*ಅನಂತ ಮೂರ್ತಿ ಹೆಗಡೆ ಉತ್ತರ ಕನ್ನಡ ಜಿಲ್ಲಾ ಸಂಸದರಾಗಬೇಕು ಎಂದು ‘ಕಿತ್ತೂರು ಹುಲಿ’ ಆಗ್ರಹ*
*ಚನ್ನಮ್ಮನ ಕಿತ್ತೂರು*: ಬೆಳಗಾವಿಯ ಕಿತ್ತೂರು ಮತ್ತು ಖಾನಾಪುರ ಕೆನರಾ ಲೋಕಸಭಾ ಕ್ಷೇತ್ರಕ್ಕೆ ಬರುತ್ತದೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಬಡವರು,ರಿಕ್ಷಾ ಚಾಲಕರಿಗೆ ಸಹಾಯ, ಕೊನೆ ಗೌಡರಿಗೆ ಉಚಿತ ಜೀವ ವಿಮೆ, ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ 140 km ಪಾದಯಾತ್ರೆ, ಹಾಗೂ ಬೆಳಗಾವಿ ಅಧಿವೇಶನದಲ್ಲಿ ಹೋರಾಟ ಹೀಗೆ ತಮ್ಮನ್ನ ಜನ ಸೇವೆಯಲ್ಲಿ ತೊಡಗಿಸಿಕೊಂಡು ಜಿಲ್ಲೆಯ ಜನರ ಮನಸ್ಸಿನಲ್ಲಿ ಜಾಗ ಪಡೆದಿರುವ ಶಿರಸಿಯ ಅನಂತ ಮೂರ್ತಿ ಹೆಗಡೆಯವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬೇಕು, ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು, ಇಲ್ಲವಾದರೆ ಯಾವುದೇ ಒಂದು ರೀತಿಯಲ್ಲಾದರೂ ಸ್ವರ್ಧೆ ಮಾಡಲೇಬೇಕು, ನಿಮ್ಮನ್ನ ನಾವು ಗೆಲ್ಲಿಸಿಕೊಂಡು ಬರುತ್ತೇವೆ ಎಂದು
ಜಿಲ್ಲಾ ಸಾಮಾಜಿಕ ಹೋರಾಟಗಾರ ಮತ್ತು ಕಿತ್ತೂರು ರಿಕ್ಷಾ ಚಾಲಕ ಅಧ್ಯಕ್ಷ ಮಾಲಕರಿಗೆ ಮಾಲೀಕ ಸಂಘದ ಅಧ್ಯಕ್ಷ ‘ಕಿತ್ತೂರು ಹುಲಿ ‘ ಎಂದು ಕರೆಯಲುಪಡುವ
ವಿಜಯ ಕುಮಾರ್ ಶಿಂಧೆ ಹೇಳಿದರು.ಒಂದು ವೇಳೆ ಬಿಜೆಪಿ ಟಿಕೆಟ್ ನೀಡಿಲ್ಲ ಎಂದರೆ ಪಕ್ಷೇತರರಾಗಿ ಆದರೂ ನಿಲ್ಲಿಸಿ ಆರಿಸಿ ತರುತ್ತೇವೆ ಎಂದರು. ಈಗಿನ ಸಂಸದರು ಅನಂತಕುಮಾರ್ ರವರು ಕೇವಲ ಕೆಲವು ಅಭಿಮಾನಿಗಳ ಬೇಡಿಕಯನ್ನೇ ಪಕ್ಷದ ನಿರ್ಧಾರ ಎನ್ನುವಂತೆ ಬಿಂಬಿಸಿ ಜಿಲ್ಲೆಯ ಜನರಲ್ಲಿ ಗೊಂದಲ ಮೂಡಿಸಿ ದಿಕ್ಕು ತಪ್ಪಿಸುವುದು ಸರಿಯಲ್ಲ ಎಂದರು.
5 ವರ್ಷಗಳ ಅವಧಿಯಲ್ಲಿ ಯಾರಿಗೂ ಒಂದು ಬಾರಿಯೂ ಮುಖ ತೋರಿಸದೇ ‘ನೋ ಪಾಲಿಟಿಕ್ಸ್ ‘ಎನ್ನುತ್ತಾ ಈಗ ಬಂದು ಈ ರೀತಿಯ ಲಾಬಿ ಮಾಡುತ್ತಿರುವುದು ಹಾಸ್ಯಾಸ್ಪದ, ಕಿತ್ತೂರು -ಖಾನಾಪುರ ಭಾಗಕ್ಕೆ ಏನೂ ಅಭಿವೃದ್ದಿ ಮಾಡಿಲ್ಲ
ಜನ ಎಲ್ಲವನ್ನೂ ಗಮನಿಸುತ್ತಾರೆ ಎಂದರು.ಚನ್ನಮನ ಕಿತ್ತೂರಿನ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಶ್ರೀ ವಿಜಯ ಕುಮಾರ್ ಶಿಂಧೆ, ರೈತ ಮುಖಂಡ ಅಪ್ಪೇಶ್ ದಳವಾಯಿ, ಮುಕ್ತುಂ ಡೋಂಗಿ, ಪುಟ್ಟು ಗೊಸಾವಿ ಮತ್ತಿತರರು ಉಪಸ್ಥಿತರಿದ್ದರು.