ಅಂಕೋಲಾ ಪುರಸಭೆಯಲ್ಲಿ ಆರ್ಟಿಐ ಕಾಯ್ದೆ ಕಗ್ಗೊಲೆ. ಮಾಹಿತಿ ಹಕ್ಕು ಕಾಯ್ದೆಯಲ್ಲಿ ಮಾಹಿತಿಗಳನ್ನು ನೀಡಲು ಮರೆಮಾಚಿರುವ ಭ್ರಷ್ಟ ಅಧಿಕಾರಿ. ಬಹುಮಹಡಿ ಕಟ್ಟಡದ ವಾಸಯೋಗ್ಯ ಪ್ರಮಾಣ ಪತ್ರ ನೀಡುವಾಗ ಭಾರಿ ಭ್ರಷ್ಟಾಚಾರ…!
ಅಂಕೋಲಾ-ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಕೋಲಾ ಪುರಸಭೆ ಅಭಿವೃದ್ಧಿ ಮಾಡುವ ವೇಗಕ್ಕಿಂತ ಭ್ರಷ್ಟಾಚಾರ ಮಾಡುವಲ್ಲಿ ಭಾರಿ ವೇಗದಲ್ಲಿ ಮುನ್ನುಗುತ್ತಿದೆ.. ಭ್ರಷ್ಟಾಚಾರದ ಕಾರ್ಮೋಡಗಳು ಗರ್ಜಿಸುತ್ತಿದೆ. ಯಾವುದೇ ಒಬ್ಬ ಸಾರ್ವಜನಿಕ ತಮ್ಮ್ ಕೆಲಸ ಕಾರ್ಯಕ್ಕೆ ಪುರಸಭೆಗೆ ಹೋದಾಗ ಹಣವಿಲ್ಲದೆ ಕೆಲಸ ಮಾಡುವುದಕ್ಕೆ ಸಾಧ್ಯವಿಲ್ಲ ಎಂಬುದು ಪುರಸಭೆಯಲ್ಲಿ ಜಗಜ್ಜಾಹಿರಾಗಿದೆ… ಇಡೀ ಆಡಳಿತ ವ್ಯವಸ್ಥೆ ಕೆಟ್ಟು ಕೆರ ಹಿಡಿದು ಹೋಗಿದೆ.
ವಿಷಯಕ್ಕೆ ಬರೋಣ : ಅಂಕೋಲಾ ಪುರಸಭೆಯಲ್ಲಿ ಬಹು ಮಹಡಿ ಕಟ್ಟಡ ಪರವಾನಿಗೆಯಿಂದ ಹಿಡಿದು ವಾಸ ಯೋಗ್ಯ ಪ್ರಮಾಣ ನೀಡುವಾಗ ಸಂಬಂಧಪಟ್ಟ ಕಚೇರಿ ಮುಖ್ಯಸ್ಥರು ಹಾಗೂ ಇಂಜಿನಿಯರ್ ಗಳು ಕರ್ನಾಟಕ ಮುನ್ಸಿಪಲ್ ಕಾಯ್ದೆ 1967 ಅಡಿ ಅಕ್ರಮ ಹಾಗೂ ನಿಯಮದ ಪ್ರಕಾರ ಕಾರ್ಯನಿರ್ವಹಿಸುತ್ತಿಲ್ಲದ ಕಟ್ಟಡಗಳ ಮೇಲೆ ತಪಾಸಣೆ ನಡೆಸಿ ಸೂಕ್ತ ಕಾನೂನು ಕ್ರಮವನ್ನು ಜರಗಿಸ್ ಬೇಕಾಗಿರುತ್ತದೆ… ಆದರೆ ಪುರಸಭೆಯಲ್ಲಿ ಬೇಲಿಯೇ ಎದ್ದು ಹೊಲ ಮೇದಂತೆ ಲಂಚ ದಾಸೆಗೆ ಅಪೂರ್ಣವಾದ ಕಟ್ಟಡಗಳಿಗೆ ಸ್ಥಳ ಪರಿಶೀಲನೆ ಮಾಡದೇ ವಾಸಯೋಗ್ಯ ಪ್ರಮಾಣ ಪತ್ರವನ್ನು ನೀಡಿ ಬಾರಿ ಭ್ರಷ್ಟಾಚಾರ ನಡೆಸುತ್ತಿರುವುದು ಮಾಹಿತಿ ಹಕ್ಕಿನಿಂದ ಬೆಳಕಿಗೆ ಬಂದಿದೆ.
ಈ ಬಗ್ಗೆ ಇನ್ನಷ್ಟು ಅನಧಿಕೃತ ಬಹುಮಹಡಿ ಕಟ್ಟಡಗಳ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಲ್ಲಿ ಮಾಹಿತಿ ಕಲೆಹಾಕಿ ಸಂಗ್ರಹಣೆ ಮಾಡುವ ಉದ್ದೇಶದಿಂದ ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿ ಕೇಳಲಾಗಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ನೀಡಬೇಕಾಗಿರುವ ಮಾಹಿತಿ ನೀಡದೆ ತಮಗೆ ಇಷ್ಟ ಬಂದಂತೆ ತಲೆ ಬುಡವಿಲ್ಲದ ಹಿಂಬರವನ್ನು ನೀಡಿ ದಿಕ್ಕು ತಪ್ಪಿಸುವ ಪ್ರಯತ್ನವನ್ನು ನಡೆಸಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆ 19(1) ರಡಿ ಪ್ರಥಮ ಮೇಲ್ಮನವಿ ಅರ್ಜಿಯನ್ನು ಅರ್ಜಿದಾರ ಮುಖ್ಯಾಧಿಕಾರಿಗೆ ಸಲ್ಲಿಸಿದರೆ ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರ ಹಾಜರಿಲ್ಲವೆಂದು ಮಾಹಿತಿಯನ್ನು ನೀಡದೆ ಅರ್ಜಿಯನ್ನು ನೇರವಾಗಿ ವಿಲೆಗೊಳಿಸಿ ಕರ್ನಾಟಕ ಮಾಹಿತಿ ಆಯೋಗದ ಆದೇಶದ ಸ್ಪಷ್ಟ ಉಲ್ಲಂಘನೆಯನ್ನು ಮಾಡಿದ್ದಾರೆ.
*ಬಹುಮಡಿ ಕಟ್ಟಡಗಳ ಮಾಲೀಕರಿಂದ ಲಂಚವನ್ನು ಸಂಗ್ರಹಣೆ ಮಾಡಲು ಅಧಿಕಾರಿಗಳನ್ನು ನೇಮಕ ಮಾಡಿದ್ದನೇ ಆ ಸ್ವಾಮಿ* : ಹೌದು ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಅನುಮತಿ. ಎನ್ ಓ ಸಿ. ಹೀಗೆ ಯಾವುದೇ ಕಡತವಿರಲಿ ಪ್ರತಿಯೊಂದು ಕಡತಕ್ಕು ಹೋಟೆಲ್ನ ಮೆನು ರೀತಿಯಲ್ಲಿ ಲಂಚದ ರೇಟ್ ಫಿಕ್ಸ್ ಮಾಡಲು ಅಕ್ರಮ.ಬೇನಾಮಿ ಕೆಲಸಗಳಿಗೆ ವಾರಾಸುದಾರರಾಗಿ ಆ ಸ್ವಾಮಿ ಕೆಲವು ಸಿಬ್ಬಂದಿಗಳನ್ನು ನೇಮಿಸಿಕೊಂಡಿರುವ ವಿಷಯ ಪುರಸಭೆಯಲ್ಲಿ ಗುಟ್ಟಾಗಿ ಏನು ಉಳಿದಿಲ್ಲ..
ಹಣ ಬರುವ ಜಾಗಗಳಿಗೆ ನಿದ್ದೆ ಮಂಪರಿನಲ್ಲಿ ನಡೆದು ಹೋಗುವ ಈ ಅಧಿಕಾರಿಗಳು. ಸಾರ್ವಜನಿಕರರು ಯಾವುದೇ ಯೋಜನೆಯನ್ನು ಕೇಳಲು ಬಂದರೆ ಅಥವಾ ಮಾಹಿತಿ ಹಕ್ಕಿನಲ್ಲಿ ಅರ್ಜಿ ಸಲ್ಲಿಸಿದರೆ ಆ ಅರ್ಜಿಗಳಿಗೆ ಮಾಹಿತಿ ದೊರಕಿಸದೆ. ಕಾನೂನು ಪರಿಣಿತರ ಜೊತೆ ಭಾರಿ ಚರ್ಚೆ ನಡೆಸಿ ಅರ್ಜಿಯನ್ನು ವಿಲೇ ಗೊಳಿಸುವ ಕೆಲಸ ನಡೆಸುತ್ತಿದ್ದಾರೆ. ಈ ಮೂಲಕ ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಿಂದ ಪುರಸಭೆ ವಿರುದ್ಧ ವ್ಯಾಪಕ ಟಿಕೆ ವ್ಯಕ್ತವಾಗಿದೆ.
ಮಾಹಿತಿ ಹಕ್ಕಿನ ಬೋರ್ಡನ್ನು ಕಚೇರಿಯ ಪ್ರಮುಖ ಸ್ಥಳದಲ್ಲಿ ಹಾಕದೇ ಮೂಲೆಗೆ ಬಿಸಾಡಿದ ಅಧಿಕಾರಿಗಳು : ಜನಸಾಮಾನ್ಯರಿಗೆ ಕಾಣುವಂತೆ ಪ್ರಮುಖ ಸ್ಥಳದಲ್ಲಿ ಇಡಬೇಕಾದ ಮಾಹಿತಿ ಹಕ್ಕಿನ ಬೋರ್ಡನ್ನು ಪುರಸಭೆಯಲ್ಲಿ ಒಂದು ಬಾಗಿಲ ಮೂಲೆಯಲ್ಲಿ ಬಿಸಾಡಿದ್ದಾರೆ. ಈ ಮೂಲಕ ಮಾಹಿತಿ ಹಕ್ಕು ಕಾಯ್ದೆ ಯ ಕಗ್ಗೊಲೆ ನಡೆಸುತ್ತಿರುವುದು ಸುಳ್ಳಲ್ಲ .
ಸರ್ಕಾರಿ ಕೆಲಸ ದೇವರ ಕೆಲಸ ಎಂದು ಪ್ರಮಾಣವಚನ ಮಾಡಿ ಸರ್ಕಾರಿ ನೌಕರಿಗೆ ಸೇರಿರುವ ಅಧಿಕಾರಿಗಳು ತಮ್ಮಲ್ಲಿರುವ ವಿವೇಕ ಹಾಗೂ ವಿವೇಚನೆಯಿಂದ ಸಾವಿರಾರು ಕುಟುಂಬಗಳ ಬದುಕು ಹಸನು ಮಾಡುವುದನ್ನು ಬಿಟ್ಟು ಸ್ವಾರ್ಥ ಸ್ವಜನ ಪಕ್ಷಪಾತ ಹಣದಾಸೆಗೆ ಮಾಡಬಾರದ ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸಿ ಜನರ ರಕ್ತವನ್ನು ಜೀರುಂಡೆ ಯಂತೆ ಹಿರುತ್ತಿರುವ ಅಂಕೋಲಾ ಪುರಸಭೆಯ ದುಷ್ಟಬುದ್ಧಿಯ ಭ್ರಷ್ಟ ಅಧಿಕಾರಿಗಳಿಗೆ ತಕ್ಕ ಶಿಕ್ಷೆ ಆಗಬೇಕು.. ಪುರಸಭೆಯ ಅಂಕೋಲಾದ ಆಡಳಿತ ಅಧಿಕಾರಿಯಾದ ಮಾನ್ಯ ಸಹಾಯಕ ಆಯುಕ್ತರು ಕುಮಟರವರು ಇಲ್ಲಿನ ಆಡಳಿತ ಯಂತ್ರ ವಿಫಲವಾಗಿರುವ ಬಗ್ಗೆ. ಬಹುಮಹಡಿ ಕಟ್ಟಡದ ವಾಸಯೋಗ್ಯ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ಅಕ್ರಮ ಎಷಗಿರುವ ಕಟ್ಟಡಗಳ& ಅಧಿಕಾರಿಗಳ ಬಗ್ಗೆ ತನಿಖೆ ಆಗಬೇಕು ಎಂಬುದು ಅಂಕೋಲಾ ಪ್ರಜ್ಞಾವಂತ ನಾಗರಿಕರ ಅಂಬೋಣ ವಾಗಿದೆ.