ಶಿರಸಿ: ರಾಜ್ಯ ಸರ್ಕಾರವು ಕಸ್ತೂರಿರಂಗನ್ ವರದಿ ಒಪ್ಪಿಗೆಗೆ ತಾಂತ್ರಿಕ ದೋಷದ ಸ್ಪಷ್ಟನೆಗೆ ಕೇಂದ್ರ ಸರ್ಕಾರಕ್ಕೆ ಮರುಸುತ್ತೋಲೆ ರವಾನಿಸಲು ಹಾಗೂ ಜನಪ್ರತಿನಿಧಿ, ಜನಭಿಪ್ರಾಯ ವರದಿ ತಿರಸ್ಕರಿಸಲು ನೀಡಿದ ಸಲಹೆಯನ್ನು ಸರ್ಕಾರ ಮಟ್ಟದಲ್ಲಿ ಚಿಂತಿಸಲಾಗುತ್ತಿದ್ದು ಇಂದು ಸೆ.೨೬ ರಂದು ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಸರ್ಕಾರವು ಅಂತಿಮ ತೀರ್ಮಾನ ಪ್ರಕಟಿಸುವುದೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಕರಡು ಕಸ್ತೂರಿರಂಗನ್ ವರದಿ ಕುರಿತು ರಾಜ್ಯ ಸರ್ಕಾರಕ್ಕೆ ಅಭಿಪ್ರಾಯ ಮಂಡಿಸಲು ಸೆ.೩೦ ಅಂತಿಮ ಅವಧಿ ನಿರ್ದಿಷ್ಟಪಡಿಸಿತ್ತು. ಜನಪ್ರತಿನಿಧಿಗಳ ಸಭೆಯ ಮೂಲಕ ಅಭಿಪ್ರಾಯ ಕ್ರುಡಿಕರಿಸಿ ಸೆ. ೨೬ ರ ರಂದು ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಈ ಹಿನ್ನಲೆಯಲ್ಲಿ ವರದಿ ತಿರಸ್ಕರಿಸಲು ಹಿರಿಯ ಸಚಿವರನ್ನವೊಳಗೊಂಡು ಮತ್ತು ಹಿರಿಯ ಅಧಿಕಾರಿಗಳನ್ನ ಬೆಂಗಳೂರಿನಲ್ಲಿ ಇಂದು ಭೇಟಿಯ ನಂತರ ಮೇಲಿನಂತೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾರ್ವಜನಿಕವಾಗಿ ವರದಿ ಅನಿಷ್ಠಾನಕ್ಕೆ ತೀವ್ರ ತರದ ವಿರೋಧ ಇರುವುದರಿಂದ ಹಾಗೂ ಕರಡು ವರದಿಯಲ್ಲಿನ ಅಂಶಗಳು ಅವೈಜ್ಞಾನಿಕವಾಗಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದಿಂದ ಇನ್ನಷ್ಟು ಸ್ಪಷ್ಠೀಕರಣ ಬಯಸಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದೆಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ ಎಂದು ಅವರು ಹೇಳಿದರು.
ವರದಿಗೆ ಪ್ರಬಲ ವಿರುದ್ಧ ಇರುವ ಹಿನ್ನಲೆಯಲ್ಲಿ ಜನಪರ ನಿಲುವುಗಳನ್ನ ಸರ್ಕಾರ ತೆಗೆದುಕೊಳ್ಳುವುದೆಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಮತ್ತು ಹಿರಿಯ ಸಚಿವರಾದ ಸತೀಶ ಜಾರಕಿ ಹೊಳಿಯವರು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದರು ಹಾಗೂ ಸಚಿವ ಮಂಕಾಳ ವೈದ್ಯ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಯರಾದ ಆರ್.ವಿ. ದೇಶಪಾಂಡೆ ಮತ್ತು ಜಿಲ್ಲೆಯ ಇತರ ಶಾಸಕರು ವರದಿ ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದÀರು. ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ ಕುಮಾರ ಸೊರಕೆ ಚರ್ಚೆಯಲ್ಲಿ ಭಾಗವಹಿಸಿದರು.
ಮೂರು ಅಂಶ ಪರೀಶೀಲನೆ:
ಸಚಿವ ಸಂಪುಟ ಸಭೆಯಲ್ಲಿ ಅವೈಜ್ಞಾನಿಕ ಕರಡು ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕರಿಸುವುದು, ಇಗಾಗಲೇ ವಿವಿಧ ಯೋಜನೆ ಅಡಿಯಲ್ಲಿ ಘೋಷಿಸಿದ ೧೬,೧೧೪ ಚ.ದ.ರ. ಕಿ.ಮೀ ಕ್ಷೇತ್ರಕ್ಕೆ ಸೂಕ್ಷö್ಮ ಪ್ರದೇಶ ಸೀಮಿತಗೊಳಿಸುವುದು ಅಥವಾ ಸೂಕ್ಷö್ಮ ಪ್ರದೇಶದಲ್ಲಿರುವ ಖಾಸಗಿ ಮತ್ತು ಅರಣ್ಯ ಪ್ರದೇಶದಲ್ಲಿ ವಾಸ್ತವ್ಯ ಮತ್ತು ಸಾಗುವಳಿ ಕ್ಷೇತ್ರಕ್ಕೆ ಸೂಕ್ಷö್ಮ ಪ್ರದೇಶಕ್ಕೆ ವಿನಾಯತಿ ನೀಡುವೆಂಬ ಮೂರು ಅಂಶಗಳ ಕುರಿತು ಸಪುಂಟ ಸಭೆಯಲ್ಲಿ ಚರ್ಚಿಸಿ ವರದಿ ಕುರಿತು ತೀರ್ಮಾನ ತೆಗೆದುಕೊಳ್ಳುವುದೆಂಬ ಸರ್ಕಾರದಿಂದ ಅಭಿಪ್ರಾಯಗಳು ತಿಳಿದು ಬಂದಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.