ಮಾನಸಿಕ ಸ್ಥಿಮಿತ ಕಳೆದುಕೊಂಡ “ಅನಂತಕುಮಾರ್” ಹೆಗಡೆ- ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ. ಎಚ್.ನಾಯ್ಕ ಕುಮಟಾ
ಕುಮಟಾ- ನಮ್ಮ ಸಂವಿಧಾನ ದಡಿಯಲ್ಲಿ 6 ಬಾರಿ ಲೋಕಾಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಶ್ರೀ ಅನಂತಕುಮಾರ್ ಹೆಗ್ಡೆ ಯವರು ಮಾಧ್ಯಮದವರನ್ನು ಉದ್ದೇಶಿಸಿ “ಬೇವರ್ಸಿಗಳು” ಎಂದು ಸಂಬೋಧಿಸಿ ಹೀನಾಯವಾಗಿ ಮಾತನಾಡಿರುವುದನ್ನು ನಾನು ಅತ್ಯುಘ್ರವಾಗಿ ಖಂಡಿಸುತ್ತೇನೆ.
ಉತ್ತಮ ಸಂಸ್ಕಾರ ಕೊಡುವ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅನಂತಕುಮಾರ್ ಹೆಗ್ಡೆ ಬಾಯಿಂದ ಇತ್ತೀಚೆಗೆ ಹೊರಡುವ ಸಂಸ್ಕ್ರತಿಹೀನ ಪದಗಳನ್ನು ಕೇಳಿದರೆ ಬಹುಶಃ ಅವರ ತಂದೆ ತಾಯಂದಿರು ಸಹ ನಾಚಿಕೆ ಪಟ್ಟುಕೊಳ್ಳುವ ಸ್ಥಿತಿ ಏರ್ಪಟ್ಟಿದೆ.ಇವರ ಈ ರೀತಿಯ ದುಂಡಾವರ್ತನೆಯನ್ನು ಯಾರೂ ಸಹ ಒಪ್ಪಲಿಕ್ಕೆ ಸಾಧ್ಯವಿಲ್ಲ.
ಶಾಸಕಾಂಗ, ನ್ಯಾಯಾಂಗ,ಹಾಗೂ ಕಾರ್ಯಾಂಗಗಳಲ್ಲಿ ನಡೆಯುವ ತಪ್ಪುಒಪ್ಪುಗಳನ್ನು ತಿದ್ದುವ ಪತ್ರಿಕಾರಂಗವನ್ನು ಈ ರೀತಿ ಅವಮಾನಿಸುವುದು ಅಕ್ಷಮ್ಯ ಅಪರಾಧ ವಾಗುತ್ತದೆ.
ಅನಂತ್ ಕುಮಾರ್ ಹೆಗಡೆಯವರಿಗೆ ಅಹಂ ಎಷ್ಟು ಜಾಸ್ತಿಯಾಗಿದೆ ಯೆಂದರೆ ತನ್ನನ್ನು ಆನೆಗೆ ಹೋಲಿಸಿಕೊಂಡು ಮಾಧ್ಯಮದವರನ್ನು ಹೀಯಾಳಿಸಿದ ಪರಿ ನೋಡಿದರೆ ಸ್ಥಿಮಿತ ಕಳೆದುಕೊಂಡವರಂತೆ ಭಾಸವಾಗುತ್ತಿದೆ.
ಅಲ್ಲದೇ ನಿನ್ನೆ ಅಂಕೋಲ ತಾಲ್ಲೂಕಿನಲ್ಲಿ ಹೆಲ್ಮೆಟ್ ಹಾಕಿಕೊಳ್ಳದೇ ಬೆಂಬಲಿಗರೊಂದಿಗೆ ಬೈಕ್ ರಾಲಿ ನಡೆಸಿರುವ ಹೆಗಡೆಯವರು ಕಾನೂನಿಗೆ ಸ್ವಲ್ಪವೂ ಗೌರವ ಕೊಡದೇ ಕಾನೂನನ್ನು ಉಲ್ಲಂಘಿಸಿರುವುದು ಎದ್ದುಕಾಣುತ್ತದೆ ಅಲ್ಲದೇ ಜ್ಯಾತ್ಯಾತೀತ ತತ್ವದಡಿಯಲ್ಲಿ ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಿ ಆರ್ಥಿಕವಾಗಿ,ಸಾಮಾಜಿಕವಾಗಿ,ಶೈಕ್ಷಣಿಕವಾಗಿ,ರಾಜಕೀಯವಾಗಿ ಸಮಾನತೆ ತರುವ ನಿಟ್ಟಿನಲ್ಲಿ ಡಾ.ಬಿ. ಆರ್.ಅಂಬೇಡ್ಕರ್ ರವರ ನೇತ್ರತ್ವದಲ್ಲಿ ರಚನೆಯಾದ ಭಾರತ ದೇಶದ ಸಂವಿಧಾನ ಬದಲಾಯಿಸುವ ಅನಂತ್ ಕುಮಾರ್ ರವರ ಹೇಳಿಕೆಯನ್ನು ಗಮನಿಸಿದರೆ ಕೇವಲ ಅವರಿಗೆ ವೋಟ್ ಹಾಕಿ ಗೆಲ್ಲಿಸಲು ಮಾತ್ರ ಹಿಂದು ಧರ್ಮದಲ್ಲಿ ಇರುವ ಹಿಂದುಳಿದ ವರ್ಗ,ದಲಿತ ವರ್ಗ, ಬಡ, ಮಧ್ಯಮ ವರ್ಗದ ಅವಶ್ಯಕತೆ ಇರುವುದು ಕಂಡುಬರುತ್ತದೆ.
ಈಗಿನ ಭಾರತ ದೇಶದ ಸಂವಿಧಾನ ಇರುವುದರಿಂದ ಮಾತ್ರ ಹಿಂದು ಧರ್ಮದಲ್ಲಿ ಇರುವ ಹಿಂದುಳಿದ ವರ್ಗ,ದಲಿತ ವರ್ಗ, ಬಡ, ಮಧ್ಯಮ ವರ್ಗದವರು ಆರ್ಥಿಕವಾಗಿ,ಸಾಮಾಜಿಕವಾಗಿ,ಶೈಕ್ಷಣಿಕವಾಗಿ,ರಾಜಕೀಯವಾಗಿ ಅಭಿವೃದ್ಧಿ ಸಾಧಿಸುತ್ತಾ ಸಮಾನತೆ ಪಡೆಯುವ ಹಾದಿಯಲ್ಲಿ ಸಾಗುತ್ತಿದ್ದಾರೆ.
ಅನಂತ್ ಕುಮಾರ್ ಹೆಗಡೆಯವರು ಸಂವಿಧಾನ ಬದಲಿಸಲು ಹೊರಟರೆ ಇಷ್ಟು ದಿನ ಇವರನ್ನು ಸಂಸದ್ ಸದಸ್ಯರನ್ನಾಗಿ ಆಯ್ಕೆ ಮಾಡಿದ ಹಿಂದೂ ಧರ್ಮದ ಹಿಂದುಳಿದ ವರ್ಗ,ದಲಿತ ವರ್ಗ, ಬಡ, ಮಧ್ಯಮ ವರ್ಗದವರ ಪಾಡೇನು?.
ಇಷ್ಟು ದಿನ ಹಿಂದೂ ಧರ್ಮವನ್ನು ರಕ್ಷಣೆ ಮಾಡುತ್ತೇನೆ ಎಂದು ಬೊಬ್ಬಿರಿಯುತ್ತಿದ್ದ ಹೆಗಡೆಯವರು ಈಗ ತನಗೆ ಮತ ನೀಡಿ ಆಯ್ಕೆ ಮಾಡಿರುವ ಜನರ ಮೂಲಕ್ಕೇ ಕೊಡಲಿಯೇಟು ಹಾಕುತ್ತೇನೆ ಎಂದ ಹಾಗಲ್ಲವೇ ಇವರ ಮಾತು.
ಹದ್ದು ಮೀರಿ ಕಾನೂನುಬಾಹಿರವಾಗಿ ಅಸಾಂವಿಧಾನಿಕ ,ಮಾತನಾಡುತ್ತಿರುವ ಇಂತಹವರಿಗೆ ನ್ಯಾಯಾಂಗ ಇಲಾಖೆಯೇ ಸ್ವಯಂ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ. ಎಚ್.ನಾಯ್ಕ ಕುಮಟಾ ತಿಳಿಸಿದ್ದಾರೆ.