ಕರ್ನಾಟಕ ಪ್ರೆಸ್ ಕ್ಲಬ್ (ರಿ) ಬೆಂಗಳೂರು ಇದರ ಉಡುಪಿ ಜಿಲ್ಲಾಧ್ಯಕ್ಷರಾಗಿ ಹಿರಿಯ ಪತ್ರಕರ್ತ ಶ್ರೀ ಸುರೇಶ್ ಶೆಟ್ಟಿ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮಾಲತಿ ಆಚಾರ್ಯ ಆಯ್ಕೆ
ಕಾರವಾರ- ಕರ್ನಾಟಕ ಪ್ರೆಸ್ ಕ್ಲಬ್ (ರಿ) ಬೆಂಗಳೂರು ಇದರ ಉಡುಪಿ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ಹಿರಿಯ ಪತ್ರಕರ್ತ , ಕರಾವಳಿ ಅಲೆ ದಿನಪತ್ರಿಕೆ ಉಡುಪಿ ವರದಿಗಾರ ಶ್ರೀ ಸುರೇಶ್ ಶೆಟ್ಟಿ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಗಿ ಉಡುಪಿ ಪತ್ರಕರ್ತೆ ಮಾಲತಿ ಆಚಾರ್ಯ ಅವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ. ಕರ್ನಾಟಕ ಪ್ರೆಸ್ಸ್ ಕ್ಲಬ್ ನ ರಾಜ್ಯ ಸಂಘಟನಾ ಕಾರ್ಯದರ್ಶಿ ಕುಮಾರ್ ನಾಯ್ಕ ಭಟ್ಕಳ ಅವರ ಸೂಚನೆ ಯ ಮೇರೆಗೆ ಕರ್ನಾಟಕ ಪ್ರೆಸ್ಸ್ ಕ್ಲಬ್ ನ ರಾಜ್ಯ ಅಧ್ಯಕ್ಷ ರಾದ ಶ್ರೀ ದಯಾನಂದ ಎಂ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ರಮೇಶ್ ಎಸ್ ಜಿ ಅವರು ಉಡುಪಿ ಜಿಲ್ಲೆಯ ಜಿಲ್ಲಾಧ್ಯಕ್ಷ ರನ್ನಾಗಿ ಹಿರಿಯವಿ ಪತ್ರಕರ್ತ ಉಡುಪಿಯ ಶ್ರೀ ಸುರೇಶ್ ಶೆಟ್ಟಿ ಅವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಆದೇಶ ಪತ್ರದಲ್ಲಿ ನ್ಯಾಯ, ನೀತಿ, ಸತ್ಯ ಮತ್ತು ಪತ್ರಿಕಾ ಧರ್ಮವನ್ನು ಪಾಲಿಸಿ ಕಾರ್ಯ ನಿರ್ವಹಿಸುವಂತೆ ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಸಂಘಟನೆ ಯನ್ನು ಬೆಳೆಸುವುದರ ಜೊತೆಗೆ ಪತ್ರಕರ್ತ ನಿಗೆ ಕಷ್ಟದ ಸಮಯದಲ್ಲಿ ಸಹಾಯ ಸಹಕಾರ ನೀಡಿ , ಪತ್ರಕರ್ತ ರ ಪರ ಹೋರಾಟ ಮಾಡುವಂತೆ ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಸದಾ ಬಡ ಜನರ ಧ್ವನಿಯಾಗಿ , ಭ್ರಷ್ಟರ ವಿರುದ್ಧ ಹೋರಾಟ ನಡೆಸುವಂತೆ ತಿಳಿಸಿದ್ದಾರೆ.