ಭಟ್ಕಳ ಮುಸ್ಲಿಂ ಯುತ್ ಫೆಡರೇಷನ್ (BMFY) ನ
ನೂತನ ಅಧ್ಯಕ್ಷರಾಗಿ ವಸೀವುಲ್ಲಾ ದಮ್ದಾ ಫಕಿ ನದ್ವಿ (ಅಲ್ ಫಲಾಹ್) ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಮುಬಾಶಿರ್ ಹುಸೇನ್ ಹಲ್ಲಾರೆ ಆಯ್ಕೆ
ಭಟ್ಕಳ: ಭಟ್ಕಳದ 24 ಕ್ರೀಡಾ ಸಂಘಟನೆಗಳ ಒಕ್ಕೂಟವಾಗಿರುವ ಭಟ್ಕಳ ಮುಸ್ಲಿಂ ಯುತ್ ಫೆಡರೇಷನ್ (BMFY) ನ ನೂತನ ಪದಾಧಿಕಾರಿಗಳ ಆಯ್ಕೆ ತಂಝೀಮ್ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಫೆಡರೇಷನ್ ನೂತನ ಅಧ್ಯಕ್ಷರಾಗಿ ವಸೀವುಲ್ಲಾ ದಮ್ದಾ ಫಕಿ ನದ್ವಿ (ಅಲ್ ಫಲಾಹ್) ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಮುಬಾಶಿರ್ ಹುಸೇನ್ ಹಲ್ಲಾರೆ (ಶಾಹೀನ್ ಮಖ್ದೂಮ್) ಸರ್ವಾನುಮತದಿಂದ ಆಯ್ಕೆಯಾದರು.
ಉಪಾಧ್ಯಕ್ಷ 1: ಅಡ್ವ. ಸೈಯದ್ ಇಮ್ರಾನ್ ಲಂಕಾ (ANFA) , ಉಪಾಧ್ಯಕ್ಷ 2: ಅಡ್ವ. ಅಫಕ್ ಕೋಲಾ (YMSA) , ಕಾರ್ಯದರ್ಶಿ: ಮೌಲ್ವಿ ಇಯಾದ್ ಎಸ್.ಎಂ (ಹನೀಫ್ ವೆಲ್ಫೇರ್) , ಕೋಶಾಧಿಕಾರಿ: ರಮೀಜ್ ಕೋಲ (ಮದೀನಾ) , ಲೆಕ್ಕಾಧಿಕಾರಿ: ರೋಶನ್ ಕುಂದುಂಗುಡ (ಅಲ್ ಹಿಲಾಲ್), ಶೈಕ್ಷಣಿಕ ಕಾರ್ಯದರ್ಶಿ: ವಸೀಮ್ ಅಸರಮಟ್ಟ (ಲಯನ್), ಸಾಮಾಜಿಕ ಕಾರ್ಯದರ್ಶಿ: ಜಹೀರ್ ಶೇಖ್ (ಯಂಗ್ಸ್ಟಾರ್ ), ಕ್ರೀಡಾ ಕಾರ್ಯದರ್ಶಿ: ತಲ್ಹಾ ತ್ರಿಚನಪಲ್ಲಿ (ರಾಯಲ್) ಶಿಸ್ತು ಸಮಿತಿ ಕಾರ್ಯದರ್ಶಿ: ಮೌಲವಿ ಮೀರಾ ಪೋತೆ (coastal kings) ಆಯ್ಕೆಯಾಗಿದ್ದಾರೆ.