ಭಟ್ಕಳ ಬಸ್ ನಿಲ್ದಾಣದ ಮುಂಭಾಗದ ಆವರಣದ 1 ಕೋಟಿ ರೂಪಾಯಿ ಕಾಂಕ್ರೀಟಿಕರಣ ಕಾಮಗಾರಿಗೆ ಭಟ್ಕಳ ಶಾಸಕ ಸುನೀಲ್ ಚಾಲನೆ
ಭಟ್ಕಳ: ಭಟ್ಕಳ ಬಸ್ ನಿಲ್ದಾಣದ ಮುಂಭಾಗದ ಆವರಣದಲ್ಲಿ ಕಾಂಕ್ರೀಟಿಕರಣ ಕಾಮಗಾರಿಗೆ ಭಟ್ಕಳ ಶಾಸಕ ಸುನೀಲ್ ನಾಯ್ಕ ಸರ್ಕಾರದಿಂದ 1 ಕೋಟಿ ಬಿಡುಗಡೆ ಗೊಳಿಸಿದ್ದು. ಇದರ ಕಾಮಗಾರಿ ಗುದ್ದಲಿ ಪೂಜೆಯನ್ನು ಶಾಸಕ ಸುನೀಲ ನಾಯ್ಕ ಶುಕ್ರವಾರ ನೆರವೇರಿಸಿದರು
ಭಟ್ಕಳಕ್ಕೊಂದು ಸುಸಜ್ಜಿತ ಬಸ್ ನಿಲ್ದಾಣದ ಅವಶ್ಯಕತೆ ಇದ್ದು ಅನುಗುಣವಾಗಿ ಸದ್ಯ ಸುಂದರ ಬಸ್ ನಿಲ್ದಾಣವೇನು ನಿರ್ಮಾಣಗೊಂಡಿತ್ತು. ಆದರೆ ಮಳೆಗಾಲದಲ್ಲಿ ಸುಂದರ ಬಸ್ ನಿಲ್ದಾಣದ ಎದುರು ಕೆಸರಿನ ಗದ್ದೆಯಂತಾಗಿ ಪ್ರವೇಶ ದ್ವಾರದ ಸ್ಥಿತಿ ಪ್ರಯಾಣಿಕರಿಂದ ಹಿಡಿದು ಬಸ್ ಚಾಲಕರಿಗೂ ಕಿರಿಕಿರಿಯುಂಟು ಮಾಡಿತ್ತು ಈ ಬಗ್ಗೆ ಸಾರ್ವಜನಿಕರು ಈ ಪರಿಸ್ಥಿತಿ ಸರಿಪಡಿಸಲು ಶಾಸಕ ಸುನೀಲ ನಾಯ್ಕರಿಗೆ ಈ ಹಿಂದೆ ಸಾರ್ವಜನಿಕರು ಮನವಿ ನೀಡಿದ್ದರು.
ಮಳೆ ಬಂತೆAದರೆ, ಭಟ್ಕಳ ಹೈಟೆಕ್ ಬಸ್ ನಿಲ್ದಾಣದ ಪ್ರವೇಶ ದ್ವಾರ ಕೆಸರು ಗದ್ದೆಯಾಗಿ ಮಾರ್ಪಾಡಾಗುತ್ತಿತ್ತು.. ಇನ್ನು ಬಿಸಿಲು ಬಿದ್ದರೆ ನಿಲ್ದಾಣದಿಂದ ಹೊರಗೆ ಬರುವ ಬಸ್ಸಿನ ಚಕ್ರದಲ್ಲಿ ಸಿಲುಕಿದ ಮಣ್ಣಿನಿಂದ ಧೂಳು ಸರ್ವೇ ಸಾಮಾನ್ಯವಾಗಿತ್ತು..
ಸಾರ್ವಜನಿಕ ಮನವಿಗೆ ಸ್ಪಂದಿಸಿದ ಶಾಸಕ ಸುನೀಲ ನಾಯ್ಕ ತಮ್ಮ ಅವಿರತ ಪ್ರಯತ್ನದಿಂದ 1 ಕೋಟಿ ಅನುದಾನ ಬಿಡುಗಡೆ ಗೊಳಿಸಿ ಕಾಮಗಾರಿಗೆ ಚಾಲನೆ ನೀಡಿದರು.