ಕಾರವಾರ-ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದ ಗುಡ್ಡಕುಸಿತದಿಂದ ಮೃತಪಟ್ಟ ಕೇರಳಾ ಮೂಲದ ಅರ್ಜುನ ಇವರ ಶವವನ್ನು ಇಂದು ದಿನಾಂಕ: 27-09-2024 ರಂದು ಜಿಲ್ಲಾ ಆಸ್ಪತ್ರೆ ಕಾರವಾರದಿಂದ ಪೊಲೀಸ್ ಅರ್ಜುನ್ ಕುಟುಂಬ ಕ್ಕೆ ಹಸ್ತಾಂತರ ಮಾಡಿ ಪೊಲೀಸ ಇಲಾಖೆಯ ಸೂಕ್ತ ಬೆಂಗಾವಲಿನೊಂದಿಗೆ ಕೇರಳದ ಕ್ಯಾಲಿಕಟ್ಗೆ ತೆಗೆದುಕೊಂಡು ಹೋಗಲಾಯಿತು.
ಜುಲೈನಲ್ಲಿ ನಡೆದ ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಹಾಗೂ ಲಾರಿ ಚಾಲಕ ಅರ್ಜುನ್ ಎಂಬಾತರ ಶವ ಪತ್ತೆಯಾಗಿತ್ತು.ಅತಿಯಾದ ಮಳೆಯಿಂದಾಗಿ ಸ್ಥಗಿತಗೊಂಡಿದ್ದ ಶೋಧ ಕಾರ್ಯ ಕಳೆದ 6 ದಿನಗಳ ಹಿಂದೆ ಪುನಃ ಪ್ರಾರಂಭವಾಗಿತ್ತು. ಬಾರ್ಜ್ ಮೂಲಕ ನಡೆಸಲಾಗುತ್ತಿದ್ದ ಶೋಧಕಾರ್ಯದಲ್ಲಿ ಲಾರಿ ಹಾಗೂ ಲಾರಿಯಲ್ಲೇ ಅರ್ಜುನ್ ಶವ ಕೂಡ ಪತ್ತೆಯಾಗಿತ್ತು.
ನಾಪತ್ತೆಯಾಗಿದ್ದ ಕೇರಳದ ಅರ್ಜುನ್ ನ ಲಾರಿ ಪತ್ತೆಯಾಗಿದೆ.ಅಂಕೋಲದ ಶಿರೂರುರಲ್ಲಿ ನಡೆಯುತ್ತಿರುವ 3ನೆಹಂತದ ಕಾರ್ಯಾಚರಣೆಯಲ್ಲಿ ಕೇರಳದ ಅರ್ಜುನ್ ನ ಬೆಂಜ್ ಲಾರಿ & ಮೃತದೇಹವನ್ನು“ಡ್ರಜ್ಜಿಂಗ್ ಬೋಟ್” ಮೂಲಕ ಮೇಲೆತ್ತಲಾಗಿತ್ತು.