ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ ಸಮೀಪ ಗುಡ್ಡ ಕುಸಿತದಿಂದ ನಾಪತ್ತೆಯಾದ ಜಗನ್ನಾಥ ನಾಯ್ಕ ಮನೆಗೆ ಭೇಟಿ ನೀಡಿ ಆವರ ಕುಟುಂಬಕ್ಕೆ ವಯಕ್ತಿಕ ಆರ್ಥಿಕ ಸಹಾಯ ನೀಡಿದ ಸಚಿವ ಮಧು ಬಂಗಾರಪ್ಪ
ಭಟ್ಕಳ-ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ ಸಮೀಪ ಕೆಲ ದಿನಗಳ ಹಿಂದೆ ಗುಡ್ಡ ಕುಸಿತದಿಂದ ಸಾಕಷ್ಟು ಹಾನಿಗೊಳಗಾಗಿದ್ದು, ಅನೇಕ ಸಾವು ನೋವು ಸಂಭವಿಸಿತ್ತು. ಶನಿವಾರ ಘಟನಾ ಸ್ಥಳಕ್ಕೆ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಈ ಭೀಕರ ದುರಂತದಲ್ಲಿ ನಾಪತ್ತೆಯಾದ ಅಂಕೋಲದ ಶ್ರೀ ಜಗನ್ನಾಥ್ ನಾಯ್ಕ್ ಅವರ ಮನೆಗೆ ತೆರಳಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ವೈಯಕ್ತಿಕ ಆರ್ಥಿಕ ಸಹಾಯ ನೀಡಿದರು ಹಾಗೂ ಸರ್ಕಾರದಿಂದ ಪರಿಹಾರ ಒದಗಿಸಿ ನೆಲೆ ಕಲ್ಪಿಸಿಕೊಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಿರಸಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಭೀಮಣ್ಣ ನಾಯ್ಕ್, ಕಾರವಾರ ಉಪವಿಭಾಗಾಧಿಕಾರಿ ಕುಮಾರಿ ಕಲ್ಯಾಣಿ ಕಾಂಬಳೆ, ತಹಶೀಲ್ದಾರ್ ಶ್ರೀ ಅನಂತ್ ಶಂಕರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಶ್ರೀ ಸಾಯಿ ಗಾಂವ್ಕರ್, ಅಂಕೋಲಾ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷರಾದ ಶ್ರೀ ಪಾಂಡುರಂಗ ಗೌಡ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.