ಹೊನ್ನಾ ವರದ ಪತ್ರಕರ್ತ ವೆಂಕಟೇಶ ಮೇಸ್ತ ನಿಧನ:
ಸರ್ಕಾರದಿಂದ 10 ಲಕ್ಷ ಪರಿಹಾರ ಕೊಡಿಸುವಂತೆ ಕರ್ನಾಟಕ ಪ್ರೆಸ ಕ್ಲಬ್ ನ ರಾಜ್ಯ ಸಂಘಟನಾ ಕಾರ್ಯದರ್ಶಿ ಕುಮಾರ ನಾಯ್ಕ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಳ ವೈದ್ಯ ಅವರಿಗೆ ಮನವಿ
ಹೊನ್ನಾವರ – ತಾಲೂಕಿನ ಕ್ರಿಯಾಶೀಲ ಪತ್ರಕರ್ತರಾಗಿ, ಉತ್ತಮ ಛಾಯಾಚಿತ್ರ ಗ್ರಾಹಕರಾಗಿ ಕೊಂಕಣ ಖಾರ್ವಿ ಸಮಾಜ ಸಂಘಟನೆಯಲ್ಲಿ, ಧಾರ್ಮಿಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಮಂಕಿ ಹಳೆಮಠದ ಪತ್ರಕರ್ತ ವೆಂಕಟೇಶ ಮೇಸ್ತ (48) ಮಂಗಳವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಹೊನ್ನಾವರ ದ ಹಿರಿಯ ಪತ್ರಕರ್ತ ವೆಂಕಟೇಶ್ ಅವರ ಸಾವಿಗೆ ಕರ್ನಾಟಕ ಪ್ರೆಸ್ ಕ್ಲಬ್ ನ ರಾಜ್ಯ ಸಂಘಟನಾ ಕಾರ್ಯದರ್ಶಿ ಕುಮಾರ ನಾಯ್ಕ ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಸಂತಾಪ ಸೂಚಿಸಿ, ವೆಂಕಟೇಶ್ ಅವರ ಅಗಲಿಕೆ ನಮ್ಮ ಜಿಲ್ಲೆಯ ಪತ್ರಿಕಾ ರಂಗಕ್ಕೆ ತುಂಬ ಲಾರದ ನಷ್ಟ ಎಂದು ತಿಳಿಸಿದ್ದಾರೆ.
ಪತ್ನಿ, ಚಿಕ್ಕ ಮಗಳೊಂದಿಗೆ ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಇವರು ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದರೊಂದಿಗೆ ಅವರನ್ನೇ ನಂಬಿದ್ದ ಹೆಂಡತಿ ಮಗಳನ್ನು ತಬ್ಬಲಿ ಮಾಡಿ ಇಹಲೋಕ ತ್ಯಜಿಸಿದ್ದಾರೆ.ಪತ್ರಕರ್ತ ವೆಂಕಟೇಶ್ ಅವರು ಮೀನುಗಾರ ಸಮುದಾಯದವರಾಗಿದ್ದಾರೆ, ಅವರ ಸಾವಿನಿಂದ ಅವರ ಪತ್ನಿ ಮತ್ತು ಮಕ್ಕಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ, ಆದ ಕಾರಣ ದಯವಿಟ್ಟು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಸರ್ಕಾರದಿಂದ 10 ಲಕ್ಷ ಪರಿಹಾರವನ್ನು ಅವರ ಕುಟುಂಬ ಕ್ಕೆ ತೆಗೆಸಿಕೊಡುವಂತೆ ಕರ್ನಾಟಕ ಪ್ರೆಸ್ ಕ್ಲಬ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕುಮಾರ ನಾಯ್ಕ್ ಈ ಮೂಲಕ ಸಚಿವ ರಲ್ಲಿ ಮನವಿ ಮಾಡಿದ್ದಾರೆ.
ಕಾಲೇಜು ದಿನದಿಂದಲೇ ಕ್ರಿಯಾಶೀಲರಾಗಿದ್ದ ಇವರು ಬಿಎ ಮತ್ತು ಜರ್ನಲಿಸಂ ವ್ಯಾಸಂಗ ಮಾಡಿದ್ದರು. ಪ್ರಾರಂಭದಲ್ಲಿ ಮಂಕಿಯ ಸ್ಟುಡಿಯೋದಲ್ಲಿ ಫೋಟೋ ಗ್ರಾಪರ್ ಆಗಿ ಕೆಲಸ ಮಾಡಿ, ನಂತರ ಫೋಟೋ ಮತ್ತು ವಿಡಿಯೋ ದಲ್ಲಿ ಪರಿಣಿತಿ ಪಡೆದು ಗೋಲ್ಡನ್ ಕ್ರಿಯೆಸನ್ಸ್ ಎಂಬ ಹೆಸರಿನಲ್ಲಿ ವಿಡಿಯೋ ಮಿಕ್ಸಿಂಗ್ ಕೆಲಸ ಮಾಡಿಕೊಡುತ್ತಿದ್ದರು. ವಿವಿಧ ದೃಶ್ಯ ಮಾದ್ಯಮದಲ್ಲಿ ನಿರೂಪಕರಾಗಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಕನ್ನಡ ಜನಾಂತರಂಗ, ಕರಾವಳಿ ಮುಂಜಾವು, ಸಂಯುಕ್ತ ಕರ್ನಾಟಕ ಮತ್ತು ವಿಜಯ ಸಂಕೇಶ್ವರರ ಅವರ ಉಷಾ ಕಿರಣ್ ಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದರು.