*ಅಂಕೊಲಾದಲ್ಲಿ ಯಾರ ಭಯವಿಲ್ಲದೇ ರಾಜಾರೋಷವಾಗಿ ಹಲವು ಗ್ರಾಮಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಚಿರೇಕಲ್ಲು ಅಕ್ರಮ ಗಣಿಗಾರಿಕೆ*: ಗೊತ್ತಿದ್ಫು ಕಣ್ಣ್ ಮುಚ್ಚಿ ಕುಳಿತ ಗಣಿ ಮತ್ತು ಭೂ ವಿಜ್ಞಾನ ಇಲಾಖೆ?
ವರದಿ- ಸುಪ್ರಿಯಾ ನಾಯ್ಕ ಅಂಕೋಲಾ
ಅಂಕೋಲಾ :ಕರ್ನಾಟಕದ ಬಾಡೋಲಿ ಇನ್ನು ಕೆಲವು ದಿನಗಳಲ್ಲಿ ಅಕ್ರಮ ದಂದೆಗಳ ಬೀಡು ಎಂದು ಕರೆಯಲ್ಪಡುವುದರಲ್ಲಿ ಆಶ್ಚರ್ಯವಿಲ್ಲ.
ಯಾಕೆಂದರೆ ಇಲ್ಲಿ ದಿನದಿಂದ ದಿನಕ್ಕೆ ಅಕ್ರಮದಂದೆಗಳು ಹಾಗೂ ಅಕ್ರಮ ದಂದೆಕೋರರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ.
ಸರ್ಕಾರದಿಂದ ಕಲ್ಲು ಗಣಿಗಾರಿಕೆಗೆ ನಿರ್ಬಂಧ ವಿದ್ದರೂ ಸಹ ಹಾಡು ಹಗಲಲ್ಲೆ ತಾಲೂಕಿನ ಹಲವು ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುತ್ತಿದೆ ಅಕ್ರಮ ಚಿರೆಕಲ್ಲು ಗಣಿಗಾರಿಕೆ..
ಜನಸಾಮಾನ್ಯರ ಕಣ್ಣಿಗೆ ಕಾಣುತ್ತಿರುವ ಈ ಅಕ್ರಮ ಗಣಿಗಾರಿಕೆಗೆ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಯವರ ಗಮನಕ್ಕೆ ಬಾರದೆ ಇರುವುದು ಜನಸಾಮಾನ್ಯರಿಗೆ ಆಶ್ಚರ್ಯವನ್ನುಂಟು ಮಾಡಿದೆ.
ಅಧಿಕಾರಿಗಳು ಸಹ ಅಕ್ರಮದಂದೆಕೋರರಿಗೆ ಮಾರುಹೋಗಿದ್ದಾರೆಯೋ?ಏನೋ ಎಂದು ಜನಸಾಮಾನ್ಯರು ಪ್ರಶ್ನೆ ಮಾಡುವಂತೆ ಮಾಡಿದೆ.
ಅಂಕೋಲಾದಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗಳ ಪಟ್ಟಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ತುಂಬಾ ಖೇದನಿಯ ವಿಷಯ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕರು ಏನು ಮಾಡದೇ ಇರುವುದು ಜನರಿಗೆ ಸರ್ಕಾರದ ಮೇಲೂ ನಂಬಿಕೆ ಕಳೆದು ಕೊಳ್ಳುವಂತೆ ಮಾಡಿದೆ.
ಇಂತಹ ಅಕ್ರಮ ದಂದೆಕೋರರು ಅಕ್ರಮ ಹಣ ದಿಂದಲೇ ರಾಜರಾಗಿ ಮೆರೆದು, ಅಂಕೋಲದಲ್ಲಿ ದೊಡ್ಡ ದೊಡ್ಡ ಪ್ಲಾನ್ಸ್ ಅನ್ನು ಹಾಕಿ ತಾನೊಬ್ಬ ಸಮಾಜ ಸೇವಕನೆಂದು ಪೋಸು ಕೊಟ್ಟು ಮೆರೆಯುತ್ತಿದ್ದಾರೆ.
ಅಂಕೋಲಾದಲ್ಲಿ ಅಕ್ರಮಕಲ್ಲುಗಾಣಿಗಾರಿಕೆ ಅಷ್ಟೇ ಅಲ್ಲದೆ, ಮಟ್ಕಾ, ಕೋಳಿ ಅಂಕ, ರಾಜ ರೋಷವಾಗಿ ನಡೆಯುತ್ತಾ ಬಂದಿದೆ.
ಎಷ್ಟೋ ವರ್ಷಗಳು ಕಳೆದರೂ, ಎಷ್ಟೋ ಅಧಿಕಾರಿಗಳು ಬಂದು-ಹೋದರು ಸಹ ಇಂತಹ ಅಕ್ರಮ ದಂದೆಗಳನ್ನು ತಡೆಯಲಾಗದೆ ಇರುವುದು ಅಧಿಕಾರಿಗಳ ಕಾರ್ಯಕ್ಷಮತೆ ಹಿಡಿದ ಕೈಗನ್ನಡಿಯಾಗಿದೆ.
ಅಕ್ರಮ ಗಣಿಗಾರಿಕೆಗೆ ಮೇಲಾಧಿಕಾರಗಳ ಅಥವಾ ಪ್ರಭಾವಿ ರಾಜಕಾರಣಿಗಳ ಕೈವಾಡವೇ ಅಥವಾ ಒತ್ತಡವೇ?!! ಎಂದು ಪ್ರಶ್ನಿಸುವಂತೆ ಮಾಡಿದೆ.
ಅಕ್ರಮ ದಂದೆ ಮಾಡುವವರಿಗೆ ಕಾನೂನು ಪ್ರಕಾರ ಶಿಕ್ಷೆಗಳಿದ್ದರೂ ಸಹ ಇಂತಹ ಅಕ್ರಮದಂದೆಕೋರರಿಗೆ ಬೆನ್ನೆಲುಬಾಗಿ ನಿಂತಿರುವವರು ಯಾರು ಎನ್ನುವುದೇ ಯಕ್ಷಪ್ರಶ್ನೆಯಾಗಿದೆ. ಇಂತಹ ಅಕ್ರಮ ದಂದೆಗಳಿಂದ ಸರಕಾರದ ರಾಜಧನ ಬೊಕ್ಕಸಕ್ಕೆ ಹೊಡೆತ ಬೀಳುತ್ತಿದ್ದರೂ ಸಹ ಅಧಿಕಾರಿಗಳ ಮೌನಕ್ಕೆ ಕಾರಣ ಅಧಿಕಾರಿಗಳಿಗೆ ಸಿಗುತ್ತಿರುವ ಹಫ್ತಾವೋ?! ಅಥವಾ ಅಧಿಕಾರಿಗಳ ನಿರ್ಲಕ್ಷ್ಯವೋ?! ಅದೇನೇ ಇದ್ದರೂ ಸಹ, ಅಕ್ರಮವಾಗಿ ಭೂಮಾತೆಯನ್ನು ಅಗೆದು ಬಗೆದು ತಿನ್ನುತ್ತಿರುವ ಇಂತಹ ಭೂಭಕ್ಷಕರಿಗೆ, ಹಾಗೂ ಅವರಿಗೆ ಸಹಕರಿಸುತ್ತಿರುವ ಭ್ರಷ್ಟ ಅಧಿಕಾರಿಗಳಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕೆನ್ನುವುದು ಪ್ರಜ್ಞಾವಂತ ಜನಸಾಮಾನ್ಯರ ಅಭಿಪ್ರಾಯವಾಗಿದೆ.