ಲಾಡ್ಜ್ ವೊಂದರಲ್ಲಿ ಹೈಟೆಕ್ ವೇಶ್ಯಾವಾಟಿಕೆ ಪೊಲೀಸರ ದಾಳಿ
ಉಡುಪಿ : ನಗರದ ಹಳೆ ಸರ್ಕಾರಿ ಬಸ್ಟಾಂಡ್ ಸಮೀಪದ ಸಾಯಿ ರೆಸಿಡೆನ್ಸಿ ಲಾಡ್ಜ್ ವೊಂದರಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ತಿಳಿದು ಉಡುಪಿ ನಗರ ಠಾಣೆಯ ಪೊಲೀಸರು ಕೆಲವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸಾಯಿ ಲಾಡ್ಜ್ ನಡೆಸುತ್ತಿರುವ ಅದರ ಮಾಲೀಕ ಯಶೋಧರ್ ಪೂಜಾರಿ ಪರಾರಿಯಾಗಿದ್ದಾನೆ ಎಂದು ತಿಳಿಯಲಾಗಿದೆ.ಮೂಲತಃ ಸಜಿಪ ನಿವಾಸಿ ಯಶೋಧರ್ ಪೂಜಾರಿ ಲಾಡ್ಜ್ ಕೆಳಗೆ ಲಾಂಡ್ರಿ ಕೂಡ ನಡೆಸುತ್ತಿದ್ದ ಈತ ಲಾಡ್ಜ್ ನಲ್ಲಿ ಹೈಟೆಕ್ ವೇಶ್ಯಾವಾಟಿಕೆ ಮಾಡುತ್ತಿದ್ದಾನೆ ಎಂಬ ಸಾರ್ವಜನಿಕರು ಆರೋಪಿಸಿದ್ದರು ಎಂದು ತಿಳಿದು ಬಂದಿದೆ.
ವಿಷಯ ತಿಳಿದ ಉಡುಪಿ ನಗರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್ ಅವರ ತಂಡ ಲಾಡ್ಜ್ ಗೆ ದಾಳಿ ನಡೆಸಿ ಕೆಲವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ಹಾಗೂ ಹೊಟೇಲ್ ಮ್ಯಾನೇಜರ್ ನನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮಾಹಿತಿ ತಿಳಿಯಲಾಗಿದೆ.
ಈ ಸಾಯಿ ಲಾಡ್ಜ್ ನಲ್ಲಿ ಕೆಲವು ಸಮಯಗಳಿಂದ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಆರೋಪ ಕೇಳಿ ಬಂದಿತ್ತು.
ಪೊಲೀಸರರು ದಾಳಿ ನಡೆಸಿದ ವಿಷಯ ತಿಳಿದ ಲಾಡ್ಜ್ ಮಾಲೀಕ ಯಶೋಧರ್ ಪೂಜಾರಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.