ಯಲ್ಲಾಪುರದಲ್ಲಿ ಬೈಕ್ ಓವರ್ ಟೇಕ್ ಮಾಡುವ ವಿಚಾರಕ್ಕೆ ಯುವಕನ ಕೊಲೆ – ಪೊಲೀಸರಿಂದ ಆರೋಪಿಗಳ ಬಂಧನ
ಯಲ್ಲಾಪುರ-ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಹುಣಶೆಟ್ಟಿಕೊಪ್ಪದಲ್ಲಿ ಬೈಕ್ ಓವರ್ ಟೇಕ್ ಮಾಡುವ ವಿಚಾರಕ್ಕೆ ಸಂಬಂಧಿಸಿ ನಾಲ್ಕು ಮಂದಿಯ ತಂಡವೊಂದು ಯುವನ ಮೇಲೆ ಹಲ್ಲೆ ಮಾಡಿ, ಭೀಕರ ಕೊಲೆ ಮಾಡಿರುವ ಘಟನೆ ನಡೆದಿದೆ.
ಹಳಿಯಾಳ ತಾಲ್ಲೂಕಿನ ಸಾಂಬ್ರಾಣಿಯ ಪ್ರಜ್ವಲ್ ಕಕ್ಕೇರಿಕರ್ (24) ಕೊಲೆಯಾದ ಯುವಕ.
ಪ್ರಜ್ವಲ್ ಅವರು ಹುಣಶೆಟ್ಟಿಕೊಪ್ಪ ಜಾತ್ರೆ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದಾಗ ಬೈಕ್ ಓವರ್ ಟೇಕ್ ಮಾಡಿದ್ದಕ್ಕೆ ಯುವಕರ ಗುಂಪೊಂದು ಪ್ರಜ್ವಲ್ ಅವರನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಧಳಿಸಿ, ಭೀಕರವಾಗಿ ಕೊಲೆ ಮಾಡಿದ್ದಾರೆ.ಸಾಣಾ ಮರಾಠಿ, ನಾಗೇಶ್ ಪಾಟೀಲ್, ಪಾಂಡು ಮರಾಠಿ ಎಂಬುವವರೆ ಕೊಲೆ ಮಾಡಿರುವ ಆರೋಪಿಗಳು.ಕೊಲೆ ನಡೆದ ಕೆಲ ಗಂಟೆಗಳಲ್ಲಿಯೇ ಆರೋಪಿಗಳನ್ನು ಯಲ್ಲಾಪುರ ಪೊಲೀಸರು ಬಂಧನ ಮಾಡುವಲ್ಲಿ ಯಶಸ್ವಿ ಆಗಿದ್ದಾರೆ.ಘಟನೆಯ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.