ಭಟ್ಕಳ ತಾಲೂಕಿನ ಹೇಬಳೆ ಗ್ರಾಮದ ತೆಂಗಿನಗುಂಡಿ ಬಂದರಿನಲ್ಲಿ ಸಂಸದ ಅನಂತಕುಮಾರ ಮುಂದಾಳತ್ವದಲ್ಲಿ ಹಾರಿಸಿದ್ದ ಹನುಮಧ್ವಜವನ್ನು ಹಾಗೂ ವೀರ ಸಾವರ್ಕರ್ ನಾಮಫಲಕ ತೆರವು- ಸಂಸದ ಅನಂತಕುಮಾರ ಸೇರಿ 20ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲು
ಭಟ್ಕಳ: ತಾಲೂಕಿನ ಹೇಬಳೆ ಗ್ರಾಮದ ತೆಂಗಿನಗುಂಡಿ ಬಂದರಿನಲ್ಲಿ ಸಂಸದ ಅನಂತಕುಮಾರ ಮುಂದಾಳತ್ವದಲ್ಲಿ ಹಾರಿಸಿದ್ದ ಹನುಮಧ್ವಜವನ್ನು ಹಾಗೂ ವೀರ ಸಾವರ್ಕರ್ ನಾಮಫಲಕವನ್ನು ಬುಧವಾರ ಮಧ್ಯರಾತ್ರಿ ತೆರವುಗೊಳಿಸಿದ ಘಟನೆ ಬೆಳಕಿಗೆ ಬಂದಿದೆ.
ಕಳೆದೆರಡು ದಿನದ ಹಿಂದೆ ಕಾರ್ಯಕರ್ತರ ಭೇಟಿಗಾಗಿ ಭಟ್ಕಳಕ್ಕೆ ಆಗಮಿಸಿದ್ದ ಸಂಸದ ಅನಂತಕುಮಾರ್ ಹೆಗಡೆ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ವೀರ ಸಾವರ್ಕರ್ ನಾಮಫಲಕ ಹಾಗೂ ಹನುಮಧ್ವಜವನ್ನು ಸ್ಥಾಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಂಸದ ಅನಂತಕುಮಾರ್ ಸಹಿತ ಹಲವು ಬಿಜೆಪಿಗರ ಮೇಲೆ ಪ್ರಕರಣ ಕೂಡ ದಾಖಲಾಗಿತ್ತು.
ಆದರೆ ಬುಧವಾರ ತಡರಾತ್ರಿ ವೇಳೆ ಪೋಲಿಸ್ ಬಂದೊಬಸ್ತ್‌ನಲ್ಲಿ ಗ್ರಾಮ ಪಂಚಾಯತ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಧ್ವಜವನ್ನು ತೆರವುಗೊಳಿಸಿದ್ದು, ಸ್ಥಳದಲ್ಲಿ ಅಹಿತಕರ ಘಟನೆ ನಡೆಯದಂತೆ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕಳೆದ ಜ.28ರಂದು ಕೂಡ ಗ್ರಾಮ ಪಂಚಾಯತಿ ಅಧಿಕಾರಿಗಳು ಜೆಸಿಬಿ ಮೂಲಕ ಈ ಹಿಂದೆ ಇದ್ದ ನಾಮಫಲಕವನ್ನು ತೆರವುಗೊಳಿಸಿದ್ದು, ಅದರ ಮರುಸ್ಥಾಪನೆಗೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದನ್ನು ಉಲ್ಲೇಖಿಸಬಹುದಾಗಿದೆ.