ಬ್ರಹ್ಮಾವರ ದ ಬಾರ್ಕುರಿನಲ್ಲಿ ಶೂಟ್ ಮಾಡಿ ಯುವಕನ ಕೊಲೆ
ಉಡುಪಿ : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರು ಇಲ್ಲಿನ ಹನೆಹಳ್ಳಿಯಲ್ಲಿ ವ್ಯಕ್ತಿಯೋರ್ವನನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ಕೊಲೆಯಾದ ವ್ಯಕ್ತಿ ಕೃಷ್ಣ(38) ಎಂದು ತಿಳಿದು ಬಂದಿದೆ.
ಈತ ಗಾರೆ ಕೆಲಸ ಮಾಡಿಕೊಂಡಿದ್ದ ಕೃಷ್ಣ ವಿವಾಹಿತನಾಗಿದ್ದರೂ ಮನೆಯಲ್ಲಿ ಒಬ್ಬನೇ ವಾಸವಾಗಿದ್ದರು.ಇವನನ್ನು ಯಾರೂ ದುಷ್ಕರ್ಮಿಗಳು ಗುಂಡು ಹರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಫೈರಿಂಗ್ ಶಬ್ದ ಕೇಳಿದ್ದ ನೆರೆಮನೆಯವರು: ನೆರೆಮನೆಯವರು ಫೈರಿಂಗ್ ಶಬ್ದ ಕೇಳಿಸಿದ್ದು ಅದು ಪಟಾಕಿಯ ಶಬ್ದವೆಂದು ಸುಮ್ಮನೆ ಇದ್ದರು. ಮುಂಜಾನೆ ಈ ಕೃತ್ಯ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ಅರುಣ್, ಬ್ರಹ್ಮಾವರ ವೃತ್ತ ನಿರೀಕ್ಷಕರಾದ ದಿವಾಕರ್ ಪಿ. ಎಂ. ಹಾಗೂ ಠಾಣಾಧಿಕಾರಿ ಮಧು ಬಿ.ಇ. ಭೇಟಿ ನೀಡಿ ಪರಿಶೀಲಿಸಿದ್ದಾರೆ.ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಒಟ್ಟು ನಾಲ್ಕು ಸುತ್ತು ಗುಂಡು ಹಾರಿಸಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಕೃತ್ಯ ಎಸಗಲು ಕಾರಣವೇನು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.