ಭಟ್ಕಳ: ಇಲ್ಲಿನ ಕರಿಕಲ್ ಧ್ಯಾನ ಮಂದಿರದಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಕೊನೆಯ ದಿನದ ಸೀಮೋಲ್ಲಂಘನ ಕಾರ್ಯಕ್ರಮ ಶುಕ್ರವಾರ ಯಶಸ್ವಿಯಾಗಿ ನಡೆಯಿತು.
ಬೆಳಿಗ್ಗೆ 9.30ಕ್ಕೆ ಕರಿಕಲ್ ಧ್ಯಾನ ಮಂದಿರದಿಂದ ಶ್ರೀಗಳನ್ನು ಬೈಕ್ ಹಾಗೂ ಕಾರಿನ ಮೂಲಕ ಶೃಂಗಾರಗೊಂಡ ವಾಹನದ ಭವ್ಯ ಮೆರವಣಿಗೆಯಲ್ಲಿ ಭಟ್ಕಳದ ಸರ್ಕಲ್ ಮಾರ್ಗವಾಗಿ ಹೈವೆ ಮೂಲಕ ಶಿರಾಲಿ ಸಾರದಹೊಳೆ ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಅಲ್ಲಿ ಶ್ರೀಗಳನ್ನು ಪೂರ್ಣ ಕುಂಭ ಸ್ವಾಗತ ಮಾಡಲಾಯಿತು.
ಬಳಿಕ ಶ್ರೀಗಳು ಸಾರದಹೊಳೆ ನದಿ ತೀರದಲ್ಲಿ ಗಂಗಾಪೂಜೆ ಮಾಡುವ ಮೂಲಕ ಗಂಗಾರತಿ ಪೂಜೆಯನ್ನು ಯಶಸ್ವಿಗೊಳಿಸಿದರು. ನಂತರ
ಶ್ರೀ ಹನುಮಂತ ದೇವರಿಗೆ ಶ್ರೀಗಳ ಸಮ್ಮುಖದಲ್ಲಿ ಪೂಜೆ ನೆರವೇರಿಸಿದರು. ನಂತರ ಸಾರದಹೋಳೆ ಹಳೆ ಕೋಟೆ ಹನುಮಂತ ದೇವಸ್ಥಾನದ ಆಡಳಿತ ಮಂಡಳಿಯಿಂದ ಶ್ರೀಗಳನ್ನು ಗೌರವಿಸಿದರು.
ನಂತರ ಪುನಃ ಶ್ರೀಗಳು ಭಟ್ಕಳದ ಕರಿಕಲ್ ಧ್ಯಾನ ಮಂದಿರಕ್ಕೆ ಮರಳಿದರು. ನಂತರ ಭಕ್ತರು ಶ್ರೀಗಳ ಪಾದಪೂಜೆ ನೆರವೇರಿಸಿದರು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.ಮೆರವಣಿಗೆ ಯ ಸಂದರ್ಭದಲ್ಲಿ ಸಚಿವ ಮಂಕಾಳ ವೈದ್ಯ, ಬೆಳ್ತಂಗಡಿ ಶಾಸಕ ಹರೀಶ ಪೂಂಜಾ, ಮಾಜಿ ಶಾಸಕ ಸುನೀಲ ನಾಯ್ಕ, ಭಟ್ಕಳ ನಾಮಧಾರಿ ಸಮಾಜದ ಅಧ್ಯಕ್ಷ ಅರುಣ ನಾಯ್ಕ, ಸಾರದಹೋಳೆ ಹಳೆ ಕೋಟೆ ಹನುಮಂತ ದೇವಸ್ಥಾನ ಅಧ್ಯಕ್ಷರು ಹಾಗೂ ನಾಮಧಾರಿ ಸಮಾಜದ ಹಿರಿಯ ಕಿರಿಯ ಮುಖಂಡರು ಪಾಲ್ಗೊಂಡಿದ್ದರು