ಅಸಂವಿಧಾನ ಬದ್ಧ, ಪ್ರಚೋದಿತ ಬಾಷಣ ಮೂಲಕ ಕಾನೂನು ಉಲ್ಲಂಘಿಸಿರುವ ಎಂ.ಪಿ ಅನಂತ ಕುಮಾರ ಹೆಗಡೆ ವಿರುದ್ಧ ಸೂಕ್ತ ಕ್ರಮ ಜರುಗಿಸುವಲ್ಲಿ ಜಿಲ್ಲಾಡಳಿತ ಮತ್ತು ಪೋಲೀಸ್ ಇಲಾಖೆ ಸಂಪೂರ್ಣ ವಿಫಲ- ಕಾಂಗ್ರೆಸ್ ಮುಖಂಡ ವಕೀಲ ರವೀಂದ್ರ ನಾಯ್ಕ
ಶಿರಸಿ: ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಧರ್ಮ ಮತ್ತು ದೇವರ ಹೆಸರಿನಲ್ಲಿ ರಾಜಕೀಯ ಚಟುವಟಿಕೆಗಳನ್ನ ಸಕ್ರೀಯಗೊಳಿಸುತ್ತಿರುವುದು ಸಂವಿಧಾನ ವಿರೋಧ ಕ್ರಮ. ಇಂತಹ ರಾಜಕೀಯ ಪ್ರೇರಿತ ಘಟನೆಗಳನ್ನ ತೀವ್ರವಾಗಿ ಖಂಡಿಸಲಾಗುವುದು ಎಂದು ಕಾಂಗ್ರೇಸ್ ಮುಖಂಡ ರವೀಂದ್ರ ನಾಯ್ಕ ಅವರು ತಿಳಿಸಿದ್ದಾರೆ.
ಭಾರತೀಯ ಸಂವಿಧಾನದ ಅಡಿಯಲ್ಲಿ ಧರ್ಮ ಮತ್ತು ರಾಜಕೀಯ ಪ್ರೇರಿತ ಹೇಳಿಕೆ ಮತ್ತು ಚಟುವಟಿಕೆಗಳಿಗೆ ನಿರ್ಭಂದ ಇದ್ದಾಗಲೂ ಇಂತಹ ಘಟನೆಗಳು ಪುನರಾವರ್ತನೆ ಆಗುತ್ತಿರುವುದು ವಿಷಾದಕರ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ವಿರುದ್ಧ ಉಪಯೋಗಿಸಿರುವ ಪದಗಳು ಧರ್ಮ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದ್ದು ಇರುತ್ತದೆ. ಸಂಪ್ರದಾಯ ಬದ್ಧ, ಸುಸಂಸ್ಕçತ, ವೇದ, ಉಪನಿಷತ್ ಮತ್ತು ಸನಾತನ ಧರ್ಮದ ಅನುಯಾಯಿಗಳಾಗಿ, ಲೋಕಸಭಾ ಸದಸ್ಯರು ಆಡಿರುವ ಮಾತುಗಳು ಅವರು ಅನುಸರಿಸುವ ಧರ್ಮಕ್ಕೆ ಅವಮಾನ ಮಾಡಿದಂತಾಗಿದೆ. ಅಸಂವಿಧಾನ ಬದ್ಧ ಮತ್ತು ಅಧರ್ಮದ ಮಾತುಗಳಿಂದ ಸಮಾಜದ ಮೇಲಾಗುವ ದುಷ್ಪರಿಣಾಮದ ಹಿನ್ನೆಲೆಯಲ್ಲಿ ಅವರು ಅನುಸರಿಸುವ ಧರ್ಮ ಪೀಠಗಳು ಕಿವಿಮಾತನ್ನು ಹೆಳಬೇಕೆಂದು ರವೀಂದ್ರ ನಾಯ್ಕ ಅವರು ಈ ಸಂದರ್ಭದಲ್ಲಿ ಕೋರಿಕೊಂಡರು.
ಪೋಲೀಸರು ವಿಫಲ:
ಇತ್ತೀಚಿನ ದಿನಗಳಲ್ಲಿ ಅಸಂವಿಧಾನ ಬದ್ಧ, ಪ್ರಚೋದಿತ ಬಾಷಣ ಮೂಲಕ ಕಾನೂನು ಉಲ್ಲಂಘಿಸಿರುವ ಲೋಕಸಭಾ ಸದಸ್ಯ ಅನಂತ ಕುಮಾರ ಹೆಗಡೆ ವಿರುದ್ಧ ಸೂಕ್ತ ಕ್ರಮ ಜರುಗಿಸುವಲ್ಲಿ ಜಿಲ್ಲಾಡಳಿತ ಮತ್ತು ಪೋಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ರವೀಂದ್ರ ನಾಯ್ಕ ಹೇಳಿದರು.