ಭಟ್ಕಳ: ಸಾಲ ಮರುಪಾವತಿ ಮಾಡಲು ಸಾಧ್ಯವಾಗದ ಕಾರಣ ಅಲ್ ಮನಲ್ ಲಾಡ್ಜಿನಲ್ಲಿ ಕೆಲಸ ಮಾಡುವ ಸಂದೀಪ ನಾಯ್ಕ ಆತ್ಮಹತ್ಯೆಗೆ ಶರಣಾಗಿದ್ದಾರೆ.ಹೆಬಳೆ ಹೊನ್ನೆಗದ್ದೆಯ ಸಂದೀಪ ತಿಮ್ಮಯ್ಯ ನಾಯ್ಕ ಶಂಸುದ್ದಿನ್ ಸರ್ಕಲ್ ಬಳಿಯ ಅಲ್ ಮನಲ್ ಲಾಡ್ಜಿನಲ್ಲಿ ರಾತ್ರಿ ವೇಳೆ ಕೆಲಸ ಮಾಡುತ್ತಿದ್ದರು. ಬಳಿಕ ಬೆಳ್ಳಿಗ್ಗೆ ತೆಂಗಿನ ಗುಂಡಿಯ ಖಾಸಗಿ ಸೊಸೈಟಿಯಲ್ಲಿ ಅವರು ದುಡಿಯುತ್ತಿದ್ದರು. ಗುರುವಾರ ರಾತ್ರಿ ಎಂದಿನoತೆ ಲಾಡ್ಜ’ಗೆ ಹೋದ ಸಂದೀಪ ನಾಯ್ಕ ಶುಕ್ರವಾರ ಬೆಳಗ್ಗೆ ರೂಂ ನಂ 307ರಲ್ಲಿದ್ದ ಫ್ಯಾನ್’ಗೆ ನೇಣು ಬಿಗಿದುಕೊಂಡಿದ್ದಾರೆ.
ಪಿಎಸ್ಐ ನವೀನ ನಾಯ್ಕ, ವಿಧಿ ವಿಜ್ಞಾನ ಸ್ಥಳ ಪರಿಶೀಲನಾಧಿಕಾರಿ ರಮೇಶ, ನಗರ ಠಾಣೆಯ ಸಿಬ್ಬಂದಿ ದೀಪಕ ನಾಯ್ಕ , ಮದಾರಸಾಬ ಚಿಕ್ಕೇರಿ, ದೇವು ನಾಯ್ಕ, ಕಿರಣ ಪಾಟೀಲ್, ವಿಜಯ ಜಾಧವ ಮತ್ತು ಸ್ಥಳ ಪರಿಶೀಲನಾಧಿಕಾರಿ ರಮೇಶ ಭೇಟಿ ನೀಡಿ ಪರಿಶೀಲನೆ ನಡೆಸಿದರು.