ಕಾರವಾರ : ಸೀಬರ್ಡ್ ಮಾಹಿತಿಯನ್ನು ಅನ್ಯಶಕ್ತಿಗಳಿಗೆ ಮಾರುತ್ತಿದ್ದ ಮೂವರನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಆರೋಪಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ .ಹಣಕ್ಕಾಗಿ ಸೀಬರ್ಡ್ ಮಾಹಿತಿ, ಸೀಬರ್ಡ ಪ್ರದೇಶದ ಫೋಟೋಗಳನ್ನು ಕೆಲ ವಿರೋಧಿಗಳಿಗೆ ರವಾನಿಸಿದ್ದ ಮಾಹಿತಿ ಆಧರಿಸಿ, ರಾಷ್ಟ್ರೀಯ ತನಿಖಾ ದಳ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ರಾಷ್ಟ್ರೀಯ ತನಿಖಾ ದಳದ ಡಿವೈಎಸ್ಪಿ ಹಾಗೂ ಮೂವರು ಇನ್ಸ್ಪೆಕ್ಟರಗಳು ಕಾರವಾರ ಸಮೀಪದ ಸೀಬರ್ಡ್ ಐಎನ್ ಎಸ್ ಕದಂಬ ಪ್ರದೇಶಕ್ಕೆ ಆಗಮಿಸಿ, ತೋಡೂರು ಗ್ರಾಮದ ನಿವಾಸಿ ಸುನೀಲ್ ನಾಯ್ಕ, ಮುದುಗಾ ಗ್ರಾಮದ ನಿವಾಸಿ ಚೇತನ್ ತಾಂಡೇಲ್ ಹಾಗೂ ಅಂಕೋಲಾ ತಾಲೂಕಿನ ಹಳವಳ್ಳಿಯ ನಿವಾಸಿ ಅಕ್ಷಯ್ ರವಿ ನಾಯ್ಕ ಎಂಬಾತನನ್ನು ಬುಧವಾರ ವಶಕ್ಕೆ ಪಡೆದರು.
ಇದೇ ಪ್ರಕರಣದಲ್ಲಿ ಓರ್ವನನ್ನು ಗೋವಾದಿಂದ ಬಂಧಿಸಿದರೆ , ಇನ್ನಿಬ್ಬರನ್ನು ಸೀಬರ್ಡ್ ಪ್ರದೇಶದಲ್ಲಿ ಅಧಿಕಾರಿಗಳು ವಶಕ್ಕೆ ಪಡೆದರು.ಈ ಮೂವರು ಆರೋಪಿಗಳುಸೀಬರ್ಡ್ ಐಎನ್ ಎಸ್ ಕದಂಬದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು.ಬಂಧಿತರನ್ನು ರಾಷ್ಟ್ರವಿರೋಧಿ ಚಟುವಟಿಕೆಯಡಿ 2023ರಲ್ಲಿ ಹೈದ್ರಾಬಾದ್ನಲ್ಲಿ ರಾಷ್ಟ್ರೀಯ ತನಿಖಾ ದಳ ದೀಪಕ್ ಹಾಗೂ ಇತರರನ್ನು ಅರೆಸ್ಟ್ ಮಾಡಿತ್ತು . ಇವರನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದಾಗ ವಿದೇಶಿ ಅಧಿಕಾರಿಗಳಿಗೆ ಮಾಹಿತಿ ರವಾನಿಸುತ್ತಿದ್ದ ಸಂಗತಿ ಬಯಲಾಗಿತ್ತು .
ರಾಷ್ಟ್ರೀಯ ತನಿಳಾ ದಳ ದೀಪಕ್ ಹಾಗೂ ಇತರರನ್ನು ತನಿಖೆ ಮಾಡುವ ವೇಳೆ ಸುನೀಲ್ ನಾಯ್ಕ್, ಚೇತನ್ ತಾಂಡೇಲ್ ಹಾಗೂ ಅಕ್ಷಯ್ ನಾಯ್ಕ್ ಹೆಸರುಗಳನ್ನು ಬಹಿರಂಗ ಪಡಿಸಿದ್ದರು .
ಐಎನ್ ಎಸ್ ಕದಂಬ ನೌಕಾನೆಲೆಯ ಫೋಟೊ ಹಾಗೂ ಇತರ ಮಾಹಿತಿಗಳನ್ನು ದೀಪಕ್ ಮತ್ತವನ ಸಂಗಡಿಗರು ರವಾನಿಸಿರುವ ಆರೋಪ ಎದುರಿಸುತ್ತಿದ್ದಾರೆ.ದೀಪಕ್ ಗೆ ಸೀಬರ್ಡ ನೌಕಾನೆಲೆಯ ಮಾಹಿತಿ ನೀಡಿದ್ದಕ್ಕೆ ಸುನೀಲ್ ನಾಯ್ಕ್, ಚೇತನ್ ತಾಂಡೇಲ್ ಹಾಗೂ ಅಕ್ಷಯ್ ನಾಯ್ಕ ಖಾತೆಗೆ ಹಣ ಕೂಡಾ ಜಮಾ ಆಗುತ್ತಿತ್ತು ಎಂದು ಎನ್ ಐ ಎ ಹೇಳಿದೆ.