ಅಕ್ರಮವಾಗಿ ಸಾಗವಾನಿ ಮರದ ಕಟ್ಟಿಗೆ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಮರ ಕಳ್ಳರನ್ನು ಬಂದಿಸಿದ ಮಂಕಿ ವಲಯ ಅರಣ್ಯ ಅಧಿಕಾರಿಗಳು
ಭಟ್ಕಳ-ಹೊನ್ನಾವರ ವಿಭಾಗ ಭಟ್ಕಳ ಉಪವಿಭಾಗ ಮಂಕಿ ವಲಯ ವ್ಯಾಪ್ತಿಯ ಹೊನ್ನಾವರ ತಾಲೂಕಿನ ಹಡಿಕಲ್ ಅರಣ್ಯ ಸರ್ವೆ ನಂ. ೧೯ ರಲ್ಲಿನ ಸಾಗ ಮತ್ತು ಭರಣಗಿ ಮರ ಕಡಿದು ತುಂಡುಗಳನ್ನು ತಯಾರಿಸಿ ಆಟೋ ರಿಕ್ಷಾ (ಏಂ-೪೭ ಂ-೦೪೭೫) ಮತ್ತು ಖಿಂಖಿA ಂಅಇ ಏಂ-೧೯ ಂಃ-೨೦೫೪ ನೇದರಲ್ಲಿ ಸಾಗಿಸುತ್ತಿದ್ದ ಆರೋಪಿತರನ್ನು ಬಂಧಿಸಲಾಗಿರುತ್ತದೆ. ಆರೋಪಿಗಳಾದ ನಾಗರಾಜ ಈಶ್ವರ ನಾಯ್ಕ ಸಾ||ಹಡಿಕಲ್, ಸಂದೀಪ ಕೇಶವ ನಾಯ್ಕ ಸಾ||ಚಿತ್ತಾರ, ಗಂಗಾಧರ ತಿಮ್ಮಪ್ಪ ಆಚಾರಿ ಸಾ||ಕೆಳಗಿನ ಇಡಗುಂಜಿ, ಸಂದೀಪ ರಮೇಶ ನಾಯ್ಕ ಸಾ||ನೇಸಲ್ನೀರ್, ಗೌರೀಶ ಮಂಜುನಾಥ ನಾಯ್ಕ ಸಾ||ನೇಸಲ್ನೀರ್, ಪ್ರವೀಣ ವಾಮನ ನಾಯ್ಕ ಸಾ||ನೇಸಲ್ನೀರ್ ಮತ್ತು ಪ್ರಕಾಶ ರಾಮ ಗೌಡ ಸಾ||ಅಡಿಕೆಕುಳಿ ಇವರನ್ನು ದಸ್ತಗಿರಿ ಮಾಡಿ ಬಂಧಿಸಲಾಗಿದೆ. ಬಂಧಿತರಿAದ ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾ ಮತ್ತು ಟಾಟಾ ಎಸಿಇ ವಾಹನ ವಶಪಡಿಸಿಕೊಳ್ಳಲಾಗಿದೆ. ಮತ್ತು ಒಂದು ತಿಂಗಳ ಹಿಂದೆಯಷ್ಟೆ ಕೆಳಗಿನ ಇಡಗುಂಜಿಯ ಇದೇ ರಥ ಶಿಲ್ಪಿ ಗಂಗಾಧರ ಆಚಾರಿ ಇವರ ಕಟ್ಟಿಗೆ ಗೋಡೌನಿನಲ್ಲಿ ಅಕ್ರಮವಾಗಿ ದಾಸ್ತಾನಿಟ್ಟ ಸಾಗವಾನಿ ಕಟ್ಟಿಗೆಗಳನ್ನು ಜಫ್ತಿಪಡಿಸಲಾಗಿದ್ದು ಪುನಃ ಸದರಿ ಪ್ರಕರಣದಲ್ಲಿಯೂ ಸಹ ಇವರ ಗೋಡೌನಿನಲ್ಲಿ ಅಕ್ರಮ ಕಟ್ಟಿಗೆಗಳು ಕಂಡು ಬಂದು ಜಫ್ತಿಪಡಿಸಲಾಗಿರುತ್ತದೆ.
ಕಾರ್ಯಾಚರಣೆಯಲ್ಲಿ ಡಿಸಿಎಫ್ ರವಿಶಂಕರ, ಎಸಿಎಫ್ ಕೆ. ಟಿ. ಬೋರಯ್ಯ, ಆರ್ಎಫ್ಓ ಸವಿತಾ ಆರ್. ದೇವಾಡಿಗ, ಡಿಆರ್ಎಫ್ಓ ಶಿವಾನಂದ ಇಂಚಲ, ಯೋಗೇಶ ಮೊಗೇರ, ಮಹಾದೇವ ಮಡ್ಡಿ, ಸಂದೀಪ ಎಸ್. ಅರ್ಕಸಾಲಿ, ಮಂಜುನಾಥ ನಾಯ್ಕ, ಜಿ. ಸಂತೋಷ, ಷಣ್ಮುಖ ಹವಳಗಿ, ಲೋಹಿತ್ ನಾಯ್ಕ , ರೇಷ್ಮಾ ಜಿ. ನಾಯ್ಕ, ಅರಣ್ಯ ರಕ್ಷಕರಾದ ಮಹಾಬಲ ಗೌಡ, ಶಿವಾನಂದ ಪೂಜಾರಿ, ಸುರೇಂದ್ರನಾಥ ನಾಯ್ಕ ದೇವೇಂದ್ರ ಗೊಂಡ, ಬಸವರಾಜ ಲಮಾಣಿ, ಬಸಯ್ಯ ಸಂಕಣ್ಣವರ, ರಾಮ ನಾಯ್ಕ, ವಿನಾಯಕ ನಾಯ್ಕ ಇದ್ದರು.