ಭಟ್ಕಳದ ಬೆಳ್ಕೆ ಸಮುದ್ರ ತೀರದಲ್ಲಿ ಕೃತಕ ಬಂಡೆ ಅಳವಡಿಕೆ ಕಾರ್ಯಕ್ಕೆ ಚಾಲನೆ ನೀಡಿದ ರಾಜ್ಯ ಮೀನುಗಾರ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಾಂಕಳ ವೈದ್ಯ
ಭಟ್ಕಳ-ಭಟ್ಕಳದ ಬೆಳ್ಕೆ ಸಮುದ್ರ ತೀರದಲ್ಲಿ ಕೃತಕ ಬಂಡೆ ಅಳವಡಿಕೆ ಕಾರ್ಯಕ್ಕೆ, ರಾಜ್ಯ ಮೀನುಗಾರ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಸನ್ಮಾನ್ಯ ಮಂಕಾಳ್ ವೈದ್ಯರವರು ಇಂದು ಚಾಲನೆ ನೀಡಿದರು. ಕರಾವಳಿ ಭಾಗದ ಮಂಗಳೂರ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ಆಯ್ದ ಭಾಗಗಳಲ್ಲಿ ಕೃತಕ ಬಂಡೆ ಅಳವಡಿಕೆಗಾಗಿ 17.32 ಕೋಟಿ ರೂ ಅನುದಾನವನ್ನ ಬಿಡುಗಡೆಗೊಳಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಮಂಕಾಳ ವೈದ್ಯರವರು ತಿಳಿಸಿದ್ದರು.ಸ್ಥಳೀಯ ಬೆಳಕೆ ಮೀನುಗಾರರು ಮತ್ತು ಮುಖಂಡರು ಸಚಿವ ಮಾಂಕಳ ವೈದ್ಯರನ್ನು ಸನ್ಮಾನಿಸಿದರು. ಸಚಿವ ಮಾಂಕಳ ವೈದ್ಯ ಅವರು ಸಮುದ್ರ ದ ನೀರಿಗೆ ಜಿಗಿದು ಈಜಾಡಿದು ನೋಡುಗರಿಗೆ ವಿಶೇಷವಾಗಿತ್ತು.