ಮುರುಡೇಶ್ವರ- ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾದ ಮುರುಡೇಶ್ವರದ ಆರ್ ಎನ್ ಎಸ್ ಗಾಲ್ಫ್ ಮೈದಾನದಲ್ಲಿ ನ.೨೧ರಿಂದ ೨೩ರವರೆಗೆ ರಾಜ್ಯ ಮಟ್ಟದ ಮತ್ತ್ಯ ಮೇಳ ನಡೆಯಲಿದ್ದು ರಾಜ್ಯ ಮತ್ತು ಕೇಂದ್ರ ಇಲಾಖೆಗಳ ಸುಮಾರು ೬೦ ಮಳಿಗೆಗಳು, ಖಾಸಗಿ ಕೈಗಾರಿಕೆಗಳು, ಅಕ್ಕಾರಿಸ್ಟ್ಗಳು ಮತ್ತು ಮೀನು ಕೃಷಿಗೆ ಅಗತ್ಯವಿರುವ ಪರಿಕರಗಳ ವಿತರಕರು ತಮ್ಮ ಉತ್ಪನ್ನಗಳು ಮತ್ತು ಚಟುವಟಿಕೆಗಳನ್ನು ಪ್ರದರ್ಶಿಸನ ನಡೆಯಲಿದೆ.
ಈ ಮೇಳದಲ್ಲಿ ಸುರಂಗ ಅಕ್ಕೇರಿಯಂ ಮತ್ತು ಅಲಂಕಾರಿಕ ಮೀನು ಪ್ರದರ್ಶನವು ನೂರಾರು ವಿಶಿಷ್ಟ ಮೀನು ಪ್ರಭೇದಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಅವರು ಮುರುಡೇಶ್ವರ ದಲ್ಲಿ ನಿನ್ನೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮೀನುಗಾರರು ಹಿಡಿದು ತರುವ ವಿವಿಧ ಜಾತಿಯ ಮೀನುಗಳ ಸವಿಯನ್ನು ಸವಿಯಲು ಮೀನಿನ ಖಾದ್ಯ ಮೇಳ ಆಯೋಜಿಸಲಾಗಿದೆ.ಪ್ರತಿದಿನ ಸಂಜೆ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಉಒಳ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವರು ಮತ್ತು ಶಾಸಕರು ಅಗಮಿಸುವರು ಎಂದು ತಿಳಿಸಿದ್ದಾರೆ.