ಕಿತ್ತೂರು, ಖಾನಾಪುರ ಎಲ್ಲಿದೇ ಎಂದು ಮ್ಯಾಪ್ ನಲ್ಲಿ ತೋರಿಸುವುದಕ್ಕೆ ಸಶಕ್ತರಲ್ಲದವರು
ಬಿಜೆಪಿ ಎಂ.ಪಿ ಟಿಕೆಟ್ ಕೇಳ್ತಾರೆ ಎಂದು ಭಟ್ಕಳ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಗುಡಗಿದ ಹಿಂದೂ ಹುಲಿ
ಭಟ್ಕಳ: ಕಿತ್ತೂರು, ಖಾನಾಪುರ ಎಲ್ಲಿದೇ ಎಂದು ಮ್ಯಾಪ್ ನಲ್ಲಿ ತೋರಿಸುವುದಕ್ಕೆ ಸಶಕ್ತರಲ್ಲದವರು ರಾಜಕಾರಣ ಬಗ್ಗೆ ಮಾತನಾಡುತ್ತಾರೆ. ಯಾರಾದ್ರು ಸಶಕ್ತ ವೀರ ಯುವಕರು ಇದ್ದರೇ, ಧಮ್ ಇದ್ದವರು ಯಾರಾದ್ರೂ ಇದ್ರೆ ಬಂದು ಈ ಕುರ್ಚಿ ಮೇಲೆ ಬಂದು ಕುಳಿತುಕೊಳ್ಳಿ ಎಂದು ಕುರ್ಚಿಯನ್ನು ಎತ್ತಿ ಹಿಡಿದು ಸಂಸದ ಅನಂತಕುಮಾರ್ ಹೆಗಡೆ ಪಂಥ್ವಾಹನ ನೀಡಿದರು.
ಭಟ್ಕಳದ ಮಾವಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಯಾರಾದ್ರೂ ಧಮ್ ಇದ್ದವರು, ವೀರರು ಇದ್ದವರು ಈ ಕುರ್ಚಿ ಮೇಲೆ ಬಂದು ಕೂಲಿತುಕೊಳ್ಳಿ, ಈಗಲೇ ನಾನು ಇಲ್ಲಿಂದ ಈ ಕುರ್ಚಿ ಇಟ್ಟು ನಿರ್ಗಮಿಸುತ್ತೇನೆ ಎಂದು ಆಕ್ರೋಶ ಭರಿತ ಮಾತನಾಡಿದರು.
ಸ್ವಾಮೀ ಚುನಾವಣೆ ಗೆಲ್ಲಬೇಕು, ಆಶಾಢ ಭೂತಿತನದಿಂದ ಚುನಾವಣೆ ಗೆಲ್ಲುವುದು ಕಷ್ಟ, ಚುನಾವಣೆ ಡೆಮಾಕ್ರೆಟಿಕ್ ವಾರ್ , ಒಂದೊಂದು ಓಟು ಕೂಡ ಮುಖ್ಯ. ಇಂತಹ ಮಾತುಗಳಿಂದ ಒಂದೊಂದೇ ಓಟು ಕಟ್ ಆಗ್ತಾವೆ. ನಾನು ಸೋಲುವುದಕ್ಕೆ ಒಂದೇ ಓಟು ಸಾಕು. ಅವ್ನತ್ರ ಎಷ್ಟು ಓಟು ಇವೇ, ಅಂವ ಹೇಗೆ ಗೆಲ್ತಾ ಎನ್ನುವ ಉಡಾಫೆ ಮಾತುಗಳೇ ನಮ್ಮನ್ನು ಸೋಲಿಸುವುದಕ್ಕೆ ಕಾರಣ ಆಗುತ್ತವೇ ಎಂದು ಎದುರಾಳಿಗಳಿಗೆ ಟಕ್ಕರ್ ಕೊಟ್ಟರು.
ಸಣ್ಣ ಮನಸ್ಸಿನ ವ್ಯಕ್ತಿಗಳು ಯಾವತ್ತು ದೊಡ್ಡವರಾಗಲು ಸಾಧ್ಯವಿಲ್ಲ, ತುಂಡಾ ಮನಸ್ಸಿನ ವ್ಯಕ್ತಿಗಳು ಎದ್ದು ನಿಲ್ಲುವುದಕ್ಕೆ ಸಾಧ್ಯವೇ ಇಲ್ಲ. ಬಿಜೆಪಿ ಗೆಲ್ಲಬೇಕು, ಯಾರೂ ಕೂಡ ಇಲ್ಲಿ ಶಾಶ್ವತವಲ್ಲ, ನಾನು ರಾಜಕಾರಣಿಯಾಗಿ ಹುಟ್ಟಿಲ್ಲ, ರಾಜಕಾರಣಿಯಾಗಿ ಸಾಯಲ್ಲ ಎಂದು ಹೇಳುವ ಮೂಲಕ ತಮ್ಮ ಎದುರಾಳಿಗಳಿಗೆ ಸಖತ್ ಎಟು ಕೊಟ್ಟಿದ್ದಾರೆ.