ಅಸಮರ್ಥ ಗೃಹ ಸಚಿವರು ರಾಜೀನಾಮೆ ನೀಡಲಿ; ಅನಂತಮೂರ್ತಿ ಆಗ್ರಹ
ಶಿರಸಿ: ಇತ್ತಿಚಿಗೆ ಹುಬ್ಬಳ್ಳಿಯ ಕಾಲೇಜಿನಲ್ಲಿ ಹಾಡುಹಗಲೇ ಫಯಾಜ್ ಎನ್ನುವ ಜಿಹಾದಿ ವ್ಯಕ್ತಿಯಿಂದ ಹತ್ಯೆಗೊಳಗಾದ ಹಿಂದೂ ಸಮಾಜದ ಹೆಣ್ಣು ಮಗಳು ನೇಹಾ ಹೀರೇಮಠ್ ಸಾವಿಗೆ ಜಿಲ್ಲಾ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ, ಉದ್ಯಮಿ ಅನಂತಮೂರ್ತಿ ಹೆಗಡೆ ಕಂಬನಿ ಮಿಡಿಯುವುದರ ಜೊತೆಗೆ ಈ ದುಷ್ಕೃತ್ಯವನ್ನು ಉಗ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಶಿಕ್ಷಣಕ್ಕಾಗಿ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ಸುರಕ್ಷಿತೆ ಇಲ್ಲದಂತಾಗಿರುವುದು ಕಾಂಗ್ರೆಸ್ ಸರಕಾರದ ಬೇಜವಾಬ್ದಾರಿ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇವರ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ನಮ್ಮ ಹಿಂದೂ ಸಮಾಜದ ಮನೆ ಮಕ್ಕಳು ಹತ್ಯೆಗೀಡಾಗುತ್ತಿರುವುದು ನಿಜಕ್ಕೂ ದೌರ್ಭಾಗ್ಯದ ಸಂಗತಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಸಮರ್ಥರಾದ ಗೃಹ ಸಚಿವರು ಈ ಕೂಡಲೇ ರಾಜೀನಾಮೆ ನೀಡಬೇಕು. ತಪ್ಪಿತಸ್ಥ ಫಯಾಜ್ ನಿಗೆ ನೀಡುವ ಶಿಕ್ಷೆ ಮುಂದೆ ಸಮಾಜದಲ್ಲಿ ಧನಾತ್ಮಕ ಬದಲಾವಣೆಯ ಜೊತೆಗೆ ಜನಸಾಮಾನ್ಯರಲ್ಲಿ ಧೈರ್ಯ ಮೂಡುವಂತಾಗಬೇಕು.
ಪಾಲಕರೂ ಸಹ ಶಾಲಾ-ಕಾಲೇಜಿಗೆ ಹೋಗುವ ಮಕ್ಕಳ ಚಲನವಲನಗಳ ಕುರಿತಾಗಿ ಹೆಚ್ಚು ಜವಾಬ್ದಾರಿ ವಹಿಸಬೇಕು. ಇಂತಹ ದುಷ್ಕೃತ್ಯವನ್ನು ಸಮಸ್ತ ಹಿಂದೂ ಸಮಾಜ ಬಲವಾಗಿ ಖಂಡಿಸುತ್ತದೆ. ಮತ್ತು ಅಪರಾಧಿಗೆ ಈ ಕೂಡಲೇ ಕಠಿಣ ಶಿಕ್ಷೆಯನ್ನು ಕಾನೂನು ನೀಡುವಂತಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.