ಭಟ್ಕಳದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗಜ ಸೇನೆ ಭಟ್ಕಳ ತಾಲೂಕ ಘಟಕದಿಂದ ಶಂಕರ್ ನಾಗ್ ಜನ್ಮದಿನಾಚರಣೆ ಹಾಗೂ ಚಾಲಕರ ದಿನಾಚರಣೆ ಆಚರಣೆ
ಭಟ್ಕಳ-ಕರ್ನಾಟಕ ರಕ್ಷಣಾ ವೇದಿಕೆ ಗಜ ಸೇನೆ ಇದರ ತಾಲೂಕ ಘಟಕದ ಸಂಘದಿಂದ ಶಂಕರ್ ನಾಗ್ ಜನ್ಮದಿನಾಚರಣೆ ಹಾಗೂ ಚಾಲಕರ ದಿನಾಚರಣೆಯನ್ನು ಸೋಡಿ ಗದ್ದೆ ಕ್ರಾಸ್ ನಲ್ಲಿ ಇರುವಂತ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಬಹಳ ಸಡಗರದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕ ಘಟಕದ ಅಧ್ಯಕ್ಷರಾಗಿರುವಂತ ಶ್ರೀ ತಿಮ್ಮ ನಾಯಕ್ ರವರು ಶಂಕರ್ನಾಗ್ ರವರು ತಮ್ಮ ಉತ್ತಮವಾದಂತ ಕ್ರಿಯಾಶೀಲ ನಿರ್ದೇಶಕರಾಗಿದ್ದರು ಆಗಿನ ಕಾಲದಲ್ಲಿ ಅವರು ಆಟೋ ರಾಜ ಎನ್ನುವಂತ ಸಿನಿಮಾವನ್ನು ತೆಗೆದು ಚಾಲಕರ ಮನಸ್ಸಿನಲ್ಲಿ ನೆಲೆಯೂರಿದ್ದರು ಹಾಗೆಯೇ ಚಾಲಕರು ತಮ್ಮ ಕಷ್ಟದ ದುಡಿಮೆಯಿಂದ ಜೀವನವನ್ನು ಸಾಗಿಸಿ ಇವತ್ತು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು ಈ ಸಂದರ್ಭದಲ್ಲಿ ಲಕ್ಷ್ಮಣ್ ನಾಯಕಿಯವರು ಶಂಕರ್ ನಾಗ್ ಜನ್ಮದಿನಾಚರಣೆ ಎಂದು ಕೇಕ್ ಅನ್ನು ತಂದು ನೆರೆದಂತ ಎಲ್ಲ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ವಿತರಿಸಿದರು ಈ ಸಂದರ್ಭದಲ್ಲಿ ಚಾಲಕರಾದ ಸೀತಾರಾಮ್ ನಾಯಕ್ ಲಕ್ಷ್ಮಣ್ ನಾಯಕ್ ಕೇಶವ ನಾಯಕ್ ಮುಂತಾದ ಚಾಲಕರು ಭಾಗವಹಿಸಿದ್ದರು. ನಂತರ ಎಲ್ಲ ಚಾಲಕರಿಗೆ ಲಘುಪರದ ವ್ಯವಸ್ಥೆಯನ್ನು ಸಂಘದಿಂದ ಮಾಡಲಾಗಿತ್ತು. ಈ ಕಾರ್ಯಕ್ರಮವನ್ನು ಸೂರ್ಯಕಾಂತ್ ಎಸ್ ನಾಯಕ್ ನಿರೂಪಿಸಿ ವಂದಿಸಿದರು.ಲಘು ಉಪಹಾರದ ವ್ಯವಸ್ಥೆಯನ್ನ ತಿಮ್ಮ ನಾಯಕ್, ಲಕ್ಷ್ಮಣ್ ನಾಯಕ್ ,ಕೇಶವ ನಾಯಕ್ ಇವರು ಆಯೋಜಿಸಿದ್ದರು. ಆಯೋಜಿಸಿದ್ದರು