ಮಂಗಳೂರಿನಲ್ಲಿ ನಡು ರಸ್ತೆಯಲ್ಲಿ ಕೈ ಕೊಟ್ಟ BMW ಕಾರು- 2 ಜನ ಮುಸ್ಲಿಂ ಯುವಕರ ಜೊತೆ ಸಿಕ್ಕಿ ಬಿದ್ದ ಹಿಂದೂ ಯುವತಿ
ಮಂಗಳೂರು: ಇಬ್ಬರು ಮುಸ್ಲಿಂ ಯುವಕರ ಜೊತೆ ಹಿಂದೂ ಯುವತಿಯೊಬ್ಬಳು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದು, ಸದ್ಯ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಮುಕ್ಕದಲ್ಲಿ ನಡೆದಿದೆ.
ಮುಕ್ಕ ಸಮೀಪ ಒಂದು ಕಾರಿನಲ್ಲಿ ಇಬ್ಬರು ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯೊಬ್ಬಳು ಸ್ಕೂಲ್ ಬಸ್ ಡ್ರೆöÊವರ್ ಜೊತೆ ಜಗಳವಾಡುತ್ತ ಹಿಗ್ಗಾಮುಗ್ಗಾ ಬೈದಾಡುತ್ತಿದ್ದ ಘಟನೆ ನಡೆದಿದೆ. ಬಳಿಕ ಸ್ಥಳದಿಂದ ಎಸ್ಕೇಪ್ ಆಗಲು ಯತ್ನಿಸುತ್ತಿದ್ದಂತೆ ಕಾರು ಕೈ ಕೊಟ್ಟಿದೆ. ಸ್ಥಳದಲ್ಲಿ ಜನ ಸೇರುತ್ತಿದ್ದಂತೆ ಇದು ಅನ್ಯಕೋಮಿನ ಜೋಡಿ ಎಂಬುದು ಬೆಳಕಿಗೆ ಬಂದಿದೆ. BMW ಕಾರಿಗೆ ಫುಲ್ ಟಿಂಟ್ ಅಳವಡಿಸಿದ್ದು, ಕಾರಿನ ಹಿಂದೆ ನಂಬರ್ ಪ್ಲೇಟ್ ಅಳವಡಿಸಿದೆ ಈ ರೀತಿ ಅನ್ಯಕೋಮಿನ ಜೋಡಿ ಸುತ್ತಾಡುತ್ತಿರುವುದು ಹಲವು ಅನುಮಾನಕ್ಕೆ ಎಡೆಮಾಡಿದೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಪದೇ ಪದೇ ಇಂತಹ ಘಟನೆಗಳು ಬೆಳಕಿಗೆ ಬರುತ್ತಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.