ಯಂಗ್ ಸ್ಟಾರ್ ವೆಲ್ಫೇರ್ ಆರ್ಗನೈಜೇಷನ್ ರವರ ನೇತೃತ್ವದಲ್ಲಿ ಭಟ್ಕಳದಲ್ಲಿ ಯಶಸ್ವಿಯಾಗಿ ನಡೆದ
ಆರೋಗ್ಯ ಕಾರ್ಡ್ ಶಿಬಿರ
ಭಟ್ಕಳ- ಭಟ್ಕಳದ ಮದೀನಾ ಕಾಲೋನಿ ಯಲ್ಲಿ ಕಳೆದ ಮೂರು ದಿನಗಳಿಂದ ಯಂಗ್ ಸ್ಟಾರ್ ವೆಲ್ಫೇರ್ ಆರ್ಗನೈಜೇಷನ್ ರವರ ನೇತೃತ್ವದಲ್ಲಿ ಹಮ್ಮಿಕೊಂಡಂತಹ ಸರ್ಕಾರಿ ಯೋಜನೆಯ ಅಡಿಯಲ್ಲಿ ಉಚಿತ ಆರೋಗ್ಯ ಕಾರ್ಡ್(ಆಭಾ ಕಾರ್ಡ್) ಮಾಡಿಸುವ ಶಿಬಿರವನ್ನು ಜೆ.ಡಿ.ಎಸ್ ಮುಖಂಡ ತಂಜಿಮ ಅಧ್ಯಕ್ಷ ಇನಾಯಿತುಲ್ಲ ಶಾಬಂದ್ರಿ ಹಮ್ಮಿಕೊಂಡಿದ್ದರು. ಈ ಶಿಬಿರದಲ್ಲಿ 400ಕ್ಕೂ ಹೆಚ್ಚು ಜನರು ಪಾಲ್ಗೊಂಡು ತಮ್ಮ ತಮ್ಮ ಆರೋಗ್ಯ ಕಾರ್ಡನ್ನು ಮಾಡಿಸಿಕೊಂಡರು. ಈ ಶಿಬಿರವು ಶುಕ್ರವಾರ ಸಂಜೆ 5:30 ಗಂಟೆಯವರೆಗೆ ನಡೆಯಿತು. ಮುಂದಿನ ದಿನಗಳಲ್ಲಿಯೂ ಇಂತಹ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳುವದಾಗಿ ಯಂಗ್ ಸ್ಟಾರ್ ವೆಲ್ಫೇರ್ ಆರ್ಗನೈಸೇಷನ್ ರವರು ಹೇಳಿದರು.ಕೆ.ಆರ್.ಎಸ್ ಪಕ್ಷದ ಮುಖಂಡ ಸಮಿಯುಲ್ಲಾ ನೇತೃತ್ವದಲ್ಲಿ ನೂರಾರು ಕಾರ್ಯಕರತರು ಭಾಗವಹಿಸಿದರು.