ಭಟ್ಕಳ- ಹಿಂದೂ ಫೈರ್ ಬ್ರಾಂಡ್, ಮಾಜಿ ಕೇಂದ್ರ ಸಚಿವ , ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಬಿಜೆಪಿ ಪಕ್ಷದಿಂದ ಬಿಜೆಪಿ ಹೈಕಮಾಂಡ್ ನಾಯಕರು ಆರು ವರ್ಷಗಳ ಕಾಲ ಉಚ್ಛಾಟಿಸಿದ್ದು ಖಂಡನೀಯವಾದದ್ದು ಮತ್ತುಈ ಮೂಲಕ ಬಿಜೆಪಿ ಹೈ ಕಮಾಂಡ ಅಖಂಡ ಹಿಂದೂ ಸಮಾಜದ ಹೃದಯಕ್ಕೆ ನೋವನ್ನು ಉಂಟುಮಾಡಿ ,ಬೆಂಕಿಯನ್ನು ಇಟ್ಟಿದೆ.ಕಳೆದ ಹಲವಾರು ದಶಕಗಳಿಂದ ಹಿಂದುತ್ವವನ್ನೇ ಉಸಿರಾಗಿಸಿಕೊಂಡಿದ್ದು ಹಿಂದುತ್ವದ ನೆಲೆಯಲ್ಲಿ ಬಿಜೆಪಿ ಪಕ್ಷವನ್ನು ಗಟ್ಟಿಗೊಳಿಸುತ್ತಾ ಬಂದಿರುವ ಉತ್ತರ ಕರ್ನಾಟಕದ ಹಿಂದೂ ಹುಲಿ ಯತ್ನಾಳರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸುವ ಬಿಜೆಪಿಯ ಪಕ್ಷದ ಈ ಹಿಂದೂ ವಿರೋಧಿ ನೀತಿಯ ಹಿಂದೆ ಹಿಂದೂ ವಿರೋಧಿ ಶಕ್ತಿಗಳ ವ್ಯವಸ್ಥಿತವಾದ ಷಡ್ಯಂತ್ರ ಇರುವುದು ಸಾಬೀತಾಗಿದೆ.ಈ ಹಿಂದೂ ವಿರೋಧಿ ಶಕ್ತಿಗಳ ಜೊತೆ ಸದಾ ನಕಲಿ ಹಿಂದುತ್ವದ ಭಾಷಣ ಬಿಗಿಯುವ ಬಿಜೆಪಿಗರೂ ಕೂಡಾ ಕೈ ಜೋಡಿಸಿರುವುದು ಇದರಿಂದ ಸಾಬೀತಾಗಿದೆ.ಸಾಲು ಸಾಲು ಹಿಂದೂ ಹೋರಾಟಗಾರರನ್ನು ಪಕ್ಷದಿಂದ ಹೊರ ಹಾಕಿ ಅನ್ಯ ಪಕ್ಷದ ಅಸಂಖ್ಯಾತ ಹಿಂದೂ ವಿರೋಧಿಗಳನ್ನು ಬಿಜೆಪಿ ಪಕ್ಷದೊಳಗೆ ತುಂಬಿಕೊಳ್ಳುತ್ತಿರುವುದೂ ಬಿಜೆಪಿ ನಾಯಕರ ನಕಲಿ ಹಿಂದುತ್ವ ಎಂದು ಇದರಿಂದ ಸಾಬೀತಾಗುತ್ತಿದೆ.
ಇದನ್ನು ಅಖಂಡ ಹಿಂದೂ ಸಮಾಜ ಸಹಿಸದು.ಅಮಾಯಕ ಹಿಂದೂಗಳನ್ನು ಬಳಸಿಕೊಂಡು ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಹಿಂದೂಗಳನ್ನೇ ವ್ಯವಸ್ಥಿತವಾಗಿ ಹಿಂದೂ ವಿರೋಧಿ ಗ್ಯಾಂಗ್ ಜೊತೆ ಸೇರಿಕೊಂಡು ತುಳಿಯುತ್ತಿರುವ ಬಿಜೆಪಿ ಪಕ್ಷದ ನಾಯಕರ ಈ ಹಿಂದೂ ವಿರೋಧಿ ನೀತಿ ನಿಜಕ್ಕೂ ಆತಂಕಕಾರಿಯಾಗಿದೆ.ಈ ತಕ್ಷಣವೇ ಬಿಜೆಪಿ ಹೈಕಮಾಂಡ್ ನಾಯಕರು ಹಿಂದೂ ಫೈರ್ ಬ್ರಾಂಡ್ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಛಾಟನೆ ಆದೇಶವನ್ನು ವಾಪಾಸ್ ಪಡೆದು ಅವರನ್ನು ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ಮಾಡಬೇಕು ಹಾಗೂ ಅಖಂಡ ಹಿಂದೂ ಸಮಾಜದ ಕ್ಷಮೆ ಕೇಳಬೇಕು.ಇಲ್ಲವಾದಲ್ಲಿ ಈಗಿರುವ ೬೬ ಸೀಟ್ ಗಳಿಗಿಂತಲೂ ಹೀನಾಯ ಪರಿಸ್ಥಿತಿಯನ್ನು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಎದುರಿಸಬೇಕಾದೀತು ಎನ್ನುವ ಎಚ್ಚರಿಕೆಯನ್ನು ಬಿಜೆಪಿ ಹೈಕಮಾಂಡ್ ನಾಯಕರಿಗೆ ನೀಡುತ್ತಿದ್ದೇವೆ ಎಂದು ಉತ್ತರ ಕನ್ನಡ ಜಿಲ್ಲಾ ಹಿಂದೂ ಮುಖಂಡ ,ಹಿಂದೂ ಪರ ಹೋರಾಟಗರ ಶಂಕರ ನಾಯ್ಕ ಚೌತನಿ ತಿಳಿಸಿದ್ದಾರೆ.