ಇದಕ್ಕೆ ಸರ್ಕಾರ ಸಾವಿರಾರು ಕೋಟಿ ಹಣವನ್ನು ಖರ್ಚು ಮಾಡುತ್ತಿದೆ, ಇದಕ್ಕೆ ಮಂಡಳಿಯ ಹಣವನ್ನು ಬಳಸುವುದು ಸರಿಯಲ್ಲ ನಿಲ್ಲಿಸಬೇಕು ಎಂದು ಒತ್ತಾಯಿಸುತ್ತೇವೆ, ಇದರ ಬಗ್ಗೆ ಕಾರ್ಮಿಕ ಸಚಿವರಿಗೂ ಹಾಗೂ ಮಂಡಳಿಯ ಸಿ.ಇ.ಓ ಗಮನಕ್ಕೂ ತರಲಾಗಿದ್ದು ಇದನ್ನು ಮೀರಿ ಆರೋಗ್ಯ ತಪಾಸಣೆ ನಡೆಯುತ್ತಿದೆ,
ಈ ಕೂಡಲೇ ಈ ಎಲ್ಲಾ ಅವಿಜ್ಞಾನಿಕವಾದ ದೂರ ದೃಷ್ಟಿ ಇಲ್ಲದ ಸಯೋಜನೆಗಳನ್ನು ನಿಲ್ಲಿಸಿ ಬಾಕಿ ಇರುವ ಸುಮಾರು 14 ಲಕ್ಷ ಮಕ್ಕಳ ಶೈಕ್ಷಣಿಕ ಅರ್ಜಿಗಳಿಗೆ ಕೂಡಲೇ ಧನಸಹಾಯವನ್ನು ವಿಲೇವಾರಿ ಮಾಡಬೇಕು,
ಬೋಗಸ್ (ನಕಲಿ) ಕಾರ್ಮಿಕ ಕಾರ್ಡನ್ನು ತಡೆಯಲು ಕ್ರಮ ಕೈಗೊಳ್ಳಬೇಕು,
ಭಾರತ ದೇಶದ ಅತ್ಯಂತ ಹಿರಿಯ ಕಾರ್ಮಿಕ ಸಂಘಟನೆಯಾದ ಎ.ಐ.ಟಿ.ಯು.ಸಿ.ಗೆ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ನೀಡಬೇಕು,
ಮನುವಲ್ ಪಿಂಚಣಿ ಫಲಾನುಭವಿಗಳು ಕಳೆದ ಐದಾರು ವರ್ಷದಿಂದ ಪಿಂಚಣಿ ಪಡೆಯಲಾಗದೆ ಮುಂಚಿತರಾಗಿದ್ದಾರೆ. ಅಂತಹ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಿದ ದಿನಾಂಕದಿಂದ ಇಡೀ ಗಂಟಾಗಿ ಆತನ ಖಾತೆಗೆ ಪಿಂಚಣಿ ಜಮಾ ಮಾಡಬೇಕು, ತಾಂತ್ರಿಕ ದೋಷದಿಂದ ಅಥವಾ ಒಂದೆರಡು ತಿಂಗಳ ನವೀಕರಣದ ಇಲ್ಲದಿರುವ ಮತ್ತು 60 ವರ್ಷದ ನಂತರ ಜೀವಿತಾವಧಿಯಲ್ಲಿ ಯಾವುದೇ ವಯಸ್ಸಿನಲ್ಲಿ ಕೂಡ ಪಿಂಚಣಿ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು,
ಉತ್ತರ ಕನ್ನಡ ಜಿಲ್ಲೆಯಲ್ಲಿ ಅದರಲ್ಲಿಯೂ ಭಟ್ಕಳದಲ್ಲಿ ಕಳೆದ ಆರು ಏಳು ವರ್ಷದಿಂದ ಸಲ್ಲಿಕೆ ಆಗಿರುವ ಮ್ಯಾನುವಲ್ ಅರ್ಜಿಗಳು ಮದುವೆ, ಪಿಂಚಣಿ,ವೈದ್ಯಕೀಯ, ಮರಣ, ಹೆರಿಗೆ, ಮುಂತಾದ ಅರ್ಜಿಗಳಿಗೆ ಕೂಡಲೇ ಫಲಾನುಭವಿ ಖಾತೆಗೆ ಧನಸಹಾಯ ಜಮಾ ಆಗಬೇಕೆಂದು ಹಲವಾರು ಬೇಡಿಕೆಗಳನ್ನು ಈಡೇರಿಸುವ ಕುರಿತು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರಿಗೆ ಎ.ಐ.ಟಿ.ಯು.ಸಿ ಕಾರ್ಮಿಕ ಸಂಘಟನೆಯಿಂದ ರಾಜ್ಯ ಕಾರ್ಯದರ್ಶಿ ಜಿ.ಎನ್. ರೇವಣಕರ್ ನೇತೃತ್ವದಲ್ಲಿ ಭಟ್ಕಳ
ತಾಲೂಕಿನ ನೂರಾರು ಕಟ್ಟಡ ಕಾರ್ಮಿಕರೊಂದಿಗೆ ಮನವಿ ಸಲ್ಲಿಸಲಾಯಿತು.