ಮಂಗಳೂರು: ಮಂಗಳೂರಿನಲ್ಲಿ ಯುವತಿಯೋರ್ವಳು ಸ್ಕೂಟರ್ ಸ್ಕಿಡ್ ಆಗಿ ರಸ್ತೆಗೆ ಬಿದ್ದು ಹಿಂದಿನಿಂದ ಬಂದ ಲಾರಿಯೊಂದರ ಹಿಂಬದಿ ಚಕ್ರಕ್ಕೆ ಸಿಲುಕಿ ಯುವತಿ ಮೃತಪಟ್ಟ ಘಟನೆ ರವಿವಾರ ರಂದು ನಂತೂರು ನಲ್ಲಿ ನಡೆದಿದೆ.ಅಪಘಾತದಲ್ಲಿ ಮೃತಪಟ್ಟ ಯುವತಿ ಕೋಡಿಕಲ್ ನಿವಾಸಿ ಕ್ರಿಸ್ಟಿ ಕ್ರಾಸ್ತಾ (27) ಎಂದು ಗುರುತಿಸಲಾಗಿದೆ.
ಇವರು ನಗರದ ಕಂಕನಾಡಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ರವಿವಾರ ಮಧ್ಯಾಹ್ನ ಮನೆಯಿಂದ ಆಸ್ಪತ್ರೆಯತ್ತ ದ್ವಿಚಕ್ರ ವಾಹನದಲ್ಲಿ ನಂತೂರು ಜಂಕ್ಷನ್ನಲ್ಲಿ ತೆರಳುತ್ತಿದ್ದಾಗ ಸ್ಕೂಟರ್ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದಾರೆ. ಇದೇ ವೇಳೆ ಕೇರಳ ಕಡೆಗೆ ತೆರಳುತ್ತಿದ್ದ ಮೀನು ತುಂಬಿದ ಲಾರಿಯೊಂದರ ಹಿಂಬದಿ ಚಕ್ರಕ್ಕೆ ಅವರ ತಲೆ ಸಿಲುಕಿದೆ.
ಇದರ ಪರಿಣಾಮ ಯುವತಿ ಕ್ರಿಸ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಯುವತಿ ತಂದೆ, ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.