ಸಮುದ್ರ ಸ್ವಚ್ಚಗೊಳಿಸಲು ಇಟ್ಟ ರೂ. 840 ಕೋಟಿಯಲ್ಲಿ ಮತ್ತು ಅರಣ್ಯ ಪ್ರದೇಶದಲ್ಲಿ ಕಳೆ ನಾಶ ಮಾಡುವ 1200 ಕೋಟಿ ರೂಪಾಯಿ ಯೋಜನೆ ಯಲ್ಲಿ ಭ್ರಷ್ಟಾಚಾರ ವಾಸನೆ ಕಂಡುಬರುತ್ತಿದ್ದು , ಅದರಲ್ಲಿ ಸಚಿವ ಮಂಕಾಳ ವೈದ್ಯರಿಗೆ ಎಷ್ಟು ಪರ್ಸನ್ಟ್ ಕಮಿಷನ್ ಇದೆ- ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ *
*ಭಟ್ಕಳ*:-* ರಾಜ್ಯ ಸರ್ಕಾರ ರಾಜ್ಯದ ಕರಾವಳಿ ಪ್ರದೇಶಗಳ ಸಮುದ್ರತೀರವನ್ನು ಸ್ವಚ್ಛಗೊಳಿಸುವ ಯೋಜನೆಗೆ ಮೀಸಲಿಟ್ಟ ರೂ. 840 ಕೋಟಿ ಹಣದಲ್ಲಿ ಜಿಲ್ಲೆಯ ಜನರಿಗೆ ಅತ್ಯವಶ್ಯವಾಗಿ ಬೇಕಾಗಿರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಿ, ಇಲ್ಲವೇ ಮುಂಬರುವ ಬಜೆಟ್ ಅಧಿವೇಶನದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಬಿಡುಗಡೆ ಮಾಡುವಂತೆ ಘೋಷಣೆ ಮಾಡಿಸಿ ಇಲ್ಲವಾದರೆ ನಿಮ್ಮ ಕಛೇರಿಯ ಮುಂದೆ ಯುವಕರೊಂದಿಗೆ ಆಮರಣಾಂತ ಉಪವಾಸ ಮಾಡಿ ಉಗ್ರ ಹೋರಾಟ ಮಾಡಲಾಗುವುದು. ಮುಂದೆ ಅಗುವ ಅನಾಹುತಕ್ಕೆ ತಾವು ಕಾರಣರಾಗುತ್ತೀರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯಗೆ ಶಿರಸಿಯ ಸಾಮಾಜಿಕ ಹೋರಾಟಗಾರ ಹಾಗೂ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಎಚ್ಚರಿಕೆ ನೀಡಿದರು.
ಅವರು ಮುಂಬರುವ ಬಜೆಟ್ ನಲ್ಲಿ ಕುಮಟಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಮಂಜೂರು ಮಾಡಬೇಕು ಹಾಗೂ ಜಿಲ್ಲೆಯ ಯುವಕರಿಗೆ ಉದ್ಯೋಗ ನೀಡುವ ಯೋಜನಗಳ ಘೋಷಣೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿ ಕುಮಟಾದಿಂದ ಭಟ್ಕಳದವರೆಗೆ ಮೂರು ದಿನಗಳ ಕಾಲ ಹಮ್ಮಿಕೊಂಡ ಪಾದಯಾತ್ರೆಯ ಕೊನೆಯ ದಿನವಾದ ಬುಧವಾರ ಭಟ್ಕಳದ ಉಸ್ತುವಾರಿ ಸಚಿವರ ಕಛೇರಿಯನ್ನಹ ತಲುಪಿ, ಮನವಿ ಸಲ್ಲಿಸಿ ಮಾತನಾಡುತ್ತಾ, ರಾಜ್ಯ ಸರ್ಕಾರ ರಾಜ್ಯದ ಕರಾವಳಿ ಪ್ರದೇಶಗಳ ಸಮುದ್ರತೀರವನ್ನು ಸ್ವಚ್ಛಗೊಳಿಸುವ ಯೋಜನೆಗೆ ಮೀಸಲಿಟ್ಟ ರೂ. 840 ಕೋಟಿ ಹಣದಲ್ಲಿ ಜಿಲ್ಲೆಯ ಜನರಿಗೆ ಅತ್ಯವಶ್ಯವಾಗಿ ಬೇಕಾಗಿರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಿ, ಇಲ್ಲವೇ ಮುಂಬರುವ ಬಜೆಟ್ ಅಧಿವೇಶನದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಬಿಡುಗಡೆ ಮಾಡುವಂತೆ ಘೋಷಣೆ ಮಾಡಿಸಿ ಇಲ್ಲವಾದರೆ ನಿಮ್ಮ ಕಛೇರಿಯ ಮುಂದೆ ಯುವಕರೊಂದಿಗೆ ಆಮರಣಾಂತ ಉಪವಾಸ ಕೈಗೊಳ್ಳುತ್ತೇನೆ. ನಿಮಗೆ ಅರಣ್ಯ ಪ್ರದೇಶದಲ್ಲಿ ಕಳೆ ನಾಶ ಮಾಡವ ಯೋಜನೆಗೆ 1200 ಕೋಟಿ ರೂಪಾಯಿ ಮತ್ತು ಸಮುದ್ರದ ತೀರದ ಕಸ ಸ್ವಚ್ಛಗೊಳಿಸುವ ಯೋಜನೆಗೆ 840 ಕೋಟಿ ರೂಪಾಯಿ ಹಣ ಇಡಲು ಸರ್ಕಾರ ದಲ್ಲಿ ಹಣ ಉಂಟು ಆದರೆ
ಉತ್ತರಕನ್ನಡ ಜಿಲ್ಲೆಗೆ ಈಗಾಗಲೇ ಕುಮಟಾದಲ್ಲಿ ಹಿಂದಿನ ಸರ್ಕಾರ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಿಸಲು ಸ್ಥಳವನ್ನು ಗುರುತಿಸಿದ್ದು, ಸರ್ಕಾರ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಿಸಲು ಹಣ ಇಲ್ಲವೇ ಎಂದು ಪ್ರಶ್ನಿಸಿದರು. ಈ ಎರಡು ಯೋಜನೆಯಲ್ಲಿ ಭ್ರಷ್ಟಾಚಾರದ ವಾಸನೆ ಕಂಡುಬರುತಿದ್ದು ತಮಗೆ ಎಷ್ಟು ಪರ್ಸನ್ಟ್ ಕಮಿಸನ್ ಬುಕ್ ಆಗಿದೆ ಸಚಿವರೇ ಎಂದು ಪ್ರಶ್ನೆ ಮಾಡಿದ್ದಾರೆ.ತಮಗೆ ಬಡ ಜನರ ಉಪಯೋಗಕ್ಕೆ ಬರುವ ಯೋಜನೆ ಜಿಲ್ಲೆಗೆ ಬೇಡ , ಭ್ರಷ್ಟಾಚಾರ ಮಾಡಿ ತಮ್ಮ ಜೋಬು ತುಂಬಿಸಿಕೊಳ್ಳವ ಯೋಜನೆ ಮಾತ್ರ ಬೇಕೆ ಎಂದು ಕಿಡಿಕಾರಿದ್ದಾರೆ.