ಸೀಬರ್ಡ ಮೀನುಗಾರರ ರೈತ ಉತ್ಪಾದಕರ ಕಂಪನಿಯಿಂದ ಮೀನುಗಾರಿಕಾ ತರಬೇತಿ ಕಾರ್ಯಕ್ರಮ ಯಶಸ್ವಿ
ಹೊನ್ನಾವರ: ಜಲಾನಯನ ಇಲಾಖೆ, ಮೀನುಗಾರಿಕಾ ಇಲಾಖೆ ಹಾಗೂ ಸ್ಕೊಡವೆಸ್ ಸಂಸ್ಥೆಯಿಂದ ರಚಿತವಾದ ಸೀಬರ್ಡ ಮೀನುಗಾರರ ರೈತ ಕಂಪನಿಯಿಂದ ಇಲ್ಲಿನ ಉದ್ಯಮ ನಗರದ ಕೊಂಕಣ ಖಾರ್ವಿ ಸಮಾಜದ ಸಭಾಭವನದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.
ಇಲಾಖೆಯ ಜಂಟಿ ನಿರ್ದೇಶಕರಾದ ಬಬಿನ್ ಬೋಪಣ್ಣ ಕಾರ್ಯಕ್ರಮ ಉದ್ಘಾಟಿಸಿ ಮೀನುಗಾರರ ಆರ್ಥಿಕಾಭಿವೃದ್ಧಿಗಾಗಿ ಮೀನುಗಾರರ ಅಭಿವೃದ್ದಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ರೀತಿಯ ಯೋಜನೆಯನ್ನು ಕೈಗೊಂಡಿದೆ. ಇಂದು ಮೀನುಗಾರರು ಉಪ್ಪಿನ ಸಾಂದ್ರತೆ ಇರುವ ನದಿ ಪ್ರದೇಶ ಗಳಲ್ಲಿ ಪಂಜರ ಕೃಷಿ ಮತ್ತು ಪಚ್ಚಲು ಕೃಷಿಯನ್ನು ಸರಿಯಾಗಿ ಮಾಹಿತಿಯನ್ನು ಪಡೆದುಕೊಂಡು ವ್ಯವಸ್ಥಿತವಾಗಿ ಮೀನು ಕೃಷಿಯಲ್ಲಿ ತೊಡಗಿಸಿಕೊಂಡು ತಮ್ಮ ಆರ್ಥಿಕ ಶಕ್ತಿಯನ್ನು ವೃದ್ಧಿಸಿ ಕೊಳ್ಳಬೇಕೆಂದು ನುಡಿದರಲ್ಲದೇ ಸೀಬರ್ಡ ಮೀನಿಗಾರ ರೈತ ಉತ್ಪಾದಕ ಕಂಪನಿಯು ಆಯೋಜಿಸಿದ ತರಬೇತಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೆಯೇ ಇಕಾಖೆಯಿಂದ ಸಾಧ್ಯವಾಗುವ ಎಲ್ಲ ಸಹಕಾರ ನೀಡುವುದಾಗಿ ನುಡಿದರು.
ಮುಖ್ಯ ಅತಿಥಿಗಳಾದ ಕಡಲ ವಿಜ್ಞಾನಿ ಪ್ರಕಾಶ್ ಮೇಸ್ತ ಮಾತನಾಡಿ ನದಿ ಪರಿಸರವನ್ನು ಶುಚಿಯಾಗಿ ಇಟ್ಟುಕೊಂಡು ನದಿಯಲ್ಲಿಯೇ ಮೀನು ಕೃಷಿಯನ್ನು ಮಾಡಿ ಅಧಿಕ ಲಾಭ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಸೀ ಬರ್ಡ್ ಮೀನು ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ದೇವಿದಾಸ ಖಾರ್ವಿ ಮಾತನಾಡಿದರು.
ನಮ್ಮ ಸಂಸ್ಥೆಯು ಇಂತಹ ಕಾರ್ಯಕ್ರಮದ ಮೂಲಕ ಮೀನುಗಾರರ ಸಮುದಾಯದ ಅಭಿವೃದ್ಧಿಯ ಬಗ್ಗೆ ಸಾಕಷ್ಟು ರಚನಾತ್ಮಕ ಕಾರ್ಯಕ್ರಮಗಳನ್ನು ಮಾಡಲು ಪ್ರಯತ್ನಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹೊನ್ನಾವರ ಮೀನುಗಾರಿಕಾ ಇಲಾಖೆಯ ಸಹ ನಿರ್ದೇಶಕ ಚೇತನ್ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಉಡುಪಿ ಕಿನಾರ ಮೀನುಗಾರ ರೈತ ಉತ್ಪಾದಕ ಕಂಪನಿಯ ನಿರ್ದೇಶಕ ಸುದಿನ ಪೂಜಾರಿ,ಕೋಡಿ ಪಚ್ಚಲೆ ಕೃಷಿಯ ಕುರಿತು ಸೀ ವ್ಹೀಲ್ ಮೀನುಗಾರ ರೈತ ಉತ್ಪಾದಕ ಕಂಪನಿಯ ಮುಖ್ಯ ಕಾರ್ಯ ನಿರ್ವಾಹಕ ಹರೀಶ ದೇಸಾಯಿ ಪಂಜರು ಕೃಷಿಯ ಕುರಿತು ಮೀನುಗಾರರಿಗೆ ಸವಿಸ್ತಾರವಾದ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಹೊನ್ನಾವರ ಪಟ್ಟಣ ಪಂಚಾಯತ ಸದಸ್ಯರಾದ ವಿನೋದ್ ಮೇಸ್ತ, ಉದ್ಯಮನಗರ ಕೊಂಕಣಿ ಖಾರ್ವಿ ಸಮಾಜದ ಅಧ್ಯಕ್ಷರಾದ ಸಂತೋಷ್ ಮೇಸ್ತ, ಉಪಾಧ್ಯಕ್ಷ ಆರ್.ಎಸ್.ಮೇಸ್ತ ಉಪಸ್ಥಿತರಿದ್ದರು.
ಸೀಬರ್ಡ ಸಂಸ್ಥೆಯ ಸಿಇಓ ಸುರೇಶ್ ಖಾರ್ವಿ ಎಲ್ಲರನ್ನು ಸ್ವಾಗತಿಸಿದರು. ಸ್ವಾಗತಿಸಿದರು.ನಿರ್ದೇಶಕರಾದ ಈಶ್ವರ್ ಹರಿಕಾಂತ ಮತ್ತು ಶೇಖರ್ ಹರಿಕಾಂತ ಕಾರ್ಯಕ್ರಮ ನಿರೂಪಿಸಿದರೆ ನಿರ್ದೇಶಕ ರಘು ಖಾರ್ವಿ ವಂದಿಸಿದರು.ಮಂಗಲಾ ಮತ್ತು ಜ್ಯೋತಿ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಎಪ್ಪತ್ತೈದಕ್ಕಿಂತ ಹೆಚ್ಚಿನ ಮೀನುಗಾರರು ಉಪಸ್ಥಿತರಿದ್ದರು.