ಮಂಗಳೂರು : ಮಂಗಳವಾರ ಸಂಜೆ ಕೂಳೂರು ಸೇತುವೆ ಬಳಿ ನಡೆದ ಅಪಘಾತದಲ್ಲಿ ಸಹಸವಾರೆ ಮೃತಪಟ್ಟಗಟನೆ ವರದಿಯಾಗಿದೆ.ಮೃತರನ್ನು ಸುರತ್ಕಲ್ ನಿವಾಸಿ ಶಕೀಲ್ ಸುವರ್ಣ ರವರ ಪತ್ನಿ ಲಾವಣ್ಯ(೨೭) ಎಂದು ಗುರುತಿಸಲಾಗಿದೆ.
ಪಣಂಬೂರಿಂದ ಕಾವೂರು ಕಡೆಗೆ ನಿನ್ನೆ ಸಂಜೆ ಸುಮಾರು 4 ಗಂಟೆಗೆ ಪತಿಜೊತೆ ದ್ವಿಚಕ್ರದಲ್ಲಿ ಪ್ರಯಾಣಿಸುತ್ತಿರುವ ವೇಳೆ ಕೂಳೂರು ಸೇತುವೆಯಲ್ಲಿ ಅತಿ ವೇಗದಿಂದ ಬಂದ ಕಂಟೈನರ್ ಲಾರಿಯೊಂದು ಬಲಭಾಗದಿಂದ ಎಡಭಾಗಕ್ಕೆ ಏಕಾಏಕಿ ಚಲಾಹಿಸಿದ್ದು ಎಡ ಬದಿಯಲ್ಲಿ ಚಲಾಹಿಸುತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ ಪರಿಣಾಮ ಲಾರಿಯ ಹಿಂಬದಿಯ ಚಕ್ರಕ್ಕೆ ಸಹಸವರೇ ಲಾವಣ್ಯ ಸಿಲುಕಿದ್ದು ಚಕ್ರ ತಲೆಯಮೇಲೆ ಹರಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಪತಿ ಬಲ ಬದಿಗೆ ಬಿದ್ದಿದ್ದು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.